ಹುಬ್ಬಳ್ಳಿ: ಯಾವುದೇ ಕಾರಣಕ್ಕೂ ಭಾರತ್ ಬಂದ್ ಯಶಸ್ವಿಯಾಗಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ರೈತ ವಿರೋಧಿ ಕಾಯಿದೆಯನ್ನು ಜಾರಿಗೆ ತಂದಿಲ್ಲ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ, ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ನೇತೃತ್ವದಲ್ಲಿ ಯಾವುದೇ ರೈತ ವಿರೋಧಿ ಕಾಯಿದೆಯನ್ನು ಜಾರಿಗೆ ತಂದಿಲ್ಲ. ಈ ಎಲ್ಲ ಕಾಯಿದೆಯಿಂದ ರೈತ ಸಮುದಾಯಕ್ಕೆ ಲಾಭ ಆಗುತ್ತದೆ ಅಂತ ರೈತರಿಗೂ ತಿಳಿದಿದೆ. ಹೀಗಾಗಿ ಇಂದಿನ ಬಂದ್ ಗೆ ರೈತರು ಬೆಂಬಲ ನೀಡೋದಿಲ್ಲ. ಹೀಗಾಗಿ ಬಂದ್ ಯಶಸ್ವಿಯಾಗಲ್ಲ ಅಂತ ಹೇಳಿದ್ದಾರೆ.
ಇನ್ನೂ ಆನ್ ಲೈನ್ ಜೂಜಾಟದ ಬಗ್ಗೆ ಮಾತನಾಡಿದ ಅವರು ಈಗಾಗಲೇ ಎಲ್ಲ ರೀತಿಯ ಆನ್ ಲೈನ್ ಜೂಜಾಟಕ್ಕೆ ಬ್ರೇಕ್ ಹಾಕಲು ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸ್ ಇತಿಹಾಸದಲ್ಲಿಯೇ ಇಂತಹೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಯಾವುದೇ ಆನ್ ಲೈನ್ ಜೂಜಾಟದ ವೇದಿಕೆಗಳಿದ್ದರೂ ಅವುಗಳನ್ನು ಬ್ಯಾನ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಟಿವಿ, ಹುಬ್ಬಳ್ಳಿ