Hubli News: ಹೆಂಡತಿ ಕಾಟಕ್ಕೆ ಬೇಸತ್ತು ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಮಾಡಿಕೊಂಡ ಆತ್ಮಹತ್ಯೆ
ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ಪುರುಷ ಪರ ಕಾನೂನು ಜಾರಿ ಆಗಬೇಕೆಂಬ ಆಗ್ರಹ ಸಹ ಕೇಳಿಬಂದಿತ್ತು. ಈಗ ಇದು ಮಾಸುತ್ತಲೇ ಮತ್ತೋರ್ವ ಗಂಡ ಹೆಂಡತಿ ಕಿರುಕುಳ ತಾಳದೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಸಾವಿನ ಡೆತ್ ನೋಟ್ ಬರೆದಿಟ್ಟಿದ್ದು ಮಾತ್ರವಲ್ಲದೆ, ಹೆಂಡತಿ ಟಾರ್ಚರ್ ಯಿಂದ ಸತ್ತ ಗಂಡ ಅಂತ ಅಣೆಪಟ್ಟಿ ಹಾಕಿಕೊಂಡು ಮಣ್ಣಿಗೆ ಸೇರಿದ್ದಾನೆ.
ಇತ್ತೀಚಿಗೆ ಸಮಾಜದಲ್ಲಿ ಕೌಟುಂಬಿಕ ಕಲಹಗಳು ಜಾಸ್ತಿಯಾಗುತ್ತಿವೆ. ಅದರಲ್ಲೂ ಮಹಿಳೆಯರ ಹಿತಕ್ಕಾಗಿ ಇರುವ ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಸಹ ಸಾಕಷ್ಟು ಕೇಳಿ ಬರುತ್ತಿವೆ. ಹೆಂಡತಿ ಕಿರುಕುಳಕ್ಕೆ ಕಾನೂನು ತರಬೇಕು ಅಂತ ಪುರುಷರ ಹಿತರಕ್ಷಣಾ ಸಂಘಟನೆಗಳು ಆಗ್ರಹಿಸುತ್ತಿವೆ. ಇದಕ್ಕೆ ಸಾಕ್ಷಿಯೆಂಬ ಕಳೆದ ವರ್ಷ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆ ಹುಟ್ಟಿಹಾಕಿತ್ತು. ಈ ಬೆನ್ನಲ್ಲೇ ಹೆಂಡತಿ ಕಿರುಕುಳ ತಾಳಲಾರದೆ, ಡೆತ್ ನೋಟ್ ಬರೆದಿಟ್ಟು ಗಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಚಾಮುಂಡೇಶ್ವರಿ ಪೀಟರ್ ಎಂಬಾತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ..
ಪೀಟರ್ , ಹುಬ್ಬಳ್ಳಿ ಫಿಬಿ ಅಲಿಯಾಸ್ ಪಿಂಕಿ ಎನ್ನುವ ಮಹಿಳೆಯನ್ನು ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ. ಫಿಬಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು..ಮದುವೆ ಹೊಸತರಲ್ಲಿ ಪಿಂಕಿ ಚೆನ್ನಾಗಿಯೇ ಇದ್ದಳು, ಆದರೆ ಇದಾದ ಕೆಲವು ತಿಂಗಳ ಬಳಿಕ ಪಿಂಕಿ ವರ್ತನೆ ಬದಲಾಗಿದೆ. ಶಾಲೆಯಿಂದ ಮನೆಗೆ ತಡವಾಗಿ ಬರೊದು, ಬೇರೆ ವ್ಯಕ್ತಿ ಜೊತೆಗೆ ಸುತ್ತಾಟ ನಡೆಸಿದ್ದಳು, ಇದು ಪೀಟರ್ ಗೆ ತಿಳಿದು ಪ್ರಶ್ನೆ ಮಾಡಿದ್ದ. ಇದರಿಂದ ಪೀಟರ್ ಜೊತೆಗೆ ಜಗಳವಾಡಿದ ಪಿಂಕಿ ಮನೆಬಿಟ್ಟು ತವರು ಮನೆ ಸೇರಿದ್ದಳು, ಅಲ್ಲದೆ ವಿಚ್ಚೇದನಕ್ಕೆ ನೋಟಿಸ್ ಸಹ ಕಳುಹಿಸಿದ್ದಳು, ಇದರಿಂದಾಗಿ ಪೀಟರ್ ಮಾನಸಿಕವಾಗಿ ಬಹಳಷ್ಟು ನೊಂದಿದ್ದ. ಅಲ್ಲದೆ ಇಂದು ನ್ಯಾಯಾಲಯದಲ್ಲಿ ಪೀಟರ್ ಮತ್ತು ಪಿಂಕಿ ವಿಚ್ಚೇದನ ಅರ್ಜಿ ವಿಚಾರಣೆ ಇತ್ತು. ಈ ಸಮಯದಲ್ಲಿ ತನ್ನ ವಕೀಲರ ಮೂಲಕ 20 ಲಕ್ಷ ಪರಿಹಾರ ಕೇಳಿರುವ ಆರೋಪ ಸಹ ಕೇಳಿಬಂದಿದೆ..
ಇನ್ನೂ ಪೀಟರ್ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾನೆ. ಡ್ಯಾಡಿ ಆಯಮ್ ಸಾರಿ.. ಪಿಂಕಿ ಈಸ್ ಕಿಲ್ಲಿಂಗ್ ಮೀ, ಶೀ ವಾಂಟ್ ಮೈ ಡೆಥ್ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲದೆ ಶವದ ಪೆಟ್ಟಿಗೆ ಮೇಲೆ ಹೆಂಡತಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡವನು ಅಂತ ಬರೆಯಲು ತನ್ನ ಕೊನೆ ಆಸೆ ಸಹ ತಿಳಿಸಿದ್ದ , ಪೀಟರ್ ಕೊನೆ ಆಸೆಯಂತೆ ಶವ ಪೆಟ್ಟಿಗೆ ಮೇಲೆ ಮೈ ಡೆತ್ ಬಿಕಾಸ್ ಮೈ ವೈಪ್ ಟಾರ್ಚರ್ ಅಂತ ಬರೆಯಿಸಿ, ಬಳಿಕ ಶವದ ಮೆರವಣಿಗೆ ನಂತರ ಮಂಟೂರು ರಸ್ತೆಯಲ್ಲಿ ಪೀಟರ್ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಇನ್ನೂ ಪೀಟರ್ ಕುಟುಂಬಸ್ಥರ ಮತ್ತು ಪೀಟರ್ ಡೆತ್ ನೋಟ್ ಆಧಾರದ ಮೇಲೆ ಅಶೋಕ್ ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇನ್ನೂ ಪತಿ ಸಾವಿನ ಸುದ್ದಿ ತಿಳಿಯುತ್ತಲೇ ಪತ್ನಿ ಪಿಂಕಿ ನಾಪತ್ತೆಯಾಗಿದ್ದು, ಎಸಿಪಿ ಶಿವಪ್ರಕಾಶ್ ನಾಯ್ಕ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ..