Thursday, July 25, 2024

Latest Posts

INDIAದಲ್ಲಿ ಇಂದು 2,64,202 ಕೊರೋನಾ ಪ್ರಕರಣಗಳು ದಾಖಲು..!

- Advertisement -

ದೆಹಲಿ : ದೇಶದಲ್ಲಿ ಇಂದು 2,64,202 ಕೊರೋನಾ ಪ್ರಕರಣಗಳು(Corona cases)ಪತ್ತೆಯಾಗಿದೆ.ಕಳೆದ 24 ಗಂಟೆಗಳಲ್ಲಿ 315 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ನಿನ್ನೆ ದೇಶದಲ್ಲಿ 2,47,417 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನದಲ್ಲಿ ಶೇಕಡ 6.7 ರಷ್ಟು ಏರಿಕೆಯಾಗಿದೆ. ಇನ್ನು ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 5, 753 ಏರಿದೆ. ಒಮಿಕ್ರಾನ್(Omicron)ಪ್ರಕರಣಗಳು ಅತಿ ಹೆಚ್ಚು ಮಹಾರಾಷ್ಟ್ರ(Maharashtra)ದಲ್ಲಿ 1,367 ವರದಿಯಾಗಿವೆ. ಈ ಪೈಕಿ 734 ಮಂದಿ ಗುಣಮುಖರಾಗಿದ್ದಾರೆ. ಇನ್ನು ಮಹಾರಾಷ್ಟ್ರ , ದೆಹಲಿ(delhi), ಕರ್ನಾಟಕ(karnataka) ಸೇರಿದಂತೆ 28 ರಾಜ್ಯಗಳಲ್ಲಿ ಒಮಿಕ್ರಾನ್ ಪ್ರಕರಣಗಳು ವರದಿಯಾಗಿದೆ.ಇದರೊಂದಿಗೆ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 12,72,073ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 1,09,345 ಮಂದಿ ಗುಣಮುಖರಾಗಿದ್ದಾರೆ. ಇನ್ನು ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,65,82,129 ಏರಿಕೆಯಾಗಿದ್ದು, ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 4,85,350 ಏರಿಕೆಯಾಗಿದೆ. ಇನ್ನೂ ಈವರೆಗೂ ಚೇತರಿಸಿಕೊಂಡಿರುವ ಸಂಖ್ಯೆ 3,48,24,706 ಕ್ಕೆ ಏರಿದೆ.

- Advertisement -

Latest Posts

Don't Miss