- Advertisement -
ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರಕ್ಕೆ ಬಂದಿದ್ದ ಚಾಲೆಂಚಿಂಗ್ ಸ್ಟಾರ್ ದರ್ಶನ್ ಮತ್ತು ಯಶ್ ವಿರುದ್ಧ ಸದಾ ಕಿಡಿ ಕಾರುತ್ತಿದ್ದ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಇದೀಗ ಮತ್ತೆ ಟೀಕೆ ಮಾಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಶಾಸಕ, ಇಲ್ಲಿದೆ ಬಂದ ಸಿನಿಮಾ ಸ್ಟಾರ್ ಗಳು ಬಿಟ್ಟಿದ್ದು ಬರೀ ಗಾಳಿಪಟ ಹವಾ. ಈಗ ಅವರು ಎಲ್ಲಿಗೆ ಹೋಗಿದ್ದಾರೆ? ರೈತರ ಕಷ್ಟಕ್ಕೆ ನಾವೇ ಆಗಬೇಕು. ಸಿನಿಮಾ ಸ್ಚಾರ್ ಗಳು ಬರೀ ಭಾಷಣ ಬಿಗೀತಿದ್ರು. ಈಗ ನಾವಾಗೇ ಹೋಗಿ ಅವ್ರನ್ನ ಕರೆದುಕೊಂಡು ಬಂದ್ರೆ ಮಾತ್ರ ಅವರು ಬರ್ತಾರೆ. ಅವರು ಯಾರಿಗಾದ್ರೂ ಒಂದು ಬೋರ್ ವೆಲ್ ಆದ್ರೂ ತೆಗೆಸಿಕೊಟ್ಚಿದ್ದಾರಾ, ಹೋಗ್ಲಿ ಒಬ್ಬ ರೈತನಿಗೆ ಉಳುಮೆಗೆ ದನಗಳನ್ನಾದ್ರೂ ತಂದುಕೊಟ್ರಾ ಅಂತ ಶಾಸಕ ನಾರಾಯಣಗೌಡ ಟೀಕಿಸಿದ್ದಾರೆ.
- Advertisement -