ಆರೋಗ್ಯಕರ, ಗಟ್ಟಿಮುಟ್ಟಾದ ಕೂದಲು ಯಾರಿಗೆ ತಾನೇ ಬೇಡ ಹೇಳಿ. ಇಂದಿನ ಯುವ ಪೀಳಿಗೆಯಲ್ಲಿ ಹಲವರು ಒದ್ದಾಡುವುದೇ, ತಮ್ಮ ಕೂದಲಿಗಾಗಿ. ಸಿಕ್ಕಾಪಟ್ಟೆ ಕೂದಲು ಉದುರುತ್ತಿದೆ. ತುಂಬಾ ಡ್ಯಾಂಡ್ರಫ್ ಆಗಿದೆ. ಬಿಳಿ ಕೂದಲಾಗುತ್ತಿದೆ. ಹೀಗೆ ಕೂದಲ ಬಗ್ಗೆ ಹಲವಾರು ಕಂಪ್ಲೇಂಟ್ಸ್ ಇರತ್ತೆ. ಹಾಗಾಗಿ ಇಂದು ನಾವು ಮನೆಯಲ್ಲೇ ಹೇಗೆ ಹೇರ್ ಗ್ರೋತ್ ಟೋನರ್ ರೆಡಿ ಮಾಡೋದು, ಅನ್ನೋ ಬಗ್ಗೆ ಹೇಳಲಿದ್ದೇವೆ.
ಮೊದಲು ನಾಲ್ಕು ಸ್ಪೂನ್ ಅಕ್ಕಿಯನ್ನ ಒಂದು ಬೌಲ್‌ಗೆ ಹಾಕಿ. ಆ ಅಕ್ಕಿಯನ್ನ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಪಾತ್ರೆಗೆ ಆ ಅಕ್ಕಿ ಹಾಕಿ ಅದರ ಜೊತೆ ಎರಡು ಗ್ರೀನ್ ಟೀ ಬ್ಯಾಗ್, ಎರಡು ಗ್ಲಾಸ್ ನೀರು ಹಾಕಿ ಅರ್ಧ ಗಂಟೆ ನೆನೆಸಿಡಿ. ನಂತರ ಅದೇ ಪಾತ್ರೆ, ಅಥವಾ ಬೇರೆ ಪಾತ್ರೆಯಲ್ಲಿ ಹಾಗೆ ನೆನೆಸಿಟ್ಟ ಅಕ್ಕಿ ಮತ್ತು ಗ್ರೀನ್ ಟೀಯನ್ನ ನೆನೆಸಿಟ್ಟ ನೀರಿನ ಸಮೇತ, ಮಂದ ಉರಿಯಲ್ಲಿ ಬಿಸಿ ಮಾಡಬೇಕು. ಹೀಗೆ ಬಿಸಿ ಮಾಡುವಾಗ, ಪಾತ್ರೆಗೆ ಮುಚ್ಚಳ ಮುಚ್ಚಿ.
ನೀರು ಕುದಿಯಲು ಶುರುವಾಗಿ ಅನ್ನ ಬೆಂದ ಮೇಲೆ, ಅದನ್ನ ತಣ್ಣಗಾಗಲು ಬಿಡಿ. ಈಗ ತಣ್ಣಗಾದ ಅನ್ನದಿಂದ ನೀರನ್ನು ಗಾಳಿಸಿ ತೆಗೆದು, ಆ ನೀರನ್ನು ಒಂದು ಸ್ಪ್ರೇ ಬಾಟಲಿಯಲ್ಲಿ ಹಾಕಿಡಿ. ಈ ಸೇರಮ್‌ನ್ನ ನೀವು ಪ್ರತಿದಿನ ಬಳಸಬೇಕು. ಒಮ್ಮೆ ಸೇರಮ್ ಮಾಡಿದ್ರೆ, ಫ್ರಿಜ್‌ನಲ್ಲಿರಿಸಿ, 3ರಿಂದ 4 ದಿನ ಬಳಸಬಹುದು. ಇದನ್ನ ಬಳಸಿದ 5 ನಿಮಿಷ ಮೆತ್ತಗೆ ಹೆಡ್ ಮಸಾಜ್ ಮಾಡಿ, 10 ನಿಮಿಷದ ಬಳಿಕ, ಕೂದಲು ಬಾಚಿ.
ಇದನ್ನ ಪ್ರತಿದಿನ ಬಳಸಿದ್ರೆ ಮಾತ್ರ ಇದರ ಲಾಭ ಪಡೆಯಲು ಸಾಧ್ಯ. ಇನ್ನು ಇದನ್ನ ತೆಲೆಗೆ ಹಚ್ಚಿದ್ದೀರೆಂದು ಯಾರಿಗೂ ತಿಳಿಯುವುದಿಲ್ಲ. ಇದು ಹಚ್ಚಿದ ಕೆಲ ಹೊತ್ತಿನಲ್ಲೇ ಒಣಗಿಹೋಗುತ್ತದೆ. ಇನ್ನು ಇದನ್ನು ಹಚ್ಚಿದ್ರೂ ಕೂಡ, ನೀವು ಸ್ನಾನ ಮಾಡುವ ಕೆಲ ಗಂಟೆಗಳ ಮೊದಲು ಎಣ್ಣೆಯಿಂದ ಹೆಡ್ ಮಸಾಜ್ ಮಾಡಿ, ಸ್ನಾನ ಮಾಡಬೇಕು. ದಿನಕ್ಕೆ ಮೂರು ಬಾರಿ, ತಲೆ ಬಾಚಿಕೊಳ್ಳುವುದರಿಂದ, ರಕ್ತ ಸಂಚಾರ ಹೆಚ್ಚುತ್ತದೆ. ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಆದರೆ ರಫ್ ಆಗಿ ಬಾಚಿಕೊಳ್ಳಬಾರದಷ್ಟೇ. ಇನ್ನು ನಿಮಗೆ ಇಲ್ಲಿ ಹೇಳಿರುವ ಸೇರಮ್ ಹಚ್ಚಿದ್ರೆ ಅಲರ್ಜಿ ಆಗುತ್ತದೆ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ಕೇಳಿ, ನಂತರ ಬಳಸುವುದು ಉತ್ತಮ.