Health Tips: ಪ್ರತಿದಿನ, ದಿನವಿಡೀ ಶೂಸ್ ಬಳಸುವವರಿಗೆ ಕಾಲಿನಿಂದ ಯಾವ ರೀತಿಯ ಕೆಟ್ಟ ವಾಸನೆ ಬರುತ್ತದೆ ಎಂದು ಗೊತ್ತಿರುತ್ತದೆ. ಅಂಥವರು ಮನೆಗೆ ಹೋಗಿ, ಶೂಸ್ ಬಿಚ್ಚಿದ ಬಳಿಕ, ಇಡೀ ಮನೆ ತುಂಬ ಕಾಲಿನ ದುರ್ನಾತ ಪಸರಿಸುತ್ತದೆ. ಶಾಲೆಗೆ ಹೋಗುವ ವಿದ್ಯಾರ್ಥಿಯರು ಮತ್ತು ಆಫೀಸಿಗೆ ಶೂಸ್ ಧರಿಸಿ ಹೋಗುವವರು ಈ ಸಮಸ್ಯೆ ಅನುಭವಿಸಿಯೇ ಇರುತ್ತಾರೆ. ಹಾಗಾಗಿ ಅಂಥವರಿಗಾಗಿ ನಾವಿಂದು ಟಿಪ್ಸ್ ತಂದಿದ್ದೇವೆ.
ಮೊದಲನೆಯ ಟಿಪ್ಸ್ ಅಂದ್ರೆ, ನೀವು ಸ್ನಾಾನ ಮಾಡುವ ವೇಳೆ, ನಿಮ್ಮ ಕಾಲಿನ ಭಾಗವನ್ನು ಅಂದ್ರೆ ಪಾದ ಮತ್ತು ಕಾಲಿನ ಮೇಲ್ಭಾಗ, ಬೆರಳುಗಳ ಮಧ್ಯಭಾಗ ಎಲ್ಲವನ್ನೂ ಸ್ವಚ್ಛವಾಗಿ ವಾಶ್ ಮಾಡಬೇಕಾಗುತ್ತದೆ. ಮತ್ತು ಕಾಲನ್ನು ಚೆನ್ನಾಗಿ ಒರೆಸಿ, ಒಣಗಿಸಬೇಕು. ಕಾಲು ಒಣಗಿದ ಬಳಿಕವೇ, ಸಾಕ್ಸ್ ಮತ್ತು ಶೂಸ್ ಧರಿಸಬೇಕು. ಯಾಕಂದ್ರೆ ಕಾಲಿನ ಬೆರಳಿನ ಮಧ್ಯಭಾಗದಲ್ಲಿ ಬಹುಬೇಗ ಬ್ಯಾಕ್ಟೀರಿಯಾ ಡೆವಲಪ್ ಆಗುತ್ತದೆ. ಈ ಕಾರಣಕ್ಕೆ ಇಡೀ ಕಾಲನ್ನು ಚೆನ್ನಾಗಿ ವಾಶ್ ಮಾಡಬೇಕು.
ವಾರಕ್ಕೆ ಮೂರು ಬಾರಿಯಾದರೂ ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು, ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ, ಅದರಲ್ಲಿ 15 ನಿಮಿಷ ಕಾಲಿರಿಸಿ ಕುಳಿತುಕೊಳ್ಳಿ. ಇದರಿಂದ ನಿಮ್ಮ ಕಾಲು ಕ್ಲೀನ್ ಆಗುತ್ತದೆ. ವಾಸನೆಯೂ ಬರುವುದಿಲ್ಲ.
ಕೊನೆಯದಾಗಿ ನಿಮ್ಮ ಸಾಕ್ಸ್ ಮತ್ತು ಶೂಸನ್ನು ಚೆನ್ನಾಗಿ ಕ್ಲೀನ್ ಮಾಡಿ ಇಟ್ಟುಕೊಳ್ಳಬೇಕು. ಕಾಲು ಕ್ಲೀನ್ ಆಗಿರುವುದು ಎಷ್ಟು ಮುಖ್ಯವೋ, ನಿಮ್ಮ ಶೂಸ್ ಮತ್ತು ಸಾಕ್ಸ್ ಕ್ಲೀನ್ ಆಗಿ ಇರುವುದು ಕೂಡ ಅಷ್ಟೇ ಮುಖ್ಯ.