ಎಲ್ಲರಿಗೂ ಕಾಸ್ಟ್ಲಿ ವಸ್ತುಗಳನ್ನ ತೆಗೆದುಕೊಳ್ಳಬೇಕು ಮತ್ತು ಬಳಸಬೇಕು ಅನ್ನೋ ಆಸೆ ಇರತ್ತೆ. ಆದ್ರೆ ಅದಕ್ಕೆ ಆರ್ಥಿಕ ಪರಿಸ್ಥಿತಿ ಅಡ ಬರತ್ತೆ. ಕೆಲವರು ಅದರ ಅವಶ್ಯಕತೆ ನಮಗಿಲ್ಲ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರು ಅದಕ್ಕಾಗಿ ಹಣ ಪೋಲು ಮಾಡಿ, ಅದನ್ನ ಖರೀದಿಸುತ್ತಾರೆ. ಹಾಗಾದ್ರೆ ದುಡ್ಡು ಉಳಿಸೋದು ಹೇಗೆ..? ಅವಶ್ಯಕತೆ ಇಲ್ಲದ ಖರ್ಚುಗಳನ್ನು ಕಡಿಮೆ ಮಾಡುವುದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಜಾಣ ಜಗ್ಗ ಮತ್ತು ಪೆದ್ದ ಪರಮನೆಂಬ ಹುಡುಗರಿದ್ದರು. ಒಂದು ದೊಡ್ಡ ಆ್ಯಡ್ ಬೋರ್ಡ್ ನೋಡಿ, ಅದರಲ್ಲಿರುವ ಸ್ಮಾರ್ಟ್ ವಾಚ್ ಖರೀದಿಸಬೇಕು ಅಂತಾ ಇಬ್ಬರಿಗೂ ಅನ್ನಿಸಿತು. ಪೆದ್ದ ಪರಮ ಮರುದಿನವೇ ಆ ವಾಚನ್ನ ಆರ್ಡರ್ ಮಾಡಿದ. ಖರೀದಿಸಿದ. ಜಾಣ ಜಗ್ಗನ ಮುಂದೆ ಅದನ್ನ ಹಾಕಿಕೊಂಡು ನಾನೇ ಮೊದಲು ಆ ವಾಚನ್ನ ಖರೀದಿಸಿದೆ ಎಂದು ಬೀಗಿದ. ಕೆಲ ದಿನಗಳಲ್ಲೇ ಅದನ್ನ ಮೂಲೆಗೆಸೆದ.
ನಿಮ್ಮ ಮನೆಯಲ್ಲಿ ಹೀಗೆ ಪೂಜೆ ಮಾಡಿದರೆ…ನಿಮ್ಮ ಪೂಜೆ ದೇವರಿಗೆ ತಲುಪುತ್ತದೆ..!
ಆದರೆ ಜಾಣ ಜಗ್ಗನಿಗೂ ಆ ವಾಚನ್ನ ಖರೀದಿಸಬೇಕು ಅಂತಾ ಆಸೆ ಇತ್ತು. ಆದ್ರೆ ಅವನು ಅದನ್ನು ಖರೀದಿಸಲಿಲ್ಲ. ಯಾಕಂದ್‌ರೆ ಅವನು ತನ್ನ ಮುಂದೆ ಕೆಲವೊಂದು ಪ್ರಶ್ನೆಯನ್ನಿಟ್ಟುಕೊಂಡ. ಈ ವಸ್ತುವಿನ ಅವಶ್ಯಕತೆ ನನಗೆ ಹೆಚ್ಚಾಗಿದೆಯಾ..? ಇದರ ಬದಲು ನಾನೆಂಥ ವಾಚನ್ನ ಖರೀದಿಸಬಹುದು..? ಆ ವಾಚು ಖರೀದಿಸುವುದರಿಂದ ನನಗೇನು ಲಾಭ..? ಹೀಗೆ ಕೆಲವು ಪ್ರಶ್ನೆಗಳು ಅವನ ಎದುರು ಬಂದವು.
ಅದಕ್ಕೆ ಉತ್ತರವಾಗಿ, ನಾನು ಬರೀ ಶೋಕಿಗಾಗಿ ಆ ವಾಚನ್ನ ಖರೀದಿಸಬೇಕಷ್ಟೇ. ಮೊಬೈಲ್ ಮೂಲಕವೂ ನಾನು ಸ್ಮಾರ್ಟ್ ವಾಚ್ ಮಾಡುವ ಕೆಲಸವನ್ನ ಮಾಡಬಹುದು. ಒಂದು ಸಿಂಪಲ್ ವಾಚ್ ಇದ್ದರೆ, ಅದರಿಂದಲೂ ಸಮಯ ನೋಡಬಹುದು. ಅದೇ ದುಡ್ಡನ್ನ ಹೊಂದಿಸಿಟ್ಟರೆ, ಉತ್ತಮ ಕಾರ್ಯಕ್ಕೆ ಸಹಾಯವಾಗಬಹುದು ಎಂದು ಉತ್ತರ ಪಡೆದುಕೊಳ್ಳುತ್ತಾನೆ.
ಯಮನನ್ನೇ ಗೊಂದಲಕ್ಕೆ ತಳ್ಳಲು ಹೋದ ಅಹಂಕಾರಿ ಕಲಾಕಾರನಿಗೆ ಸಾವು ಸಂಭವಿಸಿದ ಕಥೆ..
ಇದೇ ರೀತಿ ನಾವು ಕೂಡ ಕೆಲವು ವಸ್ತುಗಳನ್ನ ಖರೀದಿಸುವಾಗ ಯೋಚಿಸಬೇಕು. ಆ ವಸ್ತುವಿನ ಅವಶ್ಯಕತೆ ಇದೆಯಾ..?ಅದನ್ನು ಖರೀದಿಸದೇ, ನಾನು ಹೇಗೆ ಮ್ಯಾನೇಜ್ ಮಾಡಬಹುದು..? ಆ ದುಡ್ಡನ್ನ ಕೂಡಿಟ್ಟರೆ ನನಗೆ ಮುಂದೆ ಹೇಗೆ ಸಹಾಯವಾಗಬಹುದು ಎನ್ನುವ ಪ್ರಶ್ನೆಯನ್ನು ನಾವು ನಮ್ಮ ಮುಂದಿಟ್ಟುಕೊಂಡು, ತಾಳ್ಮೆಯಿಂದ ಯೋಚಿಸಿದರೆ, ಖರ್ಚು ಕಡಿಮೆ ಮಾಡಬಹುದು.