Wednesday, July 2, 2025

Latest Posts

2025ರಲ್ಲಿ ಯಾವ ರಾಶಿಗೆ ಶನಿ ಆಗಮಿಸಲಿದ್ದಾನೆ..? ವೇಣುಗೋಪಾಲ್ ಶರ್ಮಾರಿಂದ ಜ್ಯೋತಿಷ್ಯ ವಿವರಣೆ

- Advertisement -

Horoscope: 2025ನೇ ಇಸವಿ ಬರಲು ಇನ್ನೆರಡೇ ದಿನಗಳು ಬಾಕಿ ಇದೆ. ಈ ವರ್ಷ ನಮ್ಮ ಜೀವನ ಯಾವ ರೀತಿ ಇರಲಿದೆ. ಯಾವ ರಾಶಿಯವರಿಗೆ ಲಕ್ ಯಾಾವ ರಾಶಿಯವರಿಗೆ ಕಷ್ಟ ಅನ್ನೋ ಬಗ್ಗೆ ಜ್ಯೋತಿಷಿಗಳು ವಿವರಿಸಿದ್ದಾರೆ. ಅದರಲ್ಲೂ ಯಾವ ರಾಶಿಗೆ ಈ ವರ್ಷ ಶನಿ ಆಗಮಿಸಲಿದ್ದಾನೆ ಅಂತಲೂ ಜ್ಯೋತಿಷಿಗಳು ಹೇಳಿದ್ದಾರೆ.

ಸಂಸ್ಕೃತ ವಿದ್ವಾಂಸರು, ಜ್ಯೋತಿಷಿಗಳೂ ಆದಂಥ ಶ್ರೀ ವೇಣುಗೋಪಾಲ್ ಶರ್ಮಾ ಅವರು ಶನಿ ಪ್ರಭಾವದ ಬಗ್ಗೆ ವಿವರಿಸಿದ್ದಾರೆ. ಈ ವರ್ಷ ಪ್ರಪಂಚದಲ್ಲಿ ಹೆಚ್ಚಿನ ಜನ ಅನಾರೋಗ್ಯಕ್ಕೀಡಾಗುತ್ತಾರೆ. ಅದರಲ್ಲೂ ಕ್ಯಾನ್ಸರ್‌ ಎನ್ನುವ ಮಹಾಮಾರಿ ಹಲವರ ಜೀವವನ್ನೇ ಕಸಿಯಲಿದೆ. ಇನ್ನು ಹಲವರು ಮಾನಸಿನ ನೆಮ್ಮದಿ ಕಳೆದುಕೊಳ್ಳಲಿದ್ದಾರೆ. ಡಿಪ್ರೆಶನ್ ಎನ್ನುವ ಸಮಸ್ಯೆ ಯುವಕ ಯುವತಿಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ.

2025ರಲ್ಲಿ ಮೇ 28ನೇ ತಾರೀಖಿನಂದು ಗುರು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶವಾಗಲಿದ್ದಾರೆ. ಹೀಗಾಗಿ ಈ ವರ್ಷ ಕೇಂದ್ರದಲ್ಲಿ ಕಾನೂನಿಗೆ ಸಂಬಂಧಿಸಿದ ಹಲವು ಅಭಿವೃದ್ಧಿಗಳಾಗಲಿದೆ. ಹಲವು ಚೇಂಜಸ್ ಆಗಲಿದೆ. ಅಲ್ಲದೇ, ಕಾನೂನು ಕೆಲಸಗಳಲ್ಲಿ ಸುಧಾರಣೆಯಾಗಲಿದೆ. ಏಕೆಂದರೆ, ಶನಿ ದಂಡಾಧಿಕಾರಿಯಾಗಿ, ಭೂಮಿಯ ಮೇಲೆ ಮನುಷ್ಯನ ಜೀವನದಲ್ಲಿ ಸುಧಾರಿಕೆ ತರಲಿದ್ದಾನೆ.

ಇನ್ನು ಈ ವರ್ಷ ಭಾರತದಲ್ಲಿ ಹೆಚ್ಚು ಧಾರ್ಮಿಕ ಕಾರ್ಯಗಳು ನಡೆಯಲಿದೆ. ಅವಧೂತರು, ಬ್ರಹ್ಮಜ್ಞಾನಿಗಳು ಜನಿಸುವ ಸಂಭವವೂ ಇದೆ. ಅಥವಾ ತಂತ್ರ ವಿದ್ಯೆಗಳನ್ನು ಕಲಿಯುವವರ ಸಂಖ್ಯೆ ಹೆಚ್ಚಾಗುತ್ತದೆ. ಇನ್ನು ಮುಖ್ಯವಾದ ವಿಚಾರ ಅಂದ್ರೆ, ಭೂ ಅವ್ಯವಹಾಾರಕ್ಕೆ ಸಂಬಂಧಿಸಿದಂತೆ ಹೆಚ್ಚು ಕೇಸ್‌ಗಳು ಆಚೆ ಬರುವ ಸಾಧ್ಯತೆ ಇದೆ. ಈ ವರ್ಷದ ಇನ್ನಷ್ಟು ಕುತೂಹಲಕಾರಿ ವಿಷಯ ತಿಳಿಯಲು ಈ ವೀಡಿಯೋ ನೋಡಿ.

ಗುರೂಜಿಯೊಂದಿಗೆ ಮಾತನಾಡಲು ಈ ನಂಬರ್‌ಗೆ ಸಂಪರ್ಕಿಸಿ: 9980201685

- Advertisement -

Latest Posts

Don't Miss