Horoscope: ಆಗಸ್ಟ್ ತಿಂಗಳಲ್ಲಿ ವೃಷಭ ರಾಶಿಯವರ ಜೀವನ ಹೇಗಿರಲಿದೆ..? ಈ ತಿಂಗಳ ಫಲಾಫಲಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಗೊಟ್ಟಿಗೆರೆ ಶಿವಣ್ಣ ಅವರು ವಿವರಿಸಿದ್ದಾರೆ ನೋಡಿ.
ಈ ತಿಂಗಳು ವೃಷಭ ರಾಶಿಯವರು ಕೇತುವಿನಿಂದ ಹುಷಾರಾಗಿರಬೇಕು. ಏಕೆಂದರೆ, ಕೇತು ನಿಮ್ಮ ಬಾಯಿಯಲ್ಲಿ ಆಡಬಾರದ ಮಾತನ್ನಾಡಿಸಬಹುದು. ಮಾಡಬಾರದ ಕೆಲಸ ಮಾಡಿಸಬಹುದು. ಸುಮ್ಮ ಸುಮ್ಮನೆ ಇನ್ನ“ಬ್ಬರ ಮೇಲೆ ಆರೋಪ ಮಾಡುವ ಮುನ್ನ ಹುಷಾರಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ವೃಷಭ ರಾಶಿಯವರು ಈ ತಿಂಗಳು ತಾಳ್ಮೆಯಿಂದ ಇರಬೇಕು.
ಕೇತು ಜಪ ಮಾಡಿದರೆ ಇನ್ನೂ ಉತ್ತಮ. ಇನ್ನು ಹಣದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಎಚ್ಚರಿಕೆಯಿಂದ ಹಣ ಖರ್ಚು ಮಾಡಬೇಕು. ಸಾಲ ನೀಡುವ ಮುನ್ನ ಅಥವಾ ಪಡೆಯುವ ಮುನ್ನ ಹೆಚ್ಚು ಯೋಚಿಸಿ. ಇನ್ನು ನೆಮ್ಮದಿ, ಆರ್ಥಿಕ ಫಲ, ಲಕ್ ಎಲ್ಲದ್ದಕ್ಕೂ ನೀವು ಗಣಪತಿಯನ್ನು ಆರಾಧಿಸಿ. ಪ್ರತಿದಿನ 108 ಬಾರಿ ಗಂ ಗಣಪತಿಯೇ ನಮಃ ಎಂದು ನಾಮಸ್ಮರಣೆ ಮಾಡಿ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




