Hubli News: ನಾಳಿನ ಬಂದ್ ಗೆ ನಮ್ಮ ಬೆಂಬಲ ಇಲ್ಲ. ಬಂದ್ ಗಾಗಿ ತೂಕದ ಬೇಡಿಕೆ ಇಲ್ಲ.ಯಾರೆಲ್ಲಾ ಬಂದ್ ಗೆ ಕರೆ ನೀಡಿದ್ದಾರೋ ಅವರು ತಮ್ಮ ಅಸ್ತಿತ್ವಕ್ಕೆ ಮಾಡುತ್ತಿದ್ದಾರೆ ಹೀಗಾಗಿ ಬೆಂಬಲ ಇಲ್ಲ ಅಂತ ನಟ ಚೇತನ ಅಹಿಂಸಾ ಹೇಳಿದ್ದಾರೆ..
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ತಾವು ಚಾಲನೆಯಲ್ಲಿ ಇರಬೇಕು ಅಂತ ಬಂದ್ ಮಾಡುತ್ತಿದ್ದಾರೆ..ಒಂದು ಪ್ರಕರಣಕ್ಕಾಗಿ ಒಂದು ವ್ಯಕ್ತಿಗೆ ಬಂದ್ ನೀಡೋದು ನಾನು ಒಪ್ಪಲ್ಲಾ ಹೀಗಾಗಿ ಬಂದ್ ಬೆಂಬಲ ಇಲ್ಲ ಎಂದರು..ಇನ್ನೂ ಸಿನಿಮಾ ರಂಗದಲ್ಲಿರುವ ಲೈಂಗಿಕ ದೌರ್ಜನ್ಯ ಬೇರೆ ಹನಿಟ್ರ್ಯಾಪ್ ದೌರ್ಜನ್ಯ ಬೇರೆ,ಆದರೆ ಎರಡು ಕೂಡ ಮಹಿಳೆಯರಿಗೆ ಸಂಬಂಧಿಸಿದ ವಿಷಯ.ಸಿನಿಮಾ ರಂಗದಲ್ಲಿ ಇದನು ಕಿತ್ತುಹಾಕಲು ಹೋರಾಟ ನಡೆಸುತ್ತಿದ್ದೆವೆ.
ಇದು ಫೈರ್ ಮೂಲಕ ಯಶಸ್ವಿ ಆಗಿದೆ.ಹನಿ ಟ್ರ್ಯಾಪ್ ಅಂದ್ರೆ ಫವರ್ ಫುಲ್ ವ್ಯಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳುವುದು.ಫವರ್ ನಲ್ಲಿರುವ ಗಂಡಸರು ಮಹಿಳೆ ನಮ್ಮನ್ನಾ ಬೇರೆ ಬೇರೆ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾಳೆ.
ಬಲೆಗೆ ಬೀಳಿಸಿಕೊಳ್ಳತ್ತಾಳೆ ಎಂಬ ಆರೋಪ
ಇದು ಪುರುಷ ಪ್ರಧಾನದ ಕಾನ್ಸೆಪ್ಟ್. ಪ್ರಭಾವಿ ಗಂಡಸರು ಬಲಿಪಶುಗಳು ಮಹಿಳೆ ವ್ಯಕ್ತಿಯನ್ನು ಮಿಸ್ ಯೂಸ್ ಮಾಡತ್ತಾಳೆ ಅಂತಾರೆ. ಆದರೆ ಇದನ್ನು ನಾನು ಆ ರೀತಿಯಲ್ಲಿ ನೋಡಲ್ಲಾ. ಇದನ್ನು ನಾನು ಒಪ್ಪುವುದಿಲ್ಲ ಇದು ಫವರ್ ಫುಲ್ ವ್ಯಕ್ತಿಗಳ ಒಪ್ಪಂದ ಮೇಲೆ ನಡೆಯುತ್ತದೆ. ಇದು ಸದನದಲ್ಲಿ ಚರ್ಚೆ ಆಗುವ ವಿಷಯ ಅಲ್ಲ
ಜನ ನೈತಿಕ ಆಡಳಿತ ನಿರೀಕ್ಷೆ ಮಾಡುತ್ತಾರೆ. ಚರ್ಚೆಗಳು ಜನಪರವಾಗಿರಲಿ..ನಿಮ್ಮ ವಯಕ್ತಿಕ ಲೋಪದೋಷಗಳ ಚರ್ಚೆ ಬೇಡ ಎಂದರು..