karnataka ದಲ್ಲಿ ಕಳೆದ 24 ಗಂಟೆಗಳಲ್ಲಿ 11698 ಹೊಸ ಕೊರೋನಾ ಪ್ರಕರಣಗಳು ದಾಖಲು..!

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 11698 ಹೊಸ ಕೊರೋನಾ ಪ್ರಕರಣಗಳು(New corona cases)ದಾಖಲಾಗಿದ್ದು, ಬೆಂಗಳೂರು(Bangalore) ಒಂದರಲ್ಲೇ 9221 ಪ್ರಕರಣಗಳು ಕಂಡು ಬಂದಿದೆ. ಕೊರೋನಾ ಪಾಸಿಟಿವ್ ರೇಟ್(Corona Positive Rate) ದರ 7.77% ನಷ್ಟಿದೆ. ಇನ್ನು 1148 ಜನರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 60148 ಕೊರೋನಾ ಪ್ರಕರಣಗಳು ಸಕ್ರಿಯವಾಗಿವೆ. ಇನ್ನು ಇಂದು ರಾಜ್ಯದಲ್ಲಿ ಕೊರೋನಾಗೆ ನಾಲ್ಕು ಸಾವು ಸಂಭವಿಸಿದ್ದು, ನಾಲ್ಕರಲ್ಲಿ ಎರಡು ಬೆಂಗಳೂರಿನಲ್ಲಿ ಸಂಭವಿಸಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಟ್ವೀಟ್(Health Minister K Sudhakar tweeted)ಮೂಲಕ ಮಾಹಿತಿಯನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ 146 ಒಮಿಕ್ರಾನ್ ಪ್ರಕರಣಗಳು(Omicron cases)ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಓಮಿಕ್ರಾನ್ ಸೋಂಕು ಪ್ರಕರಣಗಳು 479ಕ್ಕೆ ಏರಿಕೆಯಾಗಿದೆ.

About The Author