Tuesday, October 3, 2023

Latest Posts

ಶ್ರೀಲಂಕಾದಲ್ಲಿ ಹಿಂಸಾಚಾರ ಹಿನ್ನೆಲೆ- ಕರ್ಫ್ಯೂ ಜಾರಿ, ಸಾಮಾಜಿಕ ಜಾಲತಾಣಗಳು ಬ್ಯಾನ್

- Advertisement -

ಕೊಲಂಬೊ: ಶ್ರೀಲಂಕಾದಲ್ಲಿ ಉಗ್ರರ ದಾಳಿ ಹಿನ್ನೆಯಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆ ಬಳಿಕ ಕೋಮು ಹಿಂಸಾಚಾರ ಭುಗಿಲೆದ್ದಿದೆ. ಹೀಗಾಗಿ ಶ್ರೀಲಂಕಾದಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಏಪ್ರಿಲ್ 21ರ ಈಸ್ಟರ್ ಸಂಡೇಯಂದು ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ 260 ಮಂದಿ ಬಲಿಯಾಗಿದ್ರು. ಬಳಿಕ ಉಗ್ರರನ್ನು ಮಟ್ಟ ಹಾಕಲು ಶ್ರೀಲಂಕಾ ಸೇನೆ ಕಾರ್ಯಾಚರಣೆ ನಡೆಸಿತ್ತು. ಇದರ ಬೆನ್ನಲ್ಲೇ ಉಂಟಾಗಿರೋ ಕೋಮು ಸಂಘರ್ಷದಿಂದ ಶ್ರೀಲಂಕಾ ಕಾದ ಕಾವಲಿಯಂತಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀಲಂಕದಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿದೆ. ಚರ್ಚ್ ಮೇಲಿನ ದಾಳಿ ನಂತರ ಪ್ರಚೋದನಕಾರಿ ಪೋಸ್ಟ್ ಗಳು ಹರಿದಾಡುತ್ತಿರೋದ್ರಿಂದ ಮುಂಜಾಗ್ರತಾ ಕ್ರಮವಾಗಿ ವಾಟ್ಸಾಪ್, ಟ್ವಿಟ್ಟರ್, ಫೇಸ್ ಬುಕ್ ಸೇರಿದಂತೆ ಮುಂತಾದ ಸಾಮಾಜಿಕ ಜಾಲತಾಣಗಳನ್ನು ನಿನ್ನೆಯಿಂದಲೇ ನಿಷೇಧಿಸಲಾಗಿದೆ.

- Advertisement -

Latest Posts

Don't Miss