ನವದೆಹಲಿ: ದೇಶದ ಹಲವಾರು ರಾಜ್ಯಗಳಲ್ಲಿ ಈ ಬಾರಿ ಗರಿಷ್ಟ ತಾಪಮಾನ ದಾಖಲಾಗಿದ್ದು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ವಿಪರೀತ ಧಗೆ ತಾಳಲಾರದೆ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಝಾನ್ಸಿ ಬಳಿ ಈ ಘಟನೆ ನಡೆದಿದೆ. ಆಗ್ರಾದಿಂದ ತಮಿಳುನಾಡಿನ ಕೊಯಂಬತ್ತೂರಿಗೆ ತೆರಳುತ್ತಿದ್ದ ಉತ್ತರಪ್ರದೇಶ-ಕೇರಳಾ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ದುರಂತ ಸಂಭವಿಸಿದೆ. ಉತ್ತರ ಪ್ರದೇಶದಿಂದ ರೈಲು ಹೊರಟ ಕೆಲ ನಿಮಿಷಗಳಲ್ಲೇ ರೈಲಿನಲ್ಲಿ ತಾಪಮಾನ ಹೆಚ್ಚಾಗಿದೆ. ಹಲವರು ಉಸಿರಾಡೋದಕ್ಕೊ ಕಷ್ಟಪಡುತ್ತಿದ್ದರು ಈ ವೇಳೆ 81 ವರ್ಷದ ವೃದ್ಧೆ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಈ ಬಗ್ಗೆ ರೈಲ್ವೇ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು. ಅಧಿಕಾರಿಗಳು ಸ್ಥಳಕ್ಕೆ ಬಂದು ತಲುಪುವಷ್ಟರಲ್ಲಿ ಒಟ್ಟು ಮೂವರು ಪ್ರಯಾಣಿಕರು ಸಾವನ್ನಪ್ಪಿದ್ರು ಅಂತ ತಿಳಿದುಬಂದಿದೆ. ತೀವ್ರ ಅಸ್ವಸ್ಥನಾಗಿದ್ದ ಮತ್ತೋರ್ವ ಪ್ರಯಾಣಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ರೈಲಿನ ಎಸಿ ದೋಷದಿಂದಾಗಿ ಈ ಅವಘಡ ಸಂಭವಿಸಿದೆಯಾ ಅಂತ ನೋಡೋದಾದ್ರೆ, ಸಾವನ್ನಪ್ಪಿದ ಪ್ರಯಾಣಿಕರೆಲ್ಲರೂ ಎಸಿ ರಹಿತ ಬೋಗಿಯಲ್ಲಿ ಪ್ರಯಾಣಿಸುತ್ತಿದ್ರು ಅಂತ ಹೇಳಲಾಗಿದೆ. ಇನ್ನು ಘಟನೆ ನಡೆದ ಸ್ಥಳ ಝಾನ್ಸಿಯಲ್ಲಿ 45 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ. ದೇಶಾದ್ಯಂತ ಈ ಬಾರಿ ತಾಪಮಾನ ಹೆಚ್ಚಾಗಿರೋದು ಜನರನ್ನು ತಲ್ಲಣಗೊಳಿಸಿದೆ. ಇನ್ನು ಘಟನೆ ಕುರಿತಂತೆ ರೈಲ್ವೆ ಪೊಲೀಸರು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಮೋದಿ ಮತ್ತೆ ಪ್ರಧಾನಿಯಾಗೋಕೆ ಕಾರಣ ಏನ್ ಗೊತ್ತಾ…?? ಮಿಸ್ ಮಾಡದೇ ಈ ವಿಡಿಯೋ ನೋಡಿ