ನಾನು ನಿಮಗೆ ಒಂದು ಕಥೆ ಹೇಳ್ತೀನಿ!: Mohammed Haris Nalapad Exclusive Interview

Special Interview: ಕಾಂಗ್ರೆಸ್ ಯುವ ನಾಯಕರಾದ ನಲಪಾಡ್ ಹ್ಯಾರಿಸ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಡಿಕೆಶಿಯವರ ವಿಷನ್ ಬಗ್ಗೆ ಮಾತನಾಡಿದ್ದಾರೆ.

2023ರಲ್ಲಿ ನಲಪಾಡ್, ಇಂದಿನ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಕೆಲ ಕಾಂಗ್ರೆಸ್ ಕಾರ್ಯಕರ್ತರು ಸೇರಿ ದುಬೈ ಹೋಗಿದ್ದರು. ಆಗ ಡಿಕೆಶಿಯವರು 1 ಸ್ಥಳದಲ್ಲಿ ನಿಂತು ದುಬೈಯನ್ನು ಗಮನಿಸುತ್ತದ್ದರು. ಆಗ ನಲಪಾಡ್ ಸರ್ ಏನು ನೋಡುತ್ತಿದ್ದೀರಾ ಅಂತಾ ಕೇಳಿದ್ರಂತೆ. ಅದಕ್ಕೆ ಉತ್ತರಿಸಿದ ಡಿಕೆಶಿ ನಿನಗೇನು ಕಾಣ್ತಾ ಇದೆ ಅಂತಾ ಕೇಳಿದ್ರಂತೆ. ಅದ್ಕೆ ನಲಪಾಡ್ ಬಿಲ್ಡಿಂಗ್‌ಗೆಲ್ಲಾ ಎಷ್ಟು ಸುಂದರವಾಗಿದೆ ಎಂದು ಹೇಳಿದ್ರಂತೆ.

ಅದಕ್ಕೆ ಡಿಕೆಶಿ ಈ ಬಿಲ್ಡೀಂಗ್ ಕೆಳಗಡೆ ಡೈನೇಜ್ ಸಿಸ್ಟಮ್ ಯಾವ ರೀತಿ ಮಾಡಿರಬಹುದು ಅಂತಾ ನಾನು ಆಲೋಚನೆ ಮಾಡ್ತಿದ್ದೀನಿ ಎಂದು ಹೇಳಿದ್ರಂತೆ.

ಈ ಬಗ್ಗೆ ಮಾತನಾಡಿರುವ ನಲಪಾಡ್, ಡಿಕೆಶಿಯವರು ದುಬೈಗೆ ಹೋದ ವೇಳೆ ಬರೀ ಅಲ್ಲಿನ ಸೌಂದರ್ಯವನ್ನು ಗಮನಿಸಿದ್ದಲ್ಲದೇ, ಅಲ್ಲಿನ ಒಳಚರಂಡಿ ವ್ಯವಸ್ಥೆ ಮತ್ತು ನಿರ್ಮಾಣದ ಆಳವಾದ ತಾಂತ್ರಿಕತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಆಲೋಚಿಸುತ್ತಿದ್ದರು ಎಂದು ನಲಪಾಡ್ ಹೇಳಿದ್ದಾರೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author