ಹೈದರಾಬಾದ್: ನಿಗದಿತ ಪ್ರಮಾಣಕ್ಕಿಂತ ಅತ್ಯಧಿಕ ಪ್ರಮಾಣದಲ್ಲಿ ಜಿಮ್ ಗೆ ಜನರನ್ನು ಸೇರಿಸಿಕೊಂಡ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಕಂಪನಿ ವಿರುದ್ಧ ದೂರು ದಾಖಲಿಸಿದ್ದಲ್ಲದೆ ಜಿಮ್ ನ ಬ್ರ್ಯಾಂಡ್ ಅಂಬಾಸಿಡರ್ ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ಧವೂ ದೂರು ದಾಖಲಿಸಿದ್ದಾನೆ.
ಕಲ್ಟ್ ಫಿಟ್ನೆಸ್ ಎಂಬ ಜಿಮ್ ಕಂಪನಿ ವಿರುದ್ಧ ದೂರು ದಾಖಲಿಸಿರೋ ವ್ಯಕ್ತಿ, ಕಳೆದ ವರ್ಷ ನಾನು ಸುಮಾರು 17 ಸಾವಿರಕ್ಕೂ ಅಧಿಕ ಹಣ ನೀಡಿ ದಾಖಲಾಗಿದ್ದೆ. ಆದ್ರೆ ಕಂಪನಿಯು ನಿಗದಿತ ಪ್ರಮಾಣಕ್ಕಿಂತ ಅಧಿಕ ಮಂದಿಯ ದಾಖಲಾತಿ ಮಾಡಿಸಿಕೊಂಡಿದ್ದು ಇದರಿಂದ ಜಿಮ್ ನಲ್ಲಿನ ಎಲ್ಲರಿಗೂ ತಮಗೆ ನಿಗದಿಪಡಿಸಿದ ಸಮಯದಲ್ಲಿ ವರ್ಕೌಟ್ ಮಾಡೋಕೆ ಸಾಧ್ಯವಾಗಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಜಿಮ್ ಕಂಪನಿ ತನ್ನ ಆ್ಯಪ್ ನಿಂದ ನನ್ನನ್ನು ಬ್ಲಾಕ್ ಮಾಡಿ ವರ್ಕೌಟ್ ಮಾಡದಂತೆ ಕ್ರಮ ತೆಗೆದುಕೊಂಡಿದೆ ಅಂತ ಆರೋಪಿಸಿ ಹೈದ್ರಾಬಾದ್ ಪೊಲೀಸರಿಗೆ ದೂರು ನೀಡಿದ್ದಾನೆ.
ಇನ್ನು ಕಲ್ಟ್ ಫಿಟ್ನೆಸ್ ಸಂಸ್ಥೆಯು ತೂಕ ಇಳಿಕೆಯ ಭರವಸೆ ನೀಡಿತ್ತು ಅಲ್ಲದೆ ವರ್ಕೌಟ್ ಸೆಷನ್ ಗಳನ್ನು ಕೈಗೊಳ್ಳೋ ಭರವಸೆ ನೀಡಿತ್ತು. ಹಾಗೆಯೇ ಬಾಲಿವುಡ್ ನಟ ಹೃತಿಕ್ ರೋಷನ್ ಕಲ್ಟ್ ಫಿಟ್ನೆಸ್ ನ ಬ್ರ್ಯಾಂಡ್ ಅಂಬಾಸಿಡರ್ (ರಾಯಭಾರಿ) ಆಗಿದ್ದನ್ನು ನೋಡಿ ನನ್ನಂತೆಯೇ ಅತ್ಯಧಿಕ ಸಂಖ್ಯೆಯಲ್ಲಿ ಈ ಜಿಮ್ ಸೇರಿದ್ರು ಅಂತ ಆರೋಪಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಹೃತಿಕ್ ರೋಷನ್ ಹಾಗೂ ಕಲ್ಟ್ ಫಿಟ್ನೆಸ್ ಸಂಸ್ಥೆಯ ಇಬ್ಬರ ನಂಬಿಕೆ ದ್ರೋಹ ಮತ್ತು ವಂಚನೆ ಆರೋಪದಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮದುವೆ ಆಗದಿದ್ರೇನಂತೆ, ನನಗೊಬ್ಬಳು ಮಗಳಿದ್ದಾಳೆ, ನನಗೆ ಇಷ್ಟವಾದಾಗ ಮದ್ವೆ ಆಗ್ತೀನಿ ಎಂದ ನಟಿ…! ಮಿಸ್ ಮಾಡದೇ ಈ ವಿಡಿಯೋ ನೋಡಿ