- Advertisement -
ಕಲಬುರಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಡೈಲಾಗ್ ಹೊಡೆಯೋ ಮೂಲಕ ಸಿಎಂ ಕುಟುಂಬವನ್ನು ಟೀಕಿಸಿದ್ದಾರೆ.
ಕಲಬುರಗಿಯ ಕಾಳಗಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಯತ್ನಾಳ್ ಮಿಮಿಕ್ರಿ ಮಾಡಿದ್ರು. ‘ನಿಖಿಲ್ ಎಲ್ಲಿದ್ದೀಯಪ್ಪಾ? ನಿನ್ನನ್ನು, ನನ್ನ ತಾತನನ್ನ ಬೆಳಸಿದ ಜನಗಳ ತಲೆ ಬೋಳಿಸೋದಕ್ಕೆ ಬಂದಿದ್ದೀನಪ್ಪಾ’ ಅಂತ ಮಿಮಿಕ್ರಿ ಮಾಡೋ ಮೂಲಕ ಸಿಎಂ ಕುಮಾರಸ್ವಾಮಿ ಕುಟುಂಬವನ್ನ ವ್ಯಂಗ್ಯ ಮಾಡಿದ್ರು.
ಡೈಲಾಗ್ ಹೇಳುತ್ತಿದ್ದಂತೆ ಯತ್ನಾಳ್ ಅಭಿಮಾನಿಗಳು ಶಿಳ್ಳೆ,ಚಪ್ಪಾಳೆ ಹೊಡೆದು ಕುಣಿದಾಡಿದ್ರು. ಸಿಎಂ ಹೇಳಿದ ಆ ಒಂದು ಡೈಲಾಗ್ ಅವರ ಬೆಂಬಿಡದಂತೆ ಕಾಡುತ್ತಿದೆ.
- Advertisement -