Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಸಚಿವ ಆರ್.ಬಿ.ತಿಮ್ಮಾಪುರ, ಸಿಎಂ ಆಗಬೇಕಾದ್ರೆ ಸಿಎಲ್ ಪಿ ನಾಯಕ ಆಗಬೇಕು. ಸಿಎಂ ಆಗೋಕ್ಕೆ ಅದರದೇಯಾದ ಪ್ರೊಸೆಸ್ ಇದೆ. ಸಿಎಂ ಅಗಿ ಸಿದ್ದರಾಮಯ್ಯನವರು ಇದ್ದಾರೆ. ಪ್ರಸ್ತುತ ಅವರು ಈಗ ಸಿಎಂ ಆಗಿ ಸಿದ್ದರಾಮಯ್ಯ ಅವರು ಅಡಳಿತ ನಡೆಸುತ್ತಿದ್ದಾರೆ. ಸಿಎಂ ಬದಲಾವಣೆಯ ಬಗ್ಗೆ ಎಲ್ಲೂ ಚರ್ಚೆ ಇಲ್ಲ. ದಲಿತ ಸಿಎಂಗೆ ನಮ್ಮ ವಿರೋಧ ಇಲ್ಲ. ಅವಕಾಶ ಬಂದಾಗ ದಲಿತ ಸಿಎಂ ಚರ್ಚೆ ಬರಲಿ. ಸಿದ್ದರಾಮಯ್ಯ ಇರುವರೆಗೂ ಬದಲಾವಣೆ ಇಲ್ಲ. ಸಿದ್ದರಾಮಯ್ಯನವರ ಇಲ್ಲದ ನಂತರ ಅವಕಾಶ ಬಂದ್ದರೆ ಪಕ್ಷ ಒಪ್ಪಿದ್ದರೆ ನಾನು ಸಿಎಂ ಆಗೋಣ ಎಂದು ಇನ್ನೊಮ್ಮೆ ತಾವು ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.
ನಮ್ಮ ನಾಯಕರು ಸಿದ್ದರಾಮಯ್ಯನವರೇ. ಸತೀಶ್ ಜಾರಕಿಹೊಳಿ ಸಿಎಂ ಆದರೆ ಒಳ್ಳೆಯದು. ಸಿಎಂ ಆಗಲು ಜಾರಕಿಹೊಳಿ ಸಮರ್ಥರಾಗಿದ್ದಾರೆ, ಸಿಎಂ ಆದಲ್ಲಿ ಪಕ್ಷಕ್ಕೆ ಒಳ್ಳಿತು ಆಗುತ್ತೆ. ಹೈಕಮಾಂಡ್ ನನ್ನ ಒಪ್ಪಿದ್ದರೆ ನಾನು ಸಿಎಂ ಆಗುತ್ತೇನೆ ಎಂದು ತಿಮ್ಮಾಪುರ ಹೇಳಿದ್ದಾರೆ.