Hyderabad News: ಸಾಮಾಜಿಕ ಜಾಲತಾಣದಲ್ಲಿ ಹಲವಾರು ರೀತಿಯ ಉತ್ತರ ಪತ್ರಿಕೆಗಳನ್ನು ನೀವು ಕಂಡಿರಬಹುದು. ಕೆಲವರು, ನಾನು ಹೆಚ್ಚು ಓದಿಕೊಂಡು ಬಂದಿಲ್ಲ, ಎಷ್ಟೋ ಗೊತ್ತೋ ಅಷ್ಟೇ ಬರೆದಿದ್ದೇನೆ. ದಯವಿಟ್ಟು ನನಗೆ ಪಾಸ್ ಮಾಡಿ ಅಂತಾ ಬರೆದಿರುತ್ತಾರೆ. ಇನ್ನು ಕೆಲವರು ನಾನು ಪಾಸ್ ಆಗದಿದ್ದಲ್ಲಿ ನನ್ನ ಮನೆಯಲ್ಲಿ ನನಗೆ ಮಂದುವೆ ಮಾಡಿಸುತ್ತಾರೆ, ದಯವಿಟ್ಟು ಪಾಸ್ ಮಾಡಿ ಅಂತಾ ಬರೆದಿರುತ್ತಾರೆ.
ಇನ್ನು ಕೆಲವರು ಶಿಕ್ಷಕರಿಗೇ ಲಂಚ ಕೊಡಲು ಮುಂದಾಗಿರುತ್ತಾರೆ. ಹೀಗೆ ನಾನಾ ರೀತಿಯಲ್ಲಿ ಪರೀಕ್ಷೆಯಲ್ಲಿ ಪಾಸ್ ಮಾಡಲು, ವಿದ್ಯಾರ್ಥಿಗಳು ರಿಕ್ವೆಸ್ಟ್ ಮಾಡುತ್ತಾರೆ. ಆದರೆ ಹೈದರಾಬಾದ್‌ನಲ್ಲಿ ಓರ್ವ ವಿದ್ಯಾರ್ಥಿ, ತನಗೆ ಹೆಚ್ಚು ಮಾರ್ಕ್ಸ್ ಹಾಕದಿದ್ದಲ್ಲಿ, ತಾನು ತನ್ನ ಅಜ್ಜನಿಗೆ ಹೇಳಿಸಿ, ವಾಮಾಚಾರ ಮಾಡಿಸುತ್ತೇನೆ ಎಂದು ಉತ್ತರ ಪತ್ರಿಕೆಯಲ್ಲಿ ಬೆದರಿಕೆ ಹಾಕಿದ್ದಾನೆ.
ರಾಮಾಯಣದ ಮಹತ್ವವನ್ನು ವಿವರಿಸಿ ಎಂದು ಬರೆಯಲಾಗಿತ್ತು. ಆದರೆ ರಾಮಾಯಣದ ಬಗ್ಗೆ ಮಾಹಿತಿ ಗೊತ್ತಿಲ್ಲ ವಿದ್ಯಾರ್ಥಿ, ನೀವೇನಾದರೂ ನನಗೆ ಉತ್ತಮ ಅಂಕ ಕೊಡದಿದ್ದಲ್ಲಿ, ನನ್ನ ಅಜ್ಜನ ಬಳಿ ಹೇಳಿ, ವಾಮಾಚಾರ ಮಾಡಿಸುತ್ತೇನೆ ಎಂದಿದ್ದಾನೆ. ಇದನ್ನು ಚೆಕ್ ಮಾಡುತ್ತಿದ್ದ ಶಿಕ್ಷಕರು, ಇದನ್ನು ಕಂಡು ಶಾಕ್ ಆಗಿದ್ದಾರೆ. ಇನ್ನು ವಿಷಯ ಏನಪ್ಪಾ ಅಂದ್ರೆ, ಆತ ಪರೀಕ್ಷೆಯನ್ನು ಚೆನ್ನಾಗಿಯೇ ಬರೆದು ನೂರಕ್ಕೆ 70 ಅಂಕ ಗಳಿಸಿದ್ದಾನೆ. ಆದರೆ ಶಿಕ್ಷಕರು ಉನ್ನತಾಧಿಕಾರಿಗಳ ಗಮನಕ್ಕೆ ತಂದಿದ್ದು, ಹಾಾಲ್ ಟಿಕೇಟ್ ನಂಬರ್ ಸಂಗ್ರಹಿಸಿ, ಆ ವಿದ್ಯಾರ್ಥಿ ಯಾವ ಶಾಲೆಯವನು..? ಅವನ ಹೆಸರೇನು..? ಅವನು ಯಾವ ಊರಿನವರು ಅಂತಾ ತಿಳಿಯಲಾಗಿದೆ.
ಚುನಾವಣೆ ಪ್ರಚಾರದ ವೇಳೆ ಮಹಿಳೆಗೆ ಕಿಸ್ ಕೊಟ್ಟ ಅಭ್ಯರ್ಥಿ: ಫೋಟೋ ವೈರಲ್