ಬರ್ತ್ ಡೇ ಪಾರ್ಟಿ (Birthday Party) ವಿಚಾರಕ್ಕೆ ಗಂಡ ಹೆಂಡತಿ ಜಗಳವಾಡಿದ್ದಾರೆ, ಮರುದಿನ ಗಂಡ ತನ್ನ ಪೇಸ್ ಬುಕ್ ಅಕೌಂಟ್ (Facebook account) ನಲ್ಲಿ ಹೆಂಡತಿಯ ಪೋಟೋ ಹಾಕಿ RIP ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾನೆ, ಹೆಂಡತಿ ನಾಪತ್ತೆಯಾಗಿದ್ದು ಆಕೆಯ ಹೆತ್ತವರ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (doddaballapura) ತಾಲೂಕಿನ ಉದನಹಳ್ಳಿಯ ಆರ್ಕೆಸ್ಟ್ರಾ ಕಲಾವಿದ ಮುನಿಕೃಷ್ಣ (Munikrishna) ತನ್ನ ಹೆಂಡತಿ ಲೀಲಾವತಿ (Lilavati) (22) ಪೋಟೋ ವನ್ನ ಪೇಸ್ ಬುಕ್ ಅಕೌಂಟ್ ಪೋಸ್ಟ್ ನಲ್ಲಿ RIP ಎಂದು ಬರೆದು ಶ್ರದ್ಧಾಂಜಲಿ ಸಲ್ಲಿಸಿದ್ದಾನೆ. ಪೇಸ್ ಬುಕ್ ಪೋಸ್ಟ್ ನೋಡಿ ಗಾಭರಿಗೊಂಡ ಲೀಲಾವತಿ ಪೋಷಕರು ಆಕೆಯನ್ನ ಹುಡುಕಾಡಿದ್ದಾಗ ನಾಪತ್ತೆಯಾಗಿರೋದು ಪತ್ತೆಯಾಗಿದೆ. ದೊಡ್ಡಬಳ್ಳಾಪುರದ ಮಹಿಳಾ ಪೊಲೀಸ್ ಠಾಣೆಗೆ (women’s police station in Doddaballapur) ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಫೆಬ್ರವರಿ 23ರ ರಾತ್ರಿ ಮುನಿಕೃಷ್ಣನ ತಂಗಿ ಮಗನ ಬರ್ತ್ ಡೇ ಪಾರ್ಟಿ ಗೆ ಹೋಗಿದ್ದ, ಇದೇ ವಿಚಾರಕ್ಕೆ ಲೀಲಾವತಿ ಗಂಡನ ಜೊತೆ ಜಗಳ ಮಾಡಿದಳು, ಈ ವೇಳೆ ಮುನಿಕೃಷ್ಣ ಹೆಂಡತಿಗೆ ಹೊಡಿದಿದ್ದ, ಮರುದಿನ ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಮುನಿಕೃಷ್ಣ ತನ್ನ ಪೆಸ್ ಬುಕ್ ಅಕೌಂಟ್ ನಲ್ಲಿ ಹೆಂಡತಿಯ ಪೋಟೋ ಹಾಕಿ RIP ಎಂದು ಬರೆದು ಶ್ರದ್ಧಾಂಜಲಿ ಸಲ್ಲಿಸಿದ್ದಾನೆ, ಪೋಸ್ಟ್ ನೋಡಿ ಗಾಬರಿಗೊಂಡ ಲೀಲಾವತಿ ತಂದೆ ಉದನಹಳ್ಳಿಗೆ ಬಂದು ಮಗಳನ್ನ ಹುಡುಕಾಡಿದ್ದಾನೆ ಆದರೆ ಅವಳ ಪತ್ತೆಯಾಗಿಲ್ಲ,ತನ್ನ ಮಗಳ ಹೊಡೆದು ಸಾಯಿಸಿದ್ದಾನೆಂದು ಆತ ಮಗಳನನ್ನ ನೆನೆದು ಕಣ್ಣೀರು ಹಾಕಿದ್ದಾನೆ. ಆದರೆ ಮುನಿಕೃಷ್ಣನ ತಮ್ಮ ಮುನಿರಾಜು ಬೇರೆಯದೆ ಕಥೆ ಹೇಳುತ್ತಿದ್ದಾನೆ, ಬರ್ತ್ ಡೇ ಪಾರ್ಟಿ ವಿಚಾರಕ್ಕೆ ಅಣ್ಣ ಅತ್ತಿಗೆ ನಡುವೆ ಜಗಳವಾಗಿ ಮರುದಿನ ಬೆಳಗ್ಗೆ ಅತ್ತಿಗೆಗೆ ಅಣ್ಣ ಹೊಡೆದಿದ್ದು ನಿಜ, ನಂತರ ಅತ್ತಿಗೆ ಬ್ಯಾಗ್ ತಗೊಂಡು ಮನೆ ಬಿಟ್ಟು ಹೋಗಿದ್ದಾಳೆ, ಅಣ್ಣನ ಮೊಬೈಲ್ ಆಕೆಯ ಬಳಿ ಇದ್ದು ,ಅತ್ತಿಗೆಯೇ ಅಣ್ಣನ ಪೆಸ್ ಬುಕ್ ಅಕೌಂಟ್ ನಲ್ಲಿ ತನ್ನ ಪೋಟೋ ಹಾಕಿ RIP ಎಂದು ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾಳೆ ಎನ್ನುವುದು ಅವನ ವಾದವಾಗಿದೆ. ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೀಲಾವತಿ ನಾಪತ್ತೆಗೆ ಸಂಬಂಧಿಸಿದಂತೆ ದೂರು ನೀಡಲಾಗಿದ್ದು, ಆಕೆಯ ಗಂಡ ಮುನಿಕೃಷ್ಣನನ್ನ ಠಾಣೆಗೆ ಕರೆದು ವಿಚಾರಣೆ ಮಾಡಲಾಗಿದೆ, ಜೊತೆಗೆ ಮೊಬೈಲ್ ಟವರ್ ಲೋಕೇಷನ್ (Mobile Tower Location) ಪತ್ತೆ ಮಾಡಿದ್ದಾಗ ಆಕೆ ತಿರುಪತಿ(Tirupati)ಯಲ್ಲಿರುವ ಮಾಹಿತಿ ಬರುತ್ತಿದೆ, ಆಕೆಯ ಪತ್ತೆಯ ನಂತರವೇ RIP ಪೋಸ್ಟ್ ಹಿಂದಿನ ಅಸಲಿ ಕಥೆ ಬಯಲಾಗಲಿದೆ.
ಅಭಿಜಿತ್, ಕರ್ನಾಟಕ ಟಿವಿ, ದೊಡ್ಡಬಳ್ಳಾಪುರ.

