Sunday, December 1, 2024

Latest Posts

INDIAದಲ್ಲಿ ಇಂದು 2,82,979 ಕೊವಿಡ್​ ಪ್ರಕರಣಗಳು ವರದಿಯಾಗಿದೆ..!

- Advertisement -

ದೆಹಲಿ : ದೇಶದಲ್ಲಿ ಇಂದು 2,82,979 ಹೊಸ ಕೊರೋನಾ ಪ್ರಕರಣಗಳು(Corona cases)ವರದಿಯಾಗಿದೆ. ಇನ್ನು ಒಮಿಕ್ರಾನ್ ಪ್ರಕರಣಗಳು (Omicron cases)8961 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ(Central Health Department)ಮಾಹಿತಿ ನೀಡಿದೆ. ಇನ್ನು ದೇಶದಲ್ಲಿ 18,31,000 ಕೋವಿಡ್  ಪ್ರಕರಣಗಳು ಸಕ್ರಿಯವಾಗಿವೆ. ಕಳೆದ 24 ಗಂಟೆಗಳಲ್ಲಿ 441 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಕೇರಳ(KERALA)ದಲ್ಲಿ 212 ಮಂದಿ, ಮಹಾರಾಷ್ಟ್ರ(Maharashtra)ದಲ್ಲಿ 53 ಮಂದಿ, ಪಶ್ಚಿಮಬಂಗಾಳ(West Bengal)ದಲ್ಲಿ 34 ಮಂದಿ ಸಾವನ್ನಪ್ಪಿದ್ದಾರೆ. ಸಾಯುತ್ತಿರುವವರ ಪ್ರಮಾಣ 1.29 ರಷ್ಟಿದ್ದು, ಇನ್ನು ಚೇತರಿಕೆ ರೇಟ್​ 93.88ಕ್ಕೆ ಇಳಿದಿರುವುದು ತುಸು ಆತಂಕ ತಂದಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

- Advertisement -

Latest Posts

Don't Miss