Sunday, September 8, 2024

Latest Posts

ಈ ವಸ್ತುವನ್ನು ಮನೆಯ ಮುಖ್ಯ ಬಾಗಿಲಿಗೆ ಕಟ್ಟಿದ್ದರೆ ದೃಷ್ಟಿದೋಷಗಳು ತಗುಲುವುದಿಲ್ಲ.

- Advertisement -

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಆರ್ಥಿಕ ಸಮಸ್ಯೆ ಇದೆ ಇರುತ್ತದೆ. ಅದೇ ರೀತಿಯಾಗಿ ಮನೆಗೆ ದೃಷ್ಟಿದೋಷಗಳು ಕೂಡ ತಗಲುತ್ತವೆ. ಇಂತಹ ದೃಷ್ಟಿದೋಷಗಳು ಆದಾಗ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು, ಕಲಹಗಳು ಹೀಗೆ ಸಮಸ್ಯೆಯ ಮೇಲೆ ಸಮಸ್ಯೆಗಳು ಎದುರಾಗುತ್ತವೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ. ಮನೆಯಲ್ಲಿ ನೆಮ್ಮದಿ ಎನ್ನುವುದೇ ಹೊರಟು ಹೋಗಿರುತ್ತದೆ, ಹಾಗಾಗಿ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಸುಧಾರಣೆಯಾಗಬೇಕು, ಮನೆಯಲ್ಲಿ ಯಾವುದೇ ರೀತಿಯ ದೃಷ್ಟಿದೋಷಗಳು ಇರಬಾರದು, ಋಣಾತ್ಮಕ ಶಕ್ತಿಗಳು ಮನೆಯ ಒಳಗಡೆ ಬರಬಾರದು ಎಂದರೆ ಈ ಒಂದು ವಸ್ತುವನ್ನು ಮನೆಯ ಮುಖ್ಯ ಬಾಗಿಲಿಗೆ ಕಟ್ಟಬೇಕು.  ಯಾವ ವಸ್ತುವನ್ನು ಮನೆಯ ಮುದ್ದು ಬಾಗಿಲಿಗೆ ಕಟ್ಟಿದರೆ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ.  ದೃಷ್ಟಿದೋಷಗಳು ತಗುಲುವುದಿಲ್ಲ ಎಂದು ನೋಡೋಣ.

ಕೆಲಸವನ್ನು ಶುಕ್ರವಾರದ ರಾಹುಕಾಲದ ದಿನವನ್ನು ಹೊರತುಪಡಿಸಿ ಉಳಿದ ಸಮಯಗಳಲ್ಲಿ ಮಾಡಿಕೊಳ್ಳಬಹುದು. ಇದಕ್ಕೆ ಬೇಕಾಗುವ ವಸ್ತು ಒಂದು ಕೆಂಪುಬಟ್ಟೆ ,ಅರಿಶಿನದ ದಾರ, ಒಂದು ನಿಂಬೆಹಣ್ಣು, ಎರಡು ಏಲಕ್ಕಿ, ಏಳು ಲವಂಗ ಮತ್ತು ಕಲ್ಲು ಉಪ್ಪು. ಒಂದು ಶುದ್ಧವಾದಂತಹ ಕೆಂಪು ಬಟ್ಟೆಯನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ. ನಂತರ 2 ಏಲಕ್ಕಿ, 7 ಲವಂಗವನ್ನು ಹಾಕಿ. ಲವಂಗ ಹಣಕಾಸಿನ ಆಕರ್ಷಣ ಶಕ್ತಿಯನ್ನು ಹೊಂದಿದೆ, ನಂತರ ಒಂದು ನಿಂಬೆಹಣ್ಣನ್ನು ಹಾಕಿ, ಇಷ್ಟು ವಸ್ತುಗಳನ್ನು ಹಾಕಿ ಕೆಂಪು ದಾರದಲ್ಲಿ ಅದನ್ನು ಗಂಟಿನ ರೂಪದಲ್ಲಿ ಕಟ್ಟಿ, ಏಲಕ್ಕಿ ಮಹಾಲಕ್ಷ್ಮಿ ದೇವಿಗೆ ಬಹಳ ಇಷ್ಟವಾದದ್ದು, ಉಪ್ಪು ಮಹಾಲಕ್ಷ್ಮಿದೇವಿ ಇಷ್ಟವಾದಂತಹ ವಸ್ತು, ಲವಂಗ ಕೂಡ ಮಹಾಲಕ್ಷ್ಮಿ ದೇವಿಗೆ ಪ್ರಿಯವಾದದಂತಹ ವಸ್ತು, ಇದು ಹಣಕಾಸಿನ ಆಕರ್ಷಣೆಯನ್ನು ಮಾಡುತ್ತದೆ. ಇದಕ್ಕೆ ನಿಂಬೆಹಣ್ಣನ್ನು ಸೇರಿಸುವುದರಿಂದ ಮನೆಗೆ ಯಾವುದೇ ರೀತಿಯ ದೃಷ್ಟಿದೋಷಗಳು ಆಗವುದಿಲ್ಲ. ಇಷ್ಟು ವಸ್ತುಗಳನ್ನು ಸೇರಿಸಿ ಗಂಟಿನ ರೂಪದಲ್ಲಿ ಕಟ್ಟಿದ ನಂತರ ಇದಕ್ಕೆ ಅರಿಶಿನ-ಕುಂಕುಮವನ್ನು ಇಟ್ಟು, ಪೂಜೆಯನ್ನು ಮಾಡಿ, ಮನೆಯ ಹೊರಭಾಗದಲ್ಲಿ ಜನರಿಗೆ ಓಡಾಡುವಾಗ ಅದು ಕಾಣುವ ಹಾಗೆ ನೀವು ಕಟ್ಟಬೇಕು. ನಂತರ ಮತ್ತೊಂದು ಶುಕ್ರವಾರ ಗಂಟಿನ ಒಳಗಡೆ ಇರುವ ವಸ್ತುಗಳನ್ನು ಬದಲಾಯಿಸಿ ಪುನಹ ಇದೇ ರೀತಿಯಾಗಿ ಕಟ್ಟಬೇಕು, ಗಂಟಿನ ಒಳಗಡೆ ಇರುವ ವಸ್ತುಗಳನ್ನು ಯಾವುದಾದರೂ ಮರದ ಬುಡಕ್ಕೆ ಹಾಕಬೇಕು ಬಟ್ಟೆಯನ್ನು ಅದೇ ಬಳಸಬಹುದು. ಈ ರೀತಿಯಾಗಿ ಪ್ರತಿ ಶುಕ್ರವಾರ ಮಾಡುತ್ತಾ ಬಂದರೆ ಮನೆಯಲ್ಲಿ ಯಾವುದೇ ರೀತಿಯ ದುಷ್ಟ ಶಕ್ತಿಗಳ ಕಾಟ ಇರುವುದಿಲ್ಲ. ಮನೆಗೆ ಶಕ್ತಿಗಳು ಬರುವುದಿಲ್ಲ.

ಯಾವುದೇ ರೀತಿಯ ದೃಷ್ಟಿದೋಷಗಳು ಆಗುವುದಿಲ್ಲ. ಇದು ಮನೆಯಲ್ಲಿರುವ ಹಣಕಾಸಿನ ಸಮಸ್ಯೆಯನ್ನು ಆರ್ಥಿಕ ಸಮಸ್ಯೆಗಳು ದೂರ ಮಾಡುತ್ತದೆ.  ಹಣಕಾಸಿನ ಆಕರ್ಷಣೆಯನ್ನು ಮಾಡುತ್ತದೆ. ಹೀಗಾಗಿ ಮನೆಯಲ್ಲಿ ಆದಾಯದ ಮೂಲಗಳು ಹೆಚ್ಚಾಗುತ್ತವೆ.

- Advertisement -

Latest Posts

Don't Miss