Monday, December 23, 2024

Latest Posts

ಹರಕೆ ತೀರಿಸಿದ ಡಿ ಬಾಸ್ ಅಭಿಮಾನಿ…!

- Advertisement -

ಸಿನಿಮಾ ವಿಚಾರವಾಗಿಯೂ ಶುರುವಾಗಿದೆ ಪಾದಯಾತ್ರೆ. ಪ್ರೀತಿಯ ನಾಯಕನಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳದೇ ಇರಲಿ ಎಂದು ಅಭಿಮಾನಿಯೊಬ್ಬ ಪಾದಯಾತ್ರೆ ಕೈ ಗೊಂಡು ಇದೀಗ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿದ್ಧಾನೆ . ಹಾಗಿದ್ರೆ ಏನೀ ಯಾತ್ರೆಯ ಹಿನ್ನಲೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್….

ಡಿ  ಬಾಸ್ ದರ್ಶನ್ ಸಿನಿಮಾ ಕ್ರಾಂತಿ ಇದೀಗ ಅಭಿಮಾನಿಗಳಿಂದಲೇ ಪ್ರಚಾರದಲ್ಲಿ ತೊಡಗಿರೋದು ಗೊತ್ತಿರೋ ವಿಚಾರ ದೇಶ  ವಿದೇಶಗಳಲ್ಲೂ ಕ್ರಾಂತಿ ಹವಾ ಜೋರಾಗಿದೆ. ಕ್ರಾಂತಿ  ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಇಲ್ಲೊಬ್ಬ ವ್ಯಕ್ತಿ ಮಾತ್ರ ತನ್ನ ಬಾಸ್ ಸಿನಿಮಾಕ್ಕೆ ಯಾವುದೇ ಕೆಟ್ಟ ದೃಷ್ಟಿಯಾಗ  ಬಾರದು ಎಂಬ ಉದ್ದೇಶದಿಂದ ಪಾದಯಾತ್ರೆಯನ್ನೇ ಕೈಗೊಂಡಿದ್ದ.

ಯಕ್ಷಗಾನ ಕಲಾವಿದನಾದ್ರಾ ಸಿನಿಮಾ ನಟ…?

ವರ್ದನ್  ಎಂಬಾತ ದರ್ಶನ್ ಅಪ್ಪಟ  ದರ್ಶನ್ ಭಕ್ತ ಈತ  ಇದೀಗ ಆರ್ ಆರ್ ನಗರದ ನಿಮಿಷಾಂಭ ದೇವಾಲಯದಿಂದ ಚಾಮುಂಡಿ ಬೆಟ್ಟದ ವರೆಗೆ ಪಾದಯಾತ್ರೆಯನ್ನು ಕೈಗೊಂಡಿದ್ದ. ಪಾದಯಾತ್ರೆ ಕೈಗೊಂಡ  ಪ್ರತಿದಿನ  ದರ್ಶನ್ ಹೆಸರಲ್ಲಿ ಪೂಜೆ ಕೂಡಾ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಜೊತೆಗೆ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಕೂಡಾ ಮಾಡಲಾಗುವುದು ಎಂಬ ಮಾಹಿತಿಯೂ ಇತ್ತು..

ಹಾಗೆಯೇ ಅಕ್ಟೋಬರ್ 16 ರಂದು ಶ್ರೀ  ಪ್ರಸನ್ನ ಗಣಪತಿ ಸೇವಾ ಸಮಿತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರಸ್ಟ್ ಚೆನ್ನರಾಯಪಟ್ಟಣ ಇದರೊಂದಿಗೆ ಸೇರಿ ಗಣೇಶನಸನ್ನಿಧಿಯೊಂದಿಗೆ ವಿಶೇಷ ದೃಷ್ಟಿ ಪೂಜೆಯನ್ನೂ ಮಾಡಲಾಗುವುದು ಎಂದು ಹೇಳಲಾಗಿತ್ತು. ಹೀಗೆ ದರ್ಶನ್ ಗಾಗಿ ಅಭಿಮಾನಿಯೊಬ್ಬ ಪಾದಯಾತ್ರೆಯನ್ನೇ ಕೈಗೊಂಡು ಇದೀಗ RR ನಗರದಿಂದ ಚಾಮುಂಡಿ ಬೆಟ್ಟ ತಲುಪಿದ್ದಾನೆ ಡಿಬಾಸ್ ಅಭಿಮಾನಿ.

‘ಪುನೀತ್ ಫುಡ್ ಫೆಸ್ಟಿವಲ್’ ಹೇಗಿದೆ ಫುಡ್ ಮೆನು..?!

ಚಾಮುಂಡೇಶ್ವರಿ ತಾಯಿ ಗೆ ವಿಶೇಷ ಪೂಜೆ ಸಲ್ಲಿಸಿ ಡಿ ಬಾಸ್ ಅಭಿಮಾನಿ ವರ್ಧನ್ ಹರಕೆ ತೀರಿಸಿದ್ದಾರೆ. ಕೊನೆಗೂ ದಚ್ಚು ಅಭಿಮಾನಿ ಅಂದುಕೊಂಡಿದ್ದನ್ನು ಸಾಧಿಸಿ ತಮ್ಮ ಪ್ರೀತಿಯ ನಟನ ಒಳಿತಿಗಾಗಿ ವಿಭಿನ್ನ ಪ್ರಯತ್ನ ಮಾಡಿದ್ದಾನೆ.

ಇಷ್ಟೇ ಅಲ್ಲದೆ ದರ್ಶನ್  ಅಪ್ಪಟ  ಅಭಿಮಾನಿ ವರ್ಧನ್  ಕೈಯಲ್ಲಿ ಹೂವಿನ ಜೊತೆ ಜೊತೆ ಕ್ರಾಂತಿ ಸಿನಿಮಾ ದ ಫೋಟೋ ಹಿಡಿದುಕೊಂಡೇ ನಡೆದಾಡಿದ್ದು ಗಮನ ಸೆಳೆದಿದೆ. ಇವೆಲ್ಲವು ದರ್ಶನ್ ಮೇಲಿನ ಕರುನಾಡಿನ ಪ್ರೀತಿಯನ್ನು  ಬಿಂಬಿಸುತ್ತದೆ.

- Advertisement -

Latest Posts

Don't Miss