Friday, April 25, 2025

Latest Posts

ಈ 3 ವಿಷಯ ಗೊತ್ತಿದ್ರೆ ನಿಮಗೆ ಯಾವತ್ತೂ ಲಕ್ವ /ಸ್ಟ್ರೋಕ್ ಹೊಡೆಯೋದಿಲ್ಲ!

- Advertisement -

Health Tips: ಲಕ್ವ ಹೊಡೆಯುವುದು ಅಥವಾ ಸ್ಟ್ರೋಕ್ ಆಗುವುದು ಯಾವ ಕಾರಣಕ್ಕೆ ಅಂತಾ ಹಲವರಿಗೆ ಗೊತ್ತಿಲ್ಲ. ಆದರೆ ಧೂಮಪಾನ, ಮದ್ಯಪಾನಗಳ ಸೇವನೆ ಅತಿಯಾದಾಗಲೂ ನಮಗೆ ಲಕ್ವ ಹೊಡೆಯಬಹುದು. ದೇಹದಲ್ಲಿ ಕೆಲವು ಪೋಷಕಾಂಶಗಳ ಕೊರತೆಯುಂಟಾದಾಗಲೂ, ನಮಗೆ ಲಕ್ವ ಹೊಡೆಯಬಹುದು. ಆದರೆ ನಾವಿಂದು ಹೇಳುವ ಟಿಪ್ಸ್ ನೀವು ಫಾಲೋ ಮಾಡಿದ್ರೆ, ನಿಮಗೆ ಲಕ್ವ ಹೊಡೆಯುವುದಿಲ್ಲ. ಹಾಗಾದ್ರೆ ಆ ಟಿಪ್ಸ್ ಏನು ಎಂದು ಡಾ.ಆಂಜೀನಪ್ಪ ಅವರೇ ಹೇಳ್ತಾರೆ ಕೇಳಿ.

ವೈದ್ಯರು ಹೇಳುವ ಪ್ರಕಾರ, ನಮಗೆ ಬಿಪಿ ಇರಲಿ ಇಲ್ಲದೇ ಇರಲಿ, ನಾವು ಆಗಾಗ ಬಿಪಿ ಚೆಕ್ ಮಾಡಿಸಿಕೊಳ್ಳುತ್ತಲೇ ಇರಬೇಕು. ಏಕೆಂದರೆ, ಬಿಪಿಯಲ್ಲಿ ತೀರಾ ಏರಿಳಿತವಾದರೆ, ಅಂಥ ವೇಳೆ ಲಕ್ವ ಹೊಡೃೆಯುವ ಸಾಧ್ಯತೆ ಇರುತ್ತದೆ. ಎಷ್ಟೋ ಹೆಣ್ಣು ಮಕ್ಕಳಿಗೆ ಎಂದಿಗೂ ಕಾಣಿಸಿಕೊಳ್ಳದ ಬಿಪಿ, ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ಟೆನ್ಶನ್ ತೆಗೆದುಕೊಂಡ ಪರಿಣಾಮ, ಬಿಪಿಯಲ್ಲಿ ತೀರಾ ಏರಿಳಿತವಾಗಿ, ಲಕ್ವಾ ಹೊಡೆಯುತ್ತದೆ. ಮತ್ತು ಅವರು ಗರ್ಭದಲ್ಲಿರುವ ಮಕ್ಕಳನ್ನು ಕಳೆದುಕೊಂಡ ಉದಾಹರಣೆಗಳಿದೆ.

ಮೆದುಳಿನಲ್ಲಿ ಏನಾದರೂ ಸಮಸ್ಯೆಯಾಗಿದೆಯಾ ಅಂತಾ ಸ್ಕ್ಯಾನ್ ಮಾಡಿಸಿಕೊಂಡರೆ, ನೀವು ಲಕ್ವಾದಿಂದ ಪಾರಾಗಬಹುದು. ಲಕ್ವಾ ಹೊಡೆಯುವ ಮುನ್ಸೂಚನೆ ಇದ್ದರೆ, ಮೆದುಳಿನಲ್ಲಿ ರಕ್ತ ಸ್ರಾವವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೆದುಳಿನ ಆರೋಗ್ಯದ ಬಗ್ಗೆ ಗಮನ ಕೊಡುವುದು ಕೂಡ ಮುಖ್ಯವಾಗಿರುತ್ತದೆ.

- Advertisement -

Latest Posts

Don't Miss