Saturday, July 27, 2024

Latest Posts

Shakthi Dhaamaದ ಮಕ್ಕಳಿಗೆ ಅಪ್ಪು ಸಮಾಧಿ ಭೇಟಿ ಮಾಡಿಸಿದ ಶಿವಣ್ಣ..!

- Advertisement -

ಬೆಂಗಳೂರು : ಶಿವರಾಜಕುಮಾರ್ (shivarajkumar) ಇಂದು ಶಕ್ತಿ ಧಾಮದ ಮಕ್ಕಳಿಗೆ (Children of shakthidhaama) ಬೆಂಗಳೂರಿನಲ್ಲಿರುವ ಪುನೀತ್ ರಾಜಕುಮಾರ್ (puneeth rajkumar) ಅವರ ಸಮಾಧಿಯನ್ನು ಭೇಟಿ ಮಾಡಿಸಿದ್ದಾರೆ. ಗೀತಾ ಶಿವರಾಜಕುಮಾರ್ (geetha shivarajkumar )ಮಕ್ಕಳ ಜೊತೆಯಲ್ಲೇ ಇದ್ದು ಮಕ್ಕಳಾಗಿದ್ದರು. ಅವರಿಗೆ ಜಗತ್ತು ಗೊತ್ತಾಗಬೇಕು. ಫಸ್ಟ್ ಟೈಂ ಬಂದರು, ಇದನ್ನು ನೋಡಬೇಕು ಅಂದ್ರು, ವಿಧಾನಸೌಧ, ಹೀಗೆ ಅನೇಕ ಕಡೆ ಕರ್ಕೊಂಡು ಹೋಗ್ತಾ ಇದಿವಿ ಶಿವರಾಜ್ ಕುಮಾರ್ ಹೇಳಿದ್ದಾರೆ. ಅವರನ್ನ ನಗರ ಸುತ್ತಿಸುತ್ತಿಸುತ್ತಿದ್ದಾರೆ.ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಳೆ ನಂದಿ ಹಿಲ್ಸ್ (Nandi Hills)ಗೆ ಕರ್ಕೊಂಡು ಹೋಗ್ತಾ ಇದಿವಿ. ಅವರಿಗೆ ಹೊರ ಪ್ರಪಂಚ ತಿಳಿಬೇಕು ಅಂತ ಹೀಗೆ ಮಾಡ್ತಾ ಇದ್ದೀವಿ. ಶಕ್ತಿದಾಮಕ್ಕೆ ಅಪ್ಪಾಜಿ ಬೆಳಕು ಕೊಟ್ರು, ಅಮ್ಮ ಶಕ್ತಿ‌ಕೊಟ್ಟಿದ್ದಾರೆ ಎಂದರು. ಗೀತಾ ಅಮ್ಮನ ಸ್ಥಾನದಲ್ಲಿ ನಿಂತು ಮಾಡ್ತಾ ಇದ್ದಾರೆ. 150 ಮಕ್ಕಳ ಮೇಲೆ ಇದ್ದಾರೆ ಇನ್ನೂ ಆಡ್ ಆಗ್ತಾ ಇದ್ದಾರೆ. ಅನೇಕರು ಹೆಲ್ಪ್ ಮಾಡ್ತಾ ಇದ್ದಾರೆ. ಈ ಮಕ್ಕಳಲ್ಲಿ ಅನೇಕ ಟ್ಯಾಲೆಟ್ಸ್ ಇದೆ. ಸಧ್ಯ, ಬೇಕಿಂಗ್ ಕೂಡ ಕಲಿತಾ ಇದ್ದಾರೆ. ಮಕ್ಕಳ ಜೊತೆ ಮಕ್ಕಳಾಗಿ ಇರಬೇಕಾಗುತ್ತದೆ ಎಂದು ಹೇಳಿದರು. ಜೇಮ್ಸ್ ಸಿನಿಮಾದ  ಡಬ್ಬಿಂಗ್ (dubbing of James Cinema) ನಿನ್ನೆ ಮಾಡಿದ್ದೇವೆ. ಅಪ್ಪು ಇಲ್ಲದೇ ವಾಯ್ಸ್ ಕೊಡೋದು ಅದು ಬಹಳ ಕಷ್ಟದ ಕೆಲಸ. ಏನೋ ಪ್ರಯತ್ನ ಮಾಡಿದಿನಿ. ಇನ್ನೊಬ್ಬ ಆಕ್ಟರ್ ಒಳಗೆ ಹೋಗಿ ಡಬ್ ಮಾಡೋದು ತುಂಬಾ ಕಷ್ಟ. ಒಬ್ಬ ನಾಯಕನಾಗಿ ಅವರ ವಾಯ್ಸ್ ಇಮಿಟೇಟ್ ಮಾಡೋದು ಕಷ್ಟ. ಆದ್ರೂ ಡಬ್ಬಿಂಗ್ ಮುಗಿಸಿದ್ದೀನಿ. ಎಲ್ಲರಿಗೂ ಇಷ್ಟ ಆಗುತ್ತೆ ಅಂತ ಅನ್ಸುತ್ತೆ. ಜೆಮ್ಸ್ ಗೆ ಇಡೀ ಸಿನಿಮಾಗೆ ವಾಯ್ಸ್ ಕೊಟ್ಟಿದಿನಿ ಎಂದು ಹೇಳಿದರು. 

- Advertisement -

Latest Posts

Don't Miss