Friday, November 14, 2025

Latest Posts

`ಭಾರತಕ್ಕೆ ಆವೇಶ’ ಭರಿತ ಗೆಲುವು :ಮಿಂಚಿದ ಕಾರ್ತಿಕ್, ಆವೇಶ್ ಖಾನ್ 

- Advertisement -

ರಾಜ್‍ಕೋಟ್: ದಿನೇಶ್ ಕಾರ್ತಿಕ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಯುವ ವೇಗಿ ಆವೇಶ್ ಖಾನ್ ಅವರ ಅತ್ಯದ್ಭುತ ಬೌಲಿಂಗ್ ದಾಳಿಯ ನೆರೆವಿನಿಂದ ಭಾರತ ತಂಡ ದ.ಆಫ್ರಿಕಾ ವಿರುದ್ಧ ನಾಲ್ಕನೆ ಟಿ20 ಪಂದ್ಯದಲ್ಲಿ 82 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.ಇದರೊಂದಿಗೆ ಪಂತ್ ಪಡೆ 2-2 ಸರಣಿ ಸಮಗೊಳಿಸಿದೆ.

ಟಾಸ್ ಗೆದ್ದ  ದ.ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲ ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‍ಗಳಲ್ಲಿ  169/6 ಗಳಿಸಿತು. ದ.ಆಫ್ರಿಕಾ ತಂಡ 16.5 ಓವರ್‍ಗಳಲ್ಲಿ 87 ರನ್‍ಗಳಿಗೆ ಸರ್ವಪತನ ಕಂಡಿತು.

170 ರನ್ ಗುರಿ ಬೆನ್ನತ್ತಿದ ದ.ಆಫ್ರಿಕಾ ತಂಡ ವೇಗಿ ಆವೇಶ್ ದಾಳಿಗೆ ಪತರಗುಟ್ಟಿ ಹೋಯಿತು. ಆರಂಭಿಕರಾದ ಕ್ವಿಂಟಾನ್ ಡಿಕಾಕ್ (14 ರನ್) ರನೌಟ್ ಆದರು. ನಾಯಕ ಟೆಂಬಾ ಬಾವುಮೆ ರಿಟೈರ್ ಹರ್ಟ್ ಆಗಿ ಹೊರ ನಡೆದರು. ಡ್ವೇನ್ ಪ್ರಿಟೋರಿಯಸ್ ( 0), ವಾನ್ ಡೆರ್ ಡುಸೆನ್ (20)ಆವೇಶ್ ಖಾನ್‍ಗೆ ವಿಕೆಟ್ ಒಪ್ಪಿಸಿದರು.ಹೆನ್ರಿಕ್ ಕ್ಲಾಸೆನ್ 8, ಡೇವಿಡ್ ಮಿಲ್ಲರ್ 9, ಮಾರ್ಕೊ ಹೆನ್ಸನ್ 12, ಕೇಶವ್ ಮಹಾರಾಜ್ 0, ಅನರಿಚ್ ನೊಟ್ರ್ಜೆ 1, ಲುಂಗಿ ಗಿಡಿ 4, ತಬ್ರೇಜ್ ಶಂಶಿ ಅಜೇಯ 4 ರನ್ ಗಳಿಸಿದರು.

ದಿನೇಶ್ ಕಾರ್ತಿಕ್ ಸೋಟಕ ಬ್ಯಾಟಿಂಗ್ 

ಭಾರತ ಪರ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ (5 ರನ್) ಮತ್ತು ಇಶಾನ್ ಕಿಶನ್ (27 ರನ್) ಉತ್ತಮ ಆರಂಭ ಕೊಡುವಲ್ಲಿ ಎಡವಿದರು. ನಂತರ ಶ್ರೇಯಸ್ ಅಯ್ಯರ್ ವೇಗಿ ಹೆನ್ಸನ್ (4)ಎಸೆತದಲ್ಲಿ ಎಲ್‍ಬಿ ಬಲೆಗೆ ಬಿದ್ದರು.

40 ರನ್‍ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನಾಯಕ ರಿಷಬ್ ಪಂತ್ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ತಂಡದ ಕುಸಿತ ತಡೆದರು. ರಿಷಬ್ ಪಂತ್  (17 ರನ್) ಔಟಾದಾಗ ತಂಡ ಮತ್ತೆ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು.

ಆರನೆ ಕ್ರಮಾಂಕದಲ್ಲಿ  ಬಂದ ದಿನೇಶ್ ಕಾರ್ತಿಕ್ ಸೋಟಕ ಬ್ಯಾಟಿಂಗ್ ಮಾಡಿದರು. ಕಾರ್ತಿಕ್ 26 ಎಸೆತದಲ್ಲಿ  ಅರ್ಧ ಶತಕ ಸಿಡಿಸಿದರು. ಒಟ್ಟು 9 ಬೌಂಡರಿ 2ಸಿಕ್ಸರ್ ಸಿಡಿಸಿ 55 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 46, ಅಕ್ಷರ್ ಪಟೇಲ್ ಅಜೇಯ 8, ಹರ್ಷಲ್ ಪಟೇಲ್ ಅಜೇಯ 1 ರನ್ ಗಳಿಸಿದರು. ಭಾರತ ತಂಡ ನಿಗದಿತ 20 ಓವರ್‍ಗಳಲ್ಲಿ  6 ವಿಕೆಟ್ ನಷ್ಟಕ್ಕೆ  169 ರನ್ ಕಲೆ ಹಾಕಿತು.

 

- Advertisement -

Latest Posts

Don't Miss