www.karnatakatv.com : ಸಾವು ಎನ್ನುವುದು ಮನುಷ್ಯನ ಬೆನ್ನ ಹಿಂದೆಯೇ ಇರುತ್ತದೆ , ಆದರೆ ಯಾವಾಗ ಬರುತ್ತದೋ ಗೊತ್ತಿರುವುದಿಲ್ಲ ಇಂತಹದ್ದೇ ಒಂದು ಘಟನೆ ಸಂಭವಿಸಿದ್ದು, ಇಂಡಿಯ ಅಂಡರ್ 19 ತಂಡದ ಮಾಜಿ ನಾಯಕ ಅವಿ ಬರೋಟ್ ರವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ .
ಭಾರತದ ಕಿರಿಯರ ತಂಡದ ಮಾಜಿ ಕ್ಯಾಪ್ಟನ್ ಹಾಗು ಸೌರಾಷ್ಟ್ರ ತಂಡದ ಕ್ರಿಕಟಿಗ ಕ್ಯಾಪ್ಟನ್ ಆಗಿದ್ದರು ಮತ್ತು ದೇಶೀಯ ಕ್ರಿಕೇಟ್‌ನಲ್ಲಿ ಅನುಭವಿ ಆಟಗಾರರ ಪೈಕಿ ಒಬ್ಬರೆನಿಸಿದ್ದ 29 ವರ್ಷ ಅವಿ ಬರೋಟ್ ಸಣ್ಣ ವಯಸ್ಸಿಗೆ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ ,
ನೆನ್ನೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯವನ್ನ ಮನೆಯಲ್ಲಿ ವೀಕ್ಷಿಸುತ್ತಿದ್ದ ವೇಳೆಯಲ್ಲಿ ಹೃದಯಕ್ಕೆ ಸಂಭoದಿಸಿದ ನ್ಯೂನ್ಯತೆ ಕಾರ್ಡಿಯಾಕ್ ಅರೆಸ್ಟ್ ಆಗಿ ಮೃತಪಟ್ಟಿದ್ದಾರೆ.
29 ವರ್ಷದವರಾಗಿದ್ದ ಅವಿ ಬರೋಟ್ ,ವಿಕೆಟ್ ಕೀಪರ್, ಮ್ಯಾಟ್ಸ್ಮನ್ ಮತ್ತು ಬೌಲಿಂಗ್ ಈ ಮೂರು ವಿದ್ಯೆಗಳನ್ನು ಬಲ್ಲವರಾಗಿದ್ದು ,ಆಲ್‌ರೌಂಡರ್ ಆಗಿದ್ದರು . ಬಲಗೈ ಬ್ಯಾಟಿಂಗ್ ಮತ್ತು ಆಫ್ ಸ್ಪಿನ್ ಮಾಡಬಲ್ಲವರಾಗಿದ್ದ ಅವರು ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ರು ಮತ್ತು 2011 ರಲ್ಲಿ ಭಾರತ ಕಿರಿಯರ ತಂಡದ ನಾಯಕರಾಗಿದ್ದರು . ನಂತರ ಸೌರಾಷ್ಟç ಮತ್ತು ಹರಿಯಾಣ ತಂಡಗಳನ್ನೂ ಅವರು ಪ್ರತಿನಿಧಿಸಿದ್ದರು ,ಒಟ್ಟು 38 ಪ್ರಥಮ ದರ್ಜೆ ಪಂದ್ಯಗಳಲ್ಲಿ 1547 ರನ್‌ಗಳು , ಲಿಸ್ಟ್ ಎ ಪಂದ್ಯಗಳಿAದ 1030 ರನ್‌ಗಳು , ಹಾಗು ದೇಶೀಯ ಟಿ20 ಕ್ರಿಕೇಟ್‌ನಲ್ಲಿ 20 ಪಂದ್ಯಗಳಿoದ 717 ರನ್ ಗಳಿಸಿದ ಉಜ್ವಲ ಪ್ರತಿಬೆ ಎನಿಸಿದ್ದರು . ಸೌರಾಷ್ಟ್ರ 21 ರಣಜಿ ಪಂದ್ಯ ಹಾಗು 11 ಟಿ20 ಪಂದ್ಯಗಳನ್ನು ಆಡಿದ್ದರು .
ವಿಷೇಷವೆಂದರೆ ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಅವಿ ಬರೋಟ್ ಕೇವಲ 53 ಬಾಲ್‌ನಲ್ಲಿ 122 ರನ್ ಗಳಿಸಿ ಎಲ್ಲರ ಗಮನವನ್ನು
ಸೆಳೆದಿದ್ದರು . ಐದು ದಿನಗಳ ಹಿಂದಷ್ಟೇ ಅವರು ರಿಲಾಯನ್ಸ್ ಜಿ-1 ಟಿ20 ಟೂರ್ನಿಯ ಫೈನಲ್‌ನಲ್ಲಿಯೂ ಅವರು 43 ಬಾಲ್‌ನಲ್ಲಿ 72 ರನ್ ಚಚ್ಚಿ ಸೌರಾಷ್ಟ್ರ ಚಾಂಪಿಯನ್ ಆಗುವಂತೆ ಮಾಡಿದ್ದರು . ಇವರ ಸ್ಟ್ರೈಕ್ ರೇಟ್ 142.62 ಇದೆ . ಮುಂದಿನ ಋತುವಿನ ಐಪಿಎಲ್ ಆಟಗಾರರ ಹರಾಜಿನಲ್ಲಿ ಅವರು ಯಾವುದಾದರು ತಂಡದ ಪಾಲಾಗುವ ಸಾಧ್ಯತೆಯು ಇತ್ತು ಎಂದು ಅವರ ಆಪ್ತ ವಲಯ ಅಭಿಪ್ರಾಯ ಪಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಬಿಸಿಸಿಐ ಕಾರ್ಯದರ್ಶಿ ಸೇರಿದಂತೆ ಹಲವರು ಅವಿ ಬರೊಟ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ , ಭಾರತ ಅಂಡರ್-19 , ಸೌರಾಷ್ಟ್ರ ,ಮತ್ತು ಹರಿಯಾಣ ತಂಡಗಳನ್ನು ಪ್ರತಿನಿಧಿಸಿದ್ದ ಅವಿ ಬರೋಟ್ ಉದಯೋನ್ಮುಖ ಪ್ರತಿಭೆಯಾಗಿದ್ದರು . ಅವರು ಇಷ್ಟು ಬೇಗನೆ ನಮ್ಮನ್ನ ಅಗಲಿದ್ದು ಆಘಾತ ನೀಡಿದೆ . ಅವರ ಕುಟುಂಬ ಮತ್ತು ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಜಯ್ ಶಾ ಪ್ರಾರ್ಥಿಸಿದ್ದಾರೆ .
ಈಗೆ ಒಬ್ಬ ಒಳ್ಳೆಯ ಕ್ರಿಕೇಟರ್ ಸಾವನ್ನಪ್ಪಿರುವುದು ಬೇಸರದ ಸಂಗತಿಯಾಗಿದೆ .
ಸಂಪತ್‌ಶೈವ , ನ್ಯೂಸ್ ಡೆಸ್ಕ್ ,ಕರ್ನಾಟಕ ಟಿವಿ