Political News: ಶಿರಹಟ್ಟಿಯ ಮಠಾಧೀಶರಾಗಿರುವ ದಿಂಗಾಲೇಶ್ವರ ಶ್ರೀಗಳು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ, ಈ ಬಾರಿ ಲೋಕಸಭೆ ಚುನಾವಣೆಗೆ ಧಾರವಾಡ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದೇವೆ ಎಂದಿದ್ದಾರೆ.
ಆದರೆ ದಿಂಗಾಲೇಶ್ವರ ಶ್ರೀಗಳು ಏನಾದರೂ ನಾಮಪತ್ರ ಸಲ್ಲಿಸಿದರೆ, ಮಠ ಬಿಟ್ಟು ಹೊರಡಬೇಕು ಎಂದು ಮಠ ಭಕ್ತರು ಎಚ್ಚರಿಕೆ ನೀಡಿದ್ದಾರೆ. ನಿಮ್ಮನ್ನು ಎರಡು ವರ್ಷದ ಹಿಂದೆ ಕರೆಸಿ, ಮಠದ ಅಧ್ಯಕ್ಷತೆ ಕೊಟ್ಟಿದ್ದು ಮಠದ ಉದ್ಧಾರ ಮಾಡಬೇಕು. ಮಠದ ಅಭಿವೃದ್ಧಿ ಮಾಡಬೇಕೆಂದು ಹೊರತು, ಚುನಾವಣೆಗೆ ನಿಲ್ಲಲು, ರಾಜಕೀಯ ಮಾಡಲು ಅಲ್ಲ ಎಂದು ಭಕ್ತರು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೇ, ಚುನಾವಣೆಗೆ ನಿಲ್ಲಲು ನಾಮಪತ್ರ ಸಲ್ಲಿಸಿದ್ದಲ್ಲಿ, ನೀವು ಮಠ ಬಿಟ್ಟು ಹೊರಡಬೇಕು. ನಮ್ಮದು ಭಾವೈಕ್ಯತೆಯ ಮಠ. ಅವರು ಮಠ ತೊರೆದು ಹೋಗಿ ಬೇಕಾದರೆ ರಾಜಕೀಯ ಮಾಡಲಿ ಎಂದು ಮಠದ ಭಕ್ತರು ಎಚ್ಚರಿಕೆ ನೀಡಿದ್ದಾರೆ.
ಇಬ್ಬರು ಸೇರಿ ಪ್ರಚಾರವನ್ನು ನಿಲ್ಲಿಸಿಬಿಡೋಣ, ಯಾರು ಗೆಲ್ತಾರೆ ನೋಡೋಣ: ಜೋಶಿಗೆ ಲಾಡ್ ಸವಾಲ್
ಯಾರು ಏನೇ ತಿಪ್ಪರಲ್ಲಾಗ ಹೊಡೆದರೂ ಪ್ರಹ್ಲಾದ್ ಜೋಶಿ ಗೆಲ್ಲುತ್ತಾರೆ ಮೋದಿ ಪ್ರಧಾನಿಯಾಗುತ್ತಾರೆ: ಅರವಿಂದ್ ಬೆಲ್ಲದ್..
ಧಾರವಾಡ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ತೀವಿ: ಶಾಸಕ ಮಹೇಶ್ ಟೆಂಗಿನಕಾಯಿ