Saturday, July 27, 2024

Latest Posts

ಮೂಗಿನಿಂದ ರಕ್ತ ಸೋರುತ್ತಿದ್ದರೆ ಅದರ ಚಿಕಿತ್ಸೆ ಹೇಗೆ ಮಾಡಬೇಕು..?

- Advertisement -

ಕೆಲವರಿಗೆ ಸಡನ್ನಾಗಿ ಮೂಗಿನಿಂದ ರಕ್ತ ಸೋರುತ್ತದೆ. ಕೆಲವರು ಇದನ್ನು ಕ್ಯಾನ್ಸರ್‌ನ ಲಕ್ಷಣವೆಂದು ತಿಳಿಯುತ್ತಾರೆ. ಆದ್ರೆ ಮೂಗಿನಿಂದ ರಕ್ತ ಸುರಿದಾಕ್ಷಣ ಕ್ಯಾನ್ಸರ್ ಅಂತಾ ಹೇಳಲಾಗುವುದಿಲ್ಲ. ಆದ್ರೆ ಮೊದಲು ಅದರ ಸೂಚನೆ ಸಿಕ್ಕರೂ ಕೂಡ, ಅದನ್ನ ನೀವು ನಿರ್ಲಕ್ಷಿಸುವಂತಿಲ್ಲ. ಆದ್ರೆ ಇದೇನು ದೊಡ್ಡ ರೋಗವಲ್ಲ. ಹಾಗಾದ್ರೆ ಇದಕ್ಕೆ ಮನೆ ಮದ್ದು ಮಾಡಿ ಇದನ್ನು ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

ಎಲ್ಲ ಸಮಯದಲ್ಲೂ ಖುಷಿಯಾಗಿರಬೇಕು ಅಂದ್ರೆ ಈ ಕಥೆ ಓದಿ..

ದೇಹದಲ್ಲಿ ಉಷ್ಣ ಹೆಚ್ಚಾದಾಗ, ಕೆಲವೊಮ್ಮೆ ಗರ್ಭಾವಸ್ಥೆಯಲ್ಲಿರುವಾಗ, ಚಳಿಗಾಲದಲ್ಲಿ, ಬೇಸಿಗೆಯಲ್ಲಿ ಕೆಲವರಿಗೆ ಮೂಗಿನಿಂದ ರಕ್ತ ಸುರಿಯುತ್ತದೆ. ಹೈ ಬ್ಲಡ್ ಪ್ರೆಶರ್ ಇದ್ದಾಗಲೂ ಈ ಸಮಸ್ಯೆ ಕಾಡುತ್ತದೆ. ದೇಹದಲ್ಲಿರುವ ರಕ್ತ ನೀರಾಗಲಿ ಎಂದು ಕೆಲವರು ಗುಳಿಗೆ ತೆಗೆದುಕೊಳ್ಳುತ್ತಾರೆ. ಹಾಗೆ ಗುಳಿಗೆ ತೆಗೆದುಕೊಂಡಾಗಲೂ ಮೂಗಿನಿಂದ ರಕ್ತ ಸೋರುತ್ತದೆ.

ಇನ್ನು ಕೆಲವರಿಗೆ ಪದೇ ಪದೇ ನೆಗಡಿಯಾಗಿ ಅಥವಾ ಸೈನಸ್ ಸಮಸ್ಯೆ ಬಂದು ಮೂಗಿನಿಂದ ರಕ್ತ ಬರುತ್ತದೆ. ಮದ್ಯಪಾನ ಧೂಮಪಾನವನ್ನು ಹೆಚ್ಚು ಮಾಡುವುದು ಕೂಡ ಈ ಸಮಸ್ಯೆಗೆ ಕಾರಣವಾಗಿದೆ. ದೇಹದಲ್ಲಿ ವಿಟಾಮಿನ್ ಸಿ, ಮತ್ತು ಕೆ ಕಡಿಮೆ ಇದ್ದಾಗ ಹೀಗೆ ಆಗುತ್ತದೆ. ಹೀಗೆ ಸಡೆನ್ ಆಗಿ ಮೂಗಿನಿಂದ ರಕ್ತ ಬಂದರೆ, ತಲೆಯನ್ನು ಬಾಗಿಸಬೇಕು. ಮತ್ತು ಸ್ವಚ್ಛ ಬಟ್ಟೆಯನ್ನ ಮೂಗಿಗೆ ಹಿಡಿದುಕೊಳ್ಳಬೇಕು. ಅದನ್ನು ಬಿಟ್ಟು ಮಲಗುವುದು, ಕರ್ಛಿಫ್ನಿಂದ ರಫ್ ಆಗಿ ಉಜ್ಜಿಕೊಳ್ಳುವುದು ಮಾಡಬೇಡಿ.

ಈ ಸಂಗತಿಗಳನ್ನು ತಿಳಿಯದಿದ್ದಲ್ಲಿ ಬಡವರಾಗಿಯೇ ಉಳಿಯುತ್ತೀರಿ.. ಅರ್ಥಪೂರ್ಣ ಕಥೆ.. ಭಾಗ 2

ಇನ್ನು ನಿಮಗೆ ಉಷ್ಣತೆಯಿಂದ ಮೂಗಿನಿಂದ ರಕ್ತ ಬಂದಲ್ಲಿ, ತಲೆ ಮೇಲೆ ತಣ್ಣೀರು ಹಾಕಿಕೊಳ್ಳಬೇಕು. ಅಲ್ಲದೇ ಒಂದು ಬಟ್ಟೆಯಲ್ಲಿ ಐಸ್ ಕ್ಯೂಬ್ಸ್ ಇಟ್ಟುಕೊಂಡು ಕೆಲ ಹೊತ್ತು ಮೂಗಿನ ಬಳಿ ಇಟ್ಟುಕೊಳ್ಳಿ.  ರಕ್ತ ಸೋರಿದ ಬಳಿಕ ಮೂಗನ್ನು ಕ್ಲೀನ್ ಮಾಡಿಕೊಂಡು, ಈರುಳ್ಳಿಯನ್ನ ಕತ್ತರಿಸಿ, ಅದನ್ನ ಮೂಗಿನ ಬಳಿ ಇಟ್ಟುಕೊಳ್ಳಿ.

ಆದ್ರೆ ಒಂದು ಮುಖ್ಯವಾದ ವಿಷಯವಿದೆ. ಅದೇನಂದ್ರೆ ನೀವು ಎಲ್ಲ ಮನೆ ಮದ್ದು ಮಾಡಿದ್ರೂ ಮೂಗಿನಿಂದ ರಕ್ತ ಸುರಿಯುವುದು ನಿಲ್ಲುತ್ತಿಲ್ಲವೆಂದಲ್ಲಿ, ನಿರ್ಲಕ್ಷ್ಯ ಮಾಡದೇ, ಖಂಡಿತ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ.

- Advertisement -

Latest Posts

Don't Miss