Wednesday, June 18, 2025

Latest Posts

State Government ನಿಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇ-ಬೆಳಕು ಯೋಜನೆ ಜಾರಿ..

- Advertisement -

ವಿಧಾನಸೌಧದಲ್ಲಿ ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಇ-ಬೆಳಕು (E-light) ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಿದರು. ಇ-ತಂತ್ರಾಂಶದಿಂದಾಗಿ ಗ್ರಾಮ ಪಂಚಾಯ್ತಿಗಳು ನಿಗದಿತ ಸಮಯದೊಳಗೆ ವಿದ್ಯುತ್ ಸರಬರಾಜು (Power supply)ಕಂಪನಿಗಳಿಗೆ ಬಾಕಿ ಮೊತ್ತವನ್ನು ಕಟ್ಟೋದಕ್ಕೆ ನೆರವಾಗಲಿದೆ.

ಇದಷ್ಟೇ ಅಲ್ಲದೇ ಕಾರ್ಯನಿರ್ವಹಿಸದೇ ಇರೋ ಕುಡಿಯುವ ನೀರು ಸ್ಥಾವರಗಳ ಸಂಪರ್ಕವನ್ನು ನಿಷ್ಕ್ರೀಯಗೊಳಿಸೋದು, ಇದರಿಂದ ಉಂಟಾಗುವಂತ ಅನಗತ್ಯ ವಿದ್ಯುತ್ ವೆಚ್ಚಕ್ಕೆ ಕಡಿವಾಣ ಹಾಕುವಂತ ಕ್ರಮವನ್ನು ಕೈಗೊಳ್ಳಲು ಸಹಕಾರಿಯಾಗಲಿದೆ.

ವಿದ್ಯುತ್ ಬಿಲ್ ಗಳನ್ನು ಆನ್ ಲೈನ್ ಮೂಲಕ ಸಂದಾಯ ಮಾಡೋದಕ್ಕೆ ಸುಲಭವಾಗಲಿದ್ದು, ಇದರಿಂದಾಗಿ ಕುಡಿಯುವ ನೀರು, ಬೀದಿ ದೀಪಗಳ ಬಾಕಿ ಮೊತ್ತವನ್ನು ಕಾಲಕಾಲಕ್ಕೆ ಕಟ್ಟಿ, ಸಮಸ್ಯೆ ಉಂಟಾಗದಂತೆ ನಿರ್ವಹಣೆಗೆ ಅನುಕೂಲ ಆಗಲಿದೆ.

- Advertisement -

Latest Posts

Don't Miss