Wednesday, April 24, 2024

Latest Posts

ಯುವರಾಜ್‌ಕುಮಾರ್ ಲಾಂಚ್ ಮಾಡ್ತಿದೆ ರಾಜಕುಮಾರ ಟೀಂ..!

- Advertisement -

ಯುವರಾಜ್‌ಕುಮಾರ್ ಲಾಂಚ್ ಮಾಡ್ತಿದೆ ರಾಜಕುಮಾರ ಟೀಂ
ಅಭಿಮಾನಿಗಳು ಇವ್ರನ್ನ ಮುಂದಿನ ಪವರ್‌ಸ್ಟಾರ್ ಅಂತ ಕರೀತಿದ್ದಾರೆ. ದೊಡ್ಮನೆಯ ಈ ಚಿಕ್ಮಗ ಈಗ ಕರುನಾಡಿನ ಪವರ್ ಯುಗವನ್ನು ಮುನ್ನಡೆಸುವ ಫೈರ್ ಆಗ್ತಾರೆ ಅಂತ ಅಭಿಮಾನಿಗಳು ದೊಡ್ಡ ನಿರೀಕ್ಷೆ ಇಟ್ಟುಕೊಂಡು ಕಾದಿದ್ದಾರೆ. ಅವರೇ ಯುವರಾಜ್‌ಕುಮಾರ್ ರಾಘಣ್ಣನ ಎರಡನೇ ಪುತ್ರ ಯುವರಾಜ್‌ಕುಮಾರ್ ಮೊದಲ ಸಿನಿಮಾವನ್ನೇ ಹೊಂಬಾಳೆ ಫಿಲ್ಮ್÷್ಸ ಮಾಡ್ತಿದ್ದು ಅಣ್ಣಾವ್ರ ಕೊನೆಯ ಕಿರಿಯ ಮೊಮ್ಮಗನಿಗೆ ದೊಡ್ಡ ವೇದಿಕೆಯಂತೂ ಕ್ರಿಯೇಟ್ ಆಗಿದೆ.
ಹಾಗಾದ್ರೆ ಈ ಸಿನಿಮಾ ಡೈರೆಕ್ಟ್ ಮಾಡೋದು ಯಾರು..? ಟೈಟಲ್ ಏನು ಅನ್ನೋ ಕ್ಯೂರಿಯಾಸಿಟಿಗೆ ಕಂಪ್ಲೀಟ್ ಉತ್ತರ ಸಿಗದೇ ಇದ್ರೂ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅನ್ನೋದಂತೂ ಕನ್ಫರ್ಮ್ ಆಗಿದೆ. ಸದ್ಯ ಯುವರತ್ನ ನಂತರ ಸಂತೋಷ್ ಆನಂದ್‌ರಾಮ್ ಶಿವಣ್ಣ ಜೊತೆ ಸಿನಿಮಾ ಮಾಡ್ತಾರೆ. ಮುಂದಿನ ಸಿನಿಮಾ ಟೈಟಲ್ ರಣರಂಗ ಅನ್ನೋ ಸುದ್ದಿ ಹರಿದಾಡಿತ್ತು, ಆದ್ರೆ ಸದ್ಯಕ್ಕೆ ಯಾವುದರಲ್ಲೂ ಕ್ಲಾö್ಯರಿಟಿ ಇಲ್ಲ.
ಇನ್ನು ಅಪ್ಪು ಅಗಲಿಕೆಯ ನಂತರ ಯುವರಾಜ್‌ಕುಮಾರ್ ಅವರಲ್ಲಿ ಅಭಿಮಾನಿಗಳು ಪುನೀತ್‌ರಾಜ್‌ಕುಮಾರ್‌ರನ್ನು ಕಾಣುತ್ತಿದ್ದು, ಇನ್ನೂ ಲಾಂಚ್ ಆಗದ ಯುವ ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಹಾದಿಯಲ್ಲಿ ಮುನ್ನಡೀತಾರೆ ಅನ್ನೋ ನಿರೀಕ್ಷೆ ಇಟ್ಟಿದ್ದಾರೆ. ಇನ್ನೊಂದು ವಾರದಲ್ಲಿ ಸಂತೋಷ್ ಆನಂದ್‌ರಾಮ್-ಯುವರಾಜ್‌ಕುಮಾರ್ ಚಿತ್ರದ ಫೋಟೋಶೂಟ್ ನಡೆಯಲಿದ್ದು ಹೊಂಬಾಳೆ ಪ್ರೊಡಕ್ಷನ್ಸ್ ಕೆಜಿಎಫ್ ರಿಲೀಸ್ ಜೊತೆ ಹೊಸ ಸಿನಿಮಾಗೆ ಭರ್ಜರಿ ಓಪನಿಂಗ್ ಕೊಡಲಿದೆ.

- Advertisement -

Latest Posts

Don't Miss