Horoscope: ಆಗಸ್ಟ್ ತಿಂಗಳಲ್ಲಿ ಮೇಷ ರಾಶಿಯವರ ಜೀವನ ಹೇಗಿರಲಿದೆ..? ಈ ತಿಂಗಳ ಫಲಾಫಲಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಗೊಟ್ಟಿಗೆರೆ ಶಿವಣ್ಣ ಅವರು ವಿವರಿಸಿದ್ದಾರೆ ನೋಡಿ.
ಮೇಷ ರಾಶಿಗೆ ಸದ್ಯ ಸಾಡೇಸಾತಿ ನಡೆಯುತ್ತಿದೆ. ಹಾಗಾಗಿ ಶನಿಜಪ ಮಾಡುವುದು ಅತೀ ಉತ್ತಮ. ಇದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಆದರೆ ಶನಿಯ ಅನುಗ್ರಹ ಕಡಿಮೆ ಇರುವ ಕಾರಣಕ್ಕೆ, ಶನಿ ಜಪ ಮಾಡುವುದು ಉತ್ತಮ.
ಹತ್ತಿರದಲ್ಲಿ ಶನಿ ದೇವಸ್ಥಾನವಿದ್ದಲ್ಲಿ, ಶನಿವಾರದಂದು ದೇವಸ್ಥಾನಕ್ಕೆ ಹೋಗಿ, ಪೂಜೆ ಸಲ್ಲಿಸಿ, ದೇವರ ದರ್ಶನ ಮಾಡುವುದು ಅತೀ ಉತ್ತಮ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




