Saturday, December 7, 2024

Latest Posts

ಮುಖದಲ್ಲಿರುವ ಮೊಡವೆ ಸಮಸ್ಯೆಗೆ ಮನೆಯಲ್ಲೇ ಮಾಡಿಕೊಳ್ಳಿ ಸುಲಭ ಪರಿಹಾರ

- Advertisement -

Beauty Tips: ನೀವು ಎಷ್ಟೇ ಬೆಳ್ಳಗಿರಿ ಅಥವಾ ಕಪ್ಪಗಿರಿ. ನಿಮ್ಮ ಮುಖ ಕ್ಲೀನ್ ಆಗಿದ್ದರೆ, ನೀವು ಚೆಂದಗಾಣಿಸುತ್ತೀರಿ. ಕಪ್ಪಗಿದ್ದರೂ, ಮುಖ ಕ್ಲೀನ್ ಆಗಿದ್ದರೆ, ಅಂಥವರು ಲಕ್ಷಣವಾಗಿ ಕಾಣುತ್ತಾರೆ. ಆದರೆ ನೀವು ಬೆಳ್ಳಗಿದ್ದೂ, ನಿಮ್ಮ ಮುಖದ ತುಂಬ ಮೊಡವೆ ಇದ್ದರೆ, ಅದು ನಿಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಹಾಗಾದ್ರೆ ಮೊಡವೆ ಹೋಗಲಾಡಿಸಲು ಏನು ಮನೆಮದ್ದು ಮಾಡಬಹುದು ಅಂತಾ ತಿಳಿಯೋಣ ಬನ್ನಿ..

ನಾವು ಕಡಿಮೆ ನೀರು ಕುಡಿದರೆ, ಹೆಚ್ಚು ಎಣ್ಣೆ ಪದಾರ್ಥ, ಬೇಕರಿ ತಿಂಡಿ, ಜಂಕ್‌ ಫುಡ್, ಐಸ್‌ಕ್ರೀಮ್, ಐಸ್ ಬಳಸಿ ಮಾಡಿದ ಪೇಯ, ಮಸಾಲೆ ಪದಾರ್ಥ ತಿಂದರೆ, ನಮ್ಮ ಮುಖದ ಸೌಂದರ್ಯ ಹಾಳಾಗುವುದರ ಜೊತೆೆಗೆ, ನಮ್ಮ ಆರೋಗ್ಯವೂ ಹಾಳಾಗುತ್ತದೆ. ಹಾಗಾಗಿ ನಾವು ತೆಗೆದುಕೊಳ್ಳಬೇಕಾದ ಮೊದಲ ನಿರ್ಧಾರ ಎಂದರೆ, ನಾವು ನಮ್ಮ ಮುಖದ ಸೌಂದರ್ಯ ಕಾಪಾಡಿಕೊಳ್ಳಲು, ಎಣ್ಣೆ ಪದಾರ್ಥ, ಜಂಕ್ ಫುಡ್, ಮಸಾಲೆ ಭರಿತ ನಾನ್‌ವೆಜ್ ತಿಂಡಿ ಇವೆಲ್ಲ ತಿನ್ನುವುದನ್ನು ತ್ಯಜಿಸಬೇಕು.

ಎರಡನೇಯದಾಗಿ ನಮಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುವಷ್ಟು ನೀರು ಕುಡಿಯಬೇಕು. ಓರ್ವ ಮನುಷ್ಯ ಒಂದು ದಿನಕ್ಕೆ 3 ಲೀಟರ್ ನೀರು ಕುಡಿದು ಜೀರ್ಣಿಸಿಕೊಳ್ಳಬಹುದು ಅಂತಾ ಸಾಬೀತಾಗಿದೆ. ಹಾಗಾಗಿ ನೀವು ದಿನಕ್ಕೆ 3 ಲೀಟರ್ ನೀರು ಕುಡಿಯಬಹುದು. ಜೊತೆಗೆ ಸ್ವಲ್ಪ ವಾಕಿಂಗ್, ಮನೆಗೆಲಸ ಎಲ್ಲವೂ ಇದ್ದರೆ ಉತ್ತಮ. ಹೀಗೆ ಮಾಡುವುದರಿಂದ ನೀವು ಕುಡಿದ ನೀರು ಬಹುಬೇಗ ಜೀರ್ಣವಾಗುತ್ತದೆ.

ನಾವು ಹೆಚ್ಚು ನೀರು, ಮಜ್ಜಿಗೆ, ಎಳನೀರು ಕುಡಿಯುವುದರಿಂದ ನಮಗೆ ಮೂತ್ರ ವಿಸರ್ಜನೆಯಾಗುತ್ತದೆ. ಹೆಚ್ಚು ನೀರು ಕುಡಿದು, ಹೆಚ್ಚು ಮೂತ್ರ ವಿಸರ್ಜನೆಯಾದಾಗ, ನಮ್ಮ ದೇಹದಲ್ಲಿರುವ ಕೊಳೆ, ಆ ಮೂತ್ರದ ಮೂಲಕ ಹೊರಹೋಗುತ್ತದೆ. ಆಗ ನಮ್ಮ ತ್ವಚೆಯ ಮೇಲೆ ತನ್ನಿಂದ ತಾನೇ ಗ್ಲೋ ಬರುತ್ತದೆ.

ಇವೆಲ್ಲದರ ಜೊತೆಗೆ ನೀವು ಹಸಿ ತರಕಾರಿ, ಹಣ್ಣಿನ ಸೇವನೆ ಮಾಡಬೇಕು. ನೆನೆಸಿದ ಡ್ರೈ ಫ್ರೂಟ್ಸ್, ಸೊಪ್ಪು, ಮೊಳಕೆ ಕಾಳಿನ ಸೇವನೆ ಮಾಡಬೇಕು. ಇವೆಲ್ಲದುದರಿಂದ ನಿಮ್ಮ ಮುಖದಲ್ಲಿ ನ್ಯಾಚುರಲ್ ಕಾಂತಿ ಬರುತ್ತದೆ. ಮೊಡವೆ ಹೋಗುತ್ತದೆ.

ಹಸಿ ಅರಿಶಿನ ಕೊಂಬು ತೇಯ್ದು ಕೆನೆಯೊಂದಿಗೆ ಮಿಕ್ಸ್ ಮಾಡಿ, ವಾರಕ್ಕೊಮ್ಮೆ ಫೇಸ್‌ಪ್ಯಾಕ್ ಹಚ್ಚಬಹುದು. ದನದ ಹಸಿ ಹಾಲಿನ ಜೊತೆ, ಶ್ರೀಗಂಧ ತೇಯ್ದು ಪೇಸ್ಟ್ ಮಾಡಿ, ಅದರ ಫೇಸ್‌ಪ್ಯಾಕ್ ಬಳಸಬಹುದು. ಹಣ್ಣಾದ ಪಪ್ಪಾಯಿಯ ಫೇಸ್‌ಪ್ಯಾಕ್ ಹಾಕಬಹುದು. ಮುಲ್ತಾನಿ ಮಿಟ್ಟಿ ಕೂಡ ತ್ವಚೆಯ ಅಂದ ಹೆಚ್ಚಿಸಲು ಸಹಕಾರಿ.

- Advertisement -

Latest Posts

Don't Miss