ಒಂದು ಹೊತ್ತು ಊಟ ಬಿಟ್ಟಾದ್ರೂ ಇರ್ತಿವಿ. ಆದ್ರೆ ಮೊಬೈಲ್ ಬಿಟ್ಟು ಇರೋಕ್ಕೆ ಸಾಧ್ಯವಿಲ್ಲಾ ಅನ್ನೋ ಜನರಿರುವ ಜಮಾನಾ ಇದು. ದೊಡ್ಡ ದೊಡ್ಡ ಶ್ರೀಮಂತರಿಂದ ಹಿಡಿದು ಬಡವರ ತನಕ ಎಲ್ಲರ ಬಳಿಯೂ ಈಗ ಸ್ಮಾರ್ಟ್ ಫೋನ್ ಇದೆ. ಸ್ಮಾರ್ಟ್ ಫೋನ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿರುವುದರಿಂದ, ಆರೋಗ್ಯ ಸಮಸ್ಯೆಯೂ ಹೆಚ್ಚಾಗಿದೆ. ಸ್ಮಾರ್ಟ್ ಫೋನ್‌ನಿಂದ ನಮಗೆ ಎಷ್ಟು ಲಾಭವಿದೆಯೂ ಅದಕ್ಕಿಂತ ಹೆಚ್ಚು ನಷ್ಟ ನಮ್ಮ ಆರೋಗ್ಯಕ್ಕಾಗುತ್ತಿದೆ. ಇದಕ್ಕೆ ಕಾರಣ ನಾವು ಮೊಬೈಲ್ ಇಟ್ಟುಕೊಳ್ಳುವ ರೀತಿ ಸರಿಯಾಗಿ ಇಲ್ಲವಾದದ್ದು. ಹೌದು ಹೆಚ್ಚಿನ ಜನ ಮೊಬೈಲನ್ನ ಎಲ್ಲಿ ಇಟ್ಟುಕೊಳ್ಳಬೇಕು, ಹೇಗೆ ಬಳಸಬೇಕು ಅಂತಾ ತಿಳಿಯದೇ ಇರೋದು. ಹಾಗಾದ್ರೆ ಮೊಬೈಲ್ ಬಳಸುವ ಪ್ರತಿಯೊಬ್ಬರು ತಿಳಿಯಲೇಬೇಕಾದ ಸಂಗತಿ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಮೊಬೈಲನ್ನ ಶರ್ಟ್ ಜೇಬಿನಲ್ಲಿ ಅಥವಾ ಪ್ಯಾಂಟ್ ಜೇಬಿನಲ್ಲಿ ಇರಿಸಿಕೊಳ್ಳಬೇಡಿ. ಬದಲಾಗಿ ಒಂದು ಪರ್ಸ್ ಬಳಸಿ, ಅದರಲ್ಲಿ ಮೊಬೈಲ್ ಇರಿಸಿಕೊಳ್ಳಿ. ಹೀಗೆ ಮಾಡುವುದರಿಂದ ಮೊಬೈಲ್ ರೇಡಿಯೇಶನ್ ಡೈರೆಕ್ಟ್ ಆಗಿ ನಿಮ್ಮ ದೇಹಕ್ಕೆ ತಾಕುವುದಿಲ್ಲ. ಹೀಗೆ ಮಾಡುವುದರಿಂದ ರೇಡಿಯೇಶನ್‌ನಿಂದಾಗು ಸಮಸ್ಯೆಯನ್ನ ನೀವು ಕಡಿಮೆ ಮಾಡಿಕೊಳ್ಳಬಹುದು.
ಎರಡನೇಯದಾಗಿ ಮೊಬೈಲ್ ಚಾರ್ಜ್‌ಗೆ ಹಾಕಿ ವೀಡಿಯೋ ನೋಡುವುದು, ಹಾಡು ಕೇಳುವುದು, ಮೆಸೇಜ್ ಮಾಡುವುದು, ಕಾಲ್ ಮಾಡಿ ಮಾತನಾಡುವುದೆಲ್ಲ ಮಾಡಬೇಡಿ. ಹೀಗೆ ಮಾಡುವುದು ತುಂಬಾ ಡೇಂಜರ್. ಇದರಿಂದ ಮೊಬೈಲ್ ಸ್ಪೋಟವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಚಾರ್ಜ್‌ಗೆ ಇಟ್ಟಾಗಲಾದರೂ, ನಿಮ್ಮ ಮೊಬೈಲ್‌ಗೆ ಸ್ವಲ್ಪ ರೆಸ್ಟ್ ಕೊಡಿ. ಮಲಗುವ ಸಮಯದಲ್ಲಿ ಮೊಬೈಲನ್ನು ನಿಮ್ಮ ತಲೆಯ ಬಳಿ ಇರಿಸಬೇಡಿ. ಇದರಿಂದ ತಲೆ ನೋವಿನ ಸಮಸ್ಯೆ, ಬ್ರೇನ್ ಟ್ಯೂಮರ್, ನೆನಪಿನ ಶಕ್ತಿ ಕ್ಷಿಣಿಸುವ ಸಾಧ್ಯತೆ ಇರುತ್ತದೆ.
ಇನ್ನು ಮೊಬೈಲ್ ಜೊತೆ ಯಾವಾಗಲೂ ಹೆಡ್ ಫೋನ್ ಇರಿಸಿಕೊಳ್ಳಿ. ಕಾಲ್ ಬಂದಾಗ ಡೈರೆಕ್ಟ್ ಆಗಿ ಮೊಬೈಲನ್ನ ಕಿವಿಯ ಬಳಿ ಇರಿಸಿ ಮಾತನಾಡುವ ಬದಲು, ಹೆಡ್‌ಫೋನ್ ಬಳಸಿ ಮಾತನಾಡುವುದು ಒಳ್ಳೆಯದು. ಇನ್ನು ವಾಹನದಲ್ಲಿ ಹೋಗುವಾಗ ಮೊಬೈಲ್‌ನಲ್ಲಿ ಮಾತನಾಡುತ್ತ ಹೋಗಬೇಡಿ. ಎಮರ್ಜೆನ್ಸಿ ಕರೆ ಇದ್ದರೆ ಮಾತ್ರ ಮಾತನಾಡಿ. ಇಲ್ಲವಾದಲ್ಲಿ ವಾಹನದಲ್ಲಿ ಹೋಗುವಾಗ, ಮೊಬೈಲ್ ಬಳಸಲೇ ಬೇಡಿ. ಇದು ಕ್ಯಾನ್ಸರ್‌ಗೆ ಕರೆ ಕೊಟ್ಟಂತೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.




