Sunday, September 8, 2024

Latest Posts

ಚೊಚ್ಚಲ ಚಾಂಪಿಯನ್ ಪಟ್ಟಕ್ಕಾಗಿ ಇಂಗ್ಲೆಂಡ್- ನ್ಯೂಜಿಲೆಂಡ್ ಪೈಪೋಟಿ..!

- Advertisement -

ಕಳೆದ ಒಂದುವರೆ ತಿಂಗಳಿನಿಂದ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದ್ದ ಪ್ರಶ್ನೆಗೆ, ಉತ್ತರ ಸಿಗುವ ಸಮಯ ಬಂದಿದೆ. ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ, ಇಂದು ಇಂಗ್ಲೆಂಡ್-ನ್ಯೂಜಿಲೆಂಡ್ ತಂಡ ಗಳು ಸೆಣಸುತ್ತಿವೆ. ಉಭಯ ತಂಡದ ನಾಯಕರು ಚೊಚ್ಚಲ ವಿಶ್ವಕಪ್ ಎತ್ತಿಹಿಡಿಯುವ ಕನಸಿನಲ್ಲಿದ್ದಾರೆ. ಹೌದು…ಒಂದು ಕಡೆ ಮೊದಲ ಸೆಮಿಫೈನಲ್ ನಲ್ಲಿ ಭಾರತದ ವಿರುದ್ಧ ಗೆಲುವು ದಾಖಲಿಸಿದ ಕಿವೀಸ್, ಅಂತಿಮ ಹಣಾಹಣಿಗೆ ಸಜ್ಜಾಕಿದ್ರೆ, ಮತ್ತೊಂದು ಕಡೆ ಕಳೆದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವನ್ನ ಬಗ್ಗುಬಡಿದ ಇಂಗ್ಲೆಂಡ್, ನಿರ್ಣಾಯಕ ಘಟ್ಟ ತಲುಪಿದೆ. ಈ ಬಾರಿ ವಿಶ್ವಕಪ್ ಫೈನಲ್ ನಲ್ಲಿ ಯಾರೇ ಗೆಲುವು ದಾಖಲಿಸಿದ್ರು, ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಹೇಗಿದೆ ಉಭಯ ತಂಡಗಳ ಬಲಾಬಲ
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಉಭಯ ತಂಡಗಳು ಚೊಚ್ಚಲ ವಿಶ್ವಕಪ್ ಗೆಲುವಿನ ಕನಸಲ್ಲಿವೆ. ಅಂಕಿ ಅಂಶಗಳು ಎನೇ ಹೇಳಿದ್ರು, ಇಂಗ್ಲೆಂಡ್ ಕಪ್ ಗೆಲ್ಲುವ ನೆಚ್ಚಿನ ತಂಡ ಎನ್ನಲಾಗುತ್ತಿದೆ. ಇಂಗ್ಲೆಂಡ್ ಪರ ಆರಂಭಿಕ ಜೋಡಿ ಜೇಸನ್ ರಾಯ್ ಮತ್ತು ಜಾನಿ ಬೇರ್ ಸ್ಟೋ ಉತ್ತಮ ಫಾರ್ಮ್ ನಲ್ಲಿದ್ದಾರೆ. ಉಳಿದಂತೆ ಮಿಡಲ್ ಆರ್ಡರ್ ನಲ್ಲಿ ಜೋ ರೂಟ್, ಬಟ್ಲರ್, ಮಾರ್ಗನ್, ಮತ್ತು ಜೇಮ್ಸ್ ಮಿನ್ಸಿ ತಂಡಕ್ಕೆ ಶಕ್ತಿ ತುಂಬುತ್ತಿದ್ದಾರೆ. ಬೌಲಿಂಗ್ ನಲ್ಲಿ ನೋಡುವುದಾದ್ರೆ, ಚೋಪ್ರಾ ಆರ್ಚರ್, ಮಾರ್ಕ್ ಹುಡ್, ಮತ್ತು ಕ್ರಿಸ್ ವೋಕ್ಸ್ ಎದುರಾಳಿ ಬ್ಯಾಟ್ಸ್ ಮನ್ ಗಳನ್ನ ಕಂಗೆಡಿಸುವ ಶಕ್ತಿ ಹೊಂದಿದ್ದಾರೆ.

ಇನ್ನೂ ಕಠಿಣ ಹಾದಿಯಲ್ಲಿ ಪುಟಿದೇಳುವ ಗುಣ ಹೊಂದಿರುವ ಕಿವೀಸ್, ಆಂಗ್ಲ ಪಡೆಗೆ ಸವಾಲಾಗುವ ನಿರೀಕ್ಷೆ ಇದೆ. ಸತತ ಎರಡನೇ ಬಾರಿ ಫೈನಲ್ ತಲುಪಿರುವ ಬ್ಲಾಕ್ ಕ್ಯಾಪ್ಸ್ ಗಳಿಗೆ, ಬ್ಯಾಟಿಂಗ್ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಆರಂಭಿಕ ಜೋಡಿ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೋ ಸತತ ವೈಫಲ್ಯ ತಂಡದ ತಲೆನೋವಿಗೆ ಕಾರಣವಾಗಿದೆ. ಮಿಡಲ್ ಆರ್ಡರ್ ನಲ್ಲಿ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಸ್ಥಿರ ಪ್ರದರ್ಶನ ತಂಡಕ್ಕೆ ಸಮಾಧಾನ ತಂದಿದೆ. ಇನ್ನು ಬೌಲಿಂಗ್ ನಲ್ಲಿ ನೋಡುವುದಾದ್ರೆ, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್ ಮತ್ತು ಲಾಕಿ ಫರ್ಗ್ಯುಸನ್ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ.


ಉಭಯ ತಂಡಗಳ ನಡುವಿನ ಅಂಕಿಅಂಶಗಳನ್ನು ನೋಡುವುದಾದ್ರೆ, ಇದುವರೆಗೂ ಎರಡೂ ತಂಡಗಳು 90 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ನ್ಯೂಜಿಲೆಂಡ್ 43 ಗೆಲುವು ದಾಖಲಿಸಿದ್ರೆ, ಇಂಗ್ಲೆಂಡ್ 41 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಉಳಿದಂತೆ 2 ಪಂದ್ಯಗಳು ಟೈ ಆಗಿದ್ರೆ, 4 ಪಂದ್ಯಗಳು ರದ್ದಾಗಿವೆ. ಇನ್ನೂ ವಿಶ್ವಕಪ್ ನಲ್ಲಿ ಇದುವರೆಗೂ 8 ಬಾರಿ ಎದುರಾಗಿದ್ದು, ನ್ಯೂಜಿಲೆಂಡ್ 5 ಮತ್ತು ಇಂಗ್ಲೆಂಡ್ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

https://www.youtube.com/watch?v=xeCJ8SBOjIo

ನಂದನ್ ಸ್ಪೋರ್ಟ್ಸ್ ಬ್ಯೂರೋ ಕರ್ನಾಟಕ ಟಿವಿ

- Advertisement -

Latest Posts

Don't Miss