Wednesday, November 29, 2023

Latest Posts

ಐಸಿಸಿ ವಿಶ್ವಕಪ್- ಬಾಂಗ್ಲಾಕ್ಕೆ 315 ರನ್ ಗುರಿ ನೀಡಿದ ಟೀಂ ಇಂಡಿಯಾ..!

- Advertisement -

ಇಂಗ್ಲೆಂಡ್: ಬರ್ಮಿಂಗ್ ಹ್ಯಾಮ್ ನಲ್ಲಿ ಇಂದು ನಡೆಯುತ್ತಿರೋ ಭಾರತ- ಬಾಂಗ್ಲಾದೇಶ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾ ತಂಡಕ್ಕೆ 315ರನ್ ಗುರಿ ನೀಡಿದೆ.

ಭಾರತ-ಬಾಂಗ್ಲಾದೇಶ ನಡುವಿನ ವಿಶ್ವಕಪ್ ಹಣಾಹಣಿಯಲ್ಲಿ 9 ವಿಕೆಟ್ ನಷ್ಟಕ್ಕೆ 314ರನ್ ಕಲೆ ಹಾಕುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಆಟಗಾರರು ಎದುರಾಳಿ ತಂಡಕ್ಕೆ 315ರನ್ ಗುರಿ ನೀಡಿದ್ದಾರೆ. ಟೀಂ ಇಂಡಿಯಾದ ರೋಹಿತ್ ಶರ್ಮಾ 104ರನ್ ಗಳಿಸಿದ್ರೆ, ಲೋಕೇಶ್ ರಾಹುಲ್ 77, ಕ್ಯಾಪ್ಟನ್ ವಿರಾಟ್ ಕೊಹ್ಲಿ 26 ರನ್, ರಿಷಬ್ ಪಂತ್ 48 ರನ್, ಮಹೇಂದ್ರ ಸಿಂಗ್ ಧೋನಿ 35, ದಿನೇಶ್ ಕಾರ್ತಿಕ್ 8 ರನ್, ಭುವನೇಶ್ವರ್ ಕುಮಾರ್ 3 ರನ್ ಹಾಗೂ ಮೊಹಮ್ಮದ್ ಶಮಿ 1ರನ್ ಅಷ್ಟೇ ಗಳಿಸಲು ಯಶಸ್ವಿಯಾಗಿದ್ದಾರೆ.

ಇನ್ನು ತೀವ್ರ ಕುತೂಹಲ ಕೆರಳಿಸಿರೋ ಇಂದಿನ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಗೆಲ್ಲಲು ಭಾರತ ನೀಡಿರೋ 315 ರನ್ ಗುರಿಯನ್ನು ಬಾಂಗ್ಲಾ ತಂಡ ತಲುಪಲಿದೆಯಾ ಅನ್ನೋದನ್ನು ಕಾದುನೋಡಬೇಕಿದೆ.

ವಿಶ್ವಕಪ್ ನಲ್ಲಿ ಬೆಸ್ಟ್ ಆಟಗಾರನಾಗ್ತಾರಾ ಮಯಾಂಕ್..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=ZtjSFmkmjFs
- Advertisement -

Latest Posts

Don't Miss