Thursday, July 10, 2025

Latest Posts

ಟರ್ಕಿಯರಿಗೆ ಶಾಕ್ ನೀಡಿದ ಭಾರತೀಯ ವ್ಯಾಪಾರಿಗಳು: ಮಹಾರಾಷ್ಟ್ರ ಮಾರುಕಟ್ಟೆಯಿಂದ ಮಹತ್ವದ ತೀರ್ಮಾನ

- Advertisement -

International News: ಪಹಲ್ಗಾಮ್ ದಾಳಿ ನಡೆದ ಬಳಿಕ, ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ನಲ್ಲಿ ಇರುವ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ, ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಪಾಕಿಸ್ತಾನಕ್ಕೆ ಚೀನಾ ಮತ್ತು ಟರ್ಕಿ ದೇಶ ಬೆಂಬಲಿಸಿತ್ತು. ಈ ಕಾರಣಕ್ಕೆ ಭಾರತೀಯರೂ ಚೀನಾನು ಬೇಡಾ ಟರ್ಕಿನೂ ಬೇಡಾ ಅಂತಾ ಅಭಿಯಾನ ಶುರು ಮಾಡಿತ್ತು. ಅಲ್ಲದೇ, ಈ ಎರಡೂ ದೇಶಗಳ ವಸ್ತುಗಳನ್ನು ಸಹ ಬ್ಯಾನ್ ಮಾಡಬೇಕು ಎಂದು ಭಾರತೀಯರು ಆಗ್ರಹಿಸಿದ್ದರು.

ಇದೀಗ ಭಾರತದ ವ್ಯಾಪಾರಿಗಳು ಟರ್ಕಿಯರಿಗೆ ಶಾಕ್ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಇಷ್ಟು ದಿನ ಟರ್ಕಿಯ ಸೇಬು ಹಣ್ಣನ್ನು ಖರೀದಿಸಲಾಗುತ್ತಿತ್ತು. ಆದರೆ ಈ ದೇಶದವರು ಪಾಕಿಸ್ತಾನವನ್ನು ಬೆಂಬಲಿಸಿರುವ ಕಾರಣಕ್ಕೆ, ಅಲ್ಲಿನ ಸೇಬು ಹಣ್ಣನ್ನು ನಾವು ಖರೀದಿಸುವುದಿಲ್ಲವೆಂದು ಭಾರತೀಯ ವ್ಯಾಪಾರಿಗಳು ಹೇಳಿದ್ದಾರೆ.

ಎಪಿಎಂಸಿ ಮಾರುಕಟ್ಟೆಯ ಸೇಬು ವ್ಯಾಪಾರಿ ಸುಯೋಗ್ ಝೆಂಡೆ, ಟರ್ಕಿ ಪಾಕಿಸ್ತಾನವನ್ನು ಬೆಂಬಲಿಸುವುದರಿಂದ ನಾವು ಅಲ್ಲಿನ ಸೇಬುವನ್ನು ಖರೀದಿಸುವುದಿಲ್ಲ. ಪಾಕಿಗಳ ವಿರುದ್ಧ ಭಾರತೀಯ ಸೇನೆ ದಾಳಿ ನಡೆಸಿದರೆ, ಈ ದೇಶದವರು ಪಾಕಿಗಳಿಗೆ ಡ್ರೋನ್ ನೀಡಿ ಸಹಕರಿಸಿದ್ದಾರೆ. ಹಾಗಾಗಿ ಟರ್ಕಿಯ ಸೇಬುಗಳನ್ನು ನಾವು ಖರೀದಿಸುವುದಿಲ್ಲವೆಂದು ಹೇಳಿದ್ದಾರೆ.

ಅಲ್ಲದೇ, ಅದರ ಬದಲು ಹಿಮಾಚಲ ಪ್ರದೇಶ, ಕಾಶ್ಮೀರ ಹೀಗೆ ನಮ್ಮ ದೇಶದಲ್ಲಿ ಬೆಳೆದ ಸೇಬುಗಳನ್ನು ಮಾತ್ರ ಖರೀದಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಅವರ ಬಳಿ ಬರುವ ಕೆಲವು ಗ್ರಾಹಕರು, ನಮಗೆ ಟರ್ಕಿ ಸೇಬು ಹಣ್ಣು ಬೇಡಾ ಎಂದು ನೇರವಾಗಿ ಹೇಳಿ, ಭಾರತದ ಸೇಬು ಹಣ್ಣನ್ನಷ್ಟೇ ಖರೀದಿಸುತ್ತಿದ್ದಾರೆಂದು ಹೇಳಿದ್ದಾರೆ. ಇನ್ನು ಭಾರತೀಯ ವ್ಯಾಪಾರಿಗಳ ಈ ನಿರ್ಧಾರದಿಂದ ಟರ್ಕಿ ದೇಶಕ್ಕೆ 1200-1500 ಕೋಟಿ ರೂಪಾಯಿ ನಷ್ಟವಾಗುತ್ತಿದೆ.

ಟರ್ಕಿ ದೇಶದಲ್ಲಿ ಭೂಕಂಪ ಬಂದಾಗ ಅದಕ್ಕೆ ಬೇಕಾದ ಸೌಕರ್ಯಗಳನ್ನು ರವಾನಿಸಿ ಸಹಾಯ ಮಾಡಿದ್ದು ಭಾರತ. ಆದರೆ ಟರ್ಕಿ ಮಾತ್ರ ಆ ಸಹಾಯವನ್ನು ಮರೆತು ಪಾಕಿಸ್ತಾನದ ಸಹಾಯಕ್ಕೆ ನಿಂತಿರುವುದು ವಿಪರ್ಯಾಸದ ಸಂಗತಿ.

- Advertisement -

Latest Posts

Don't Miss