Dharwad News: ಧಾರವಾಡ : ಧಾರವಾಡದಲ್ಲಿ ಮಾತನಾಡಿದ ಡಾ.ಪ್ರಭಾಕರ್ ಕೋರೆ, ಧಾರವಾಡದಲ್ಲಿ ಜೋಶಿ ಅವರ ಪರವಾಗಿ ಸಭೆ ಮಾಡಲಾಗಿದೆ. ನನ್ನ ಮಿತ್ರನ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಇದು ಮೂರನೇಯ ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ. ಈ ಬಾರಿ 3 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಕೋರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ ಅವರು ಜೋಶಿ ಅವರನ್ನ ಟಾರ್ಗೆಟ್ ಮಾಡಿರುವ ವಿಚಾರವಾಗಿ ಮಾತನಾಡಿದ ಪ್ರಭಾಕರ್ ಕೋರೆ, ಇದು ಸ್ವಾಮೀಜಿ ಅವರ ವಯಕ್ತಿಕ ವಿಚಾರ ಅವರು ಅಲ್ಲೆ ಜೋಶಿ ಅವರ ಜೊತೆ ಮಾತನಾಡಬೇಕು. ನಾವು ಮೂರು ಸಾವಿರ ಮಠದ ಆಸ್ತಿಯನ್ನ ನಾವು ದಾನವಾಗಿ ಪಡೆದಿದ್ದೆವೆ. ಯಾರು ಮಾರಾಟಕ್ಕೆ ಪಡೆದಿಲ್ಲ. ಸದ್ಯ ಸ್ವಾಮೀಜಿ ಅವರಿಗೆ ಮೋಸ್ ಮಾಡಿದ್ರೆ ನೇರವಾಗಿ ಬಂದು ಅವರ ಜೊತೆ ಮಾತನಾಡಲಿ. ಸಮಾಜವನ್ನ ತೆಗೆದುಕ್ಕೊಂಡು ಸ್ವಾಮಿಜಿ ಮಾತನಾಡೋದು ಅರಿಯಲ್ಲ. ಬೆಳಗಾವಿಯಲ್ಲಿ ಯಾವುದೆ ಭಿನ್ನಮತವಿಲ್ಲ. ಅವರು ಬಹುಮತದಿಂದ ಗೆದ್ದೆ ಗೆಲ್ಲುತ್ತಾರೆ ಎಂದು ಪ್ರಭಾಕರ್ ಕೋರೆ ಹೇಳಿದ್ದಾರೆ.
ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿದ ಅಭಿಮಾನಿ, ಆದರೆ ಮಕ್ಕಳ ಫೀಸ್ ಕಟ್ಟಲು ದುಡ್ಡಿಲ್ಲ