www.karnatakatv.net: ಡೆನ್ಮಾರ್ಕ್ : ಭಾನುವಾರ ನಡೆದ ಊಬರ್ ಕಪ್ ಫೈನಲ್ಸ್ ಬ್ಯಾಡ್ಮಿಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತ ಸ್ಪೇನ್ ಎದುರು 3-2 ರಿಂದ ಜಯಗಳಿಸಿದೆ. ತಾರಾ ಆಟಗಾರ್ತಿ ಸೈನಾ ನೆಹ್ವಾಲ್ ಗಾಯದಿಂದ ಹೊರಗುಳಿದರು ಎದೆಗುಂದದ ಭಾರತ ಮಹಿಳಾ ತಂಡವು ಜಯವನ್ನು ಗಳಿಸಿದೆ. ತಂಡದಲ್ಲಿ ಸೈನಾ ಅವರ ಮೂಲಕವೇ ಅಭಿಯಾನವನ್ನು ಆರಂಭಿಸಿತು . ಸಿಂಗಲ್ಸ್ ವಿಭಾಗದಲ್ಲಿ ಕ್ಲಾರಾ ಅಜುರ್ ಮೆಂಡಿ ಅವರಿಗೆ ಎದುರಾಗಿದ್ದ ಸೈನಾ ಮೊದಲ ಗೇಮ್ಸ್ ಅನ್ನು 20-22 ರಿಂದ ಕೈಚೆಲ್ಲಿದರು .ನಂತರ ತೊಡೆಯ ಮಾಂಸಖoಡದ ನೋವಿನಿಂದ ಬಳಲಿದ ಅವರು ಪಂದ್ಯದಿoದ ಹಿಂದೆ ಸರಿಯುತ್ತಾರೆ .
” ಪಂದ್ಯ ನಡೆಯುತ್ತಿರಬೇಕಾದರೇ ನೋವು ಹೆಚ್ಚಿತು ಆದರೂ ಲಯಕ್ಕೆ ಮರಳಲು ಯತ್ನಿಸದೆ. ಆದರೂ ಅದು ಸಾಧ್ಯವಾಗಲಿಲ್ಲ . ಉಸಿರನ್ನು ಹಿಂದಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ನೋವು ಸದಾ ಉಲ್ಬಣಿಸುತ್ತಿತ್ತು. ಇದರಿಂದ ನಾನು ನಾನು ಹಿಂದೆ ಸರಿಯಬೇಕಾಯಿತು . ಎಂದು ಸೈನಾ ಹೇಳಿದ್ದಾರೆ. ಎರಡನೇ ಸುತ್ತಿನಲ್ಲಿ ಬಂದ ಮಾಳವಿಕ ಬಾನ್ಸೋದ್ ಸೊಲಿನ ಭೀತಿಯಲ್ಲಿದ್ದ ಭಾರತಿಯ ತಂಡವನ್ನು ಗೆಲುವಿನತ್ತ ಕೊಂಡೊಯ್ದರು . ಸ್ಪೇನ್‌ನ ಬೀಟ್‌ರೀಜ್ ಕೊರ್ರಾಲೆಸ್ ಎದುರು ಪ್ರತಿಸ್ಪರ್ಧಿಯಾಗಿಳಿದ ಮಾಳವಿಕ 21-13 , 21-15 ರಿಂದ ಜಯದ ನಗೆಯನ್ನು ಬೀರಿದರು .
ತನಿಶಾ ಕ್ರಾಸ್ಟೋ-ಋತುಪರ್ಣಾ ಪಂಡಾ ಜೋಡಿಯು ಡಬಲ್ಸ್ ವಿಭಾಗದಲ್ಲಿ ಶ್ರೇಷ್ಟ ಸಾಮರ್ಥ್ಯ ತೋರಿದರು . 21-10 , 21-8 ರಿಂದ ಪೌಲಾ ಲೋಪೆಜ್ ಲೊರೆನಾ ಯೂಸಲ್ ಅವರನ್ನು ಮಣಿಸಿದರು .
ಈ ಐದು ಸುತ್ತುಗಳ ಪಂದ್ಯದಲ್ಲಿ ಭಾರತ 2-1 ರಿಂದ ಮುನ್ನಡೆ ಗಳಿಸಿದೆ. ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನಲ್ಲಿ ಅಧಿತಿ ಭಟ್ ಕೂಡ ಮಿಂಚಿದರು ,21-16 ,21-14 ರಿಂದ ಸ್ಪೇನ್ ನ ಅನಿಯಾ ಸೆಟಿನ್ ಅವರನ್ನು ಸೊಲಿಸಿದರು . ಆದರೆ ಡಬಲ್ಸ್ ವಿಭಾಗದಲ್ಲಿ ಕಾಮನ್ ವೆಲ್ತ್ ಗೇಮ್ ಕಂಚಿನ ಪದಕ ವಿಜೇತ ಜೋಡಿ ಎನ್,ಸಿಕ್ಕಿ ರೆಡ್ಡಿ – ಅಶ್ವಿನಿ ಪೊನ್ನಪ್ಪ ರವರು 18-21 , 21-14 ,17-21 ರಿಂದ ಅಜುರ್ ಮೆಂಡಿ ಮತ್ತು ಕೊರಾಲೆಸ್ ಎದುರು ಸೋಲು ಅನುಭವಿಸಿದರು .
ಸಂಪತ್ ಶೈವ, ನ್ಯೂಸ್ ಡೆಸ್ಕ್. ಕರ್ನಾಟಕ ಟಿವಿ.