Horoscope: ಈ ರಾಶಿಯವರು ಜಗಳವಾಡುವುದರಲ್ಲಿ ಹೆಚ್ಚು ಆಸಕ್ತಿಯುಳ್ಳವರು

Horoscope: ಕೆಲವು ರಾಶಿಗಳಿಗೆ ಬೇಗ ಕೋಪ ಬರುತ್ತದೆ. ಇವರು ಜಗಳವಾಡಲು ಶುರು ಮಾಡಿದ್ರೆ, ಇಡೀ ಮನೆಯ ವಾತಾವರಣ ಹಾಳಾಗಿ ಹೋಗುತ್ತದೆ. ಅಂಥ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ. ಹಾಗೆಂದು ಈ ರಾಶಿಯವರು ಕೆಟ್ಟವರು ಎಂದಲ್ಲ. ಬದಲಾಗಿ ಇವರು ತಮ್ಮ ಜಗಳ ಮಾಡುವ ಸ್ವಭಾವ ಮತ್ತು ಕೋಪದ ಗುಣವನ್ನು ನಿಯಂತ್ರಣದಲ್ಲಿರಿಸಬೇಕು.

ಮೇಷ: ಮೇಷ ರಾಶಿಯವರು ಹೆಚ್ಚು ತಾಳ್ಮೆ ಉಳ್ಳವರು. ಆದರೆ ಇವರು ತಾಳ್ಮೆ ಕಳೆದುಕ“ಂಡರೆ, ಸಂಬಂಧ ಹಾಳಾಗುವ ಮಟ್ಟಿಗೆ ಜಗಳವಾಡುತ್ತಾರೆ. ತಾಳ್ಮೆ ಇಲ್ಲದಿದ್ದಾಗ, ಯೋಚನಾ ಶಕ್ತಿಯೂ ಇಲ್ಲದಂತಾಗುತ್ತದೆ.

ಮಿಥುನ: ಮಿಥುನ ರಾಶಿಯವರು ಮೃದು ಸ್ವಭಾವದವರು. ಕಾಳಜಿ, ಪ್ರೀತಿ ತೋರುವುದರಲ್ಲಿ 1 ಕೈ ಮುಂದೆ. ಸ್ನೇಹಿತರು-ಸಂಬಂಧಿಕರ ಸಹಾಯಕ್ಕೆ ಸದಾ ಸಿದ್ಧರಾಗಿರುತ್ತಾರೆ. ಇವರು ಕೋಪ ಮಾಡುವುದು ಕಡಿಮೆ. ಆದರೆ ಕೋಪ ಬಂದಾಗ ಇವರ ಎದುರು ನಿಂತು ಮಾತನಾಡಲು ಯಾರಿಗೂ ಸಾಧ್ಯವಿಲ್ಲ.

ಸಿಂಹ: ಯಾವಾಗಲೂ ಹೇಳುವಂತೆ ಇವರು ನಾಯಕತ್ವದ ಗುಣ ಇರುವವರು. ಸದಾ ರಾಜನಂತಿರಲು ಬಯಸುವ ಇವರು ಸುಮ್ಮ ಸುಮ್ಮನೆ ಯಾರ ಸುದ್ದಿಗೂ ಹೋಗುವವರಲ್ಲ. ಆದರೆ ಇವರ ಸುದ್ದಿಗೆ ಬಂದವರನ್ನು ಇವರು ಸುಮ್ಮನೆ ಬಿಡುವುದಿಲ್ಲ. ಆದರೆ ಇವರಿಗೆ ಬಹುಬೇಗ ಕೋಪ ಬರುತ್ತದೆ. ಜಗಳವಾಡಲು ನಿಂತರೆ ಗೆಲ್ಲುವವರೆಗೂ ಬಿಡುವವರಲ್ಲ.

ವೃಶ್ಚಿಕ: ಗಂಭೀರ ಸ್ವಭಾವದ ವೃಶ್ಚಿಕ ರಾಶಿಯವರಿಗೆ ಕೋಪ ಹೆಚ್ಚು. ತಾಳ್ಮೆ ಕಡಿಮೆ. ಮತ್ತು ಮಾತನ್ನು ಅಪಾರ್ಥ ಮಾಡಿಕ“ಳ್ಳುವುದು ಕೂಡ ಹೆಚ್ಚು. ಹೀಗಾಗಿ ವೃಶ್ಚಿಕ ರಾಶಿಯವರು ಜಗಳವಾಡುವುದರಲ್ಲಿ ನಿಸ್ಸೀಮರು ಎನ್ನಬಹುದು.

ಕನ್ಯಾ: ಎಲ್ಲ ವಿಷಯದಲ್ಲೂ ಪರ್ಫೆಕ್ಟ್ ಆಗಿರಬೇಕು ಎಂದು ಬಯಸುವ ಕನ್ಯಾ ರಾಶಿಯವರಿಗೆ ಬಹುಬೇಗ ಕೋಪ ಬರುತ್ತದೆ. ಕೆಲವು ಬಾರಿ ಎದುರಿನವರ ತಪ್ಪನ್ನು ಇದ್ದುದನ್ನು ಇದ್ದ ಹಾಗೆ ಹೇಳಿ ಬಿಡುವ ಗುಣವೇ ಜಗಳಕ್ಕೆ ಕಾರಣವಾಗುತ್ತದೆ.

About The Author