- Advertisement -
ಹೊಸ ವರ್ಷಾಚರಣೆ ಹಿನ್ನಲೆಸಂಭ್ರಮಾಚರಣೆ ನಿಷೇಧಿಸಲು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ರಾಯಚೂರಿನ ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಿದರು .
ಪಾರ್ಟಿ ಹೆಸರಿನಲ್ಲಿ ಪ್ರಾಚೀನ ಕೋಟೆಗಳು, ಪ್ರವಾಸಿ ,ಐತಿಹಾಸಿಕ ಸ್ಥಳಗಳನ್ನು ಯುವಕರು ಹಾಳು ಮಾಡುತ್ತಿದ್ದಾರೆ. ಹಾಗಾಗಿ ಈ ಬಾರಿ ನ್ಯೂ ಇಯರ್ ಗೆ ಮಧ್ಯಪಾನ ,ಪಾರ್ಟಿಗಳನ್ನು ಮಾಡದಂತೆ ಹಾಗು ಮಧ್ಯವೆಸನಿಗಳಿಂದ ಐತಿಹಾಸಿಕ ಸ್ಥಳಗಳಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು . ಜೊತೆಗೆ ಮಧ್ಯವನ್ನು ಸೇವಿಸಿ ವಾಹನಗಳನ್ನು ಅತಿ ವೇಗವಾಗಿ ಚಲಾಯಿಸಲಾಗುತ್ತಿದೆ , ಆ ಸಮಯದಲ್ಲಿ ಅಪಘಾತಗಳು ಬಹಳಷ್ಟು ಆಗಿವೆ ,ಪುಂಡರ ಹಾವಳಿ ಹೆಚ್ಚಾಗಿ ಕಂಡುಬರುತ್ತಿವೆ . ಹಾಗಾಗಿ ಹೊಸ ವರ್ಷಾಚರಣೆ ಮುನ್ನದಿನ ಮದ್ಯ ನಿಷೇಧಿಸುವಂತೆ ಒತ್ತಾಯ ಮಾಡಿದರು.
- Advertisement -