Thursday, June 19, 2025

Latest Posts

ಪ್ರಪಂಚದಲ್ಲಿರುವ ಸುಂದರ ಪಾರಿವಾಳಗಳ ಬಗ್ಗೆ ನಿಮಗೆಷ್ಟು ಗೊತ್ತು..?

- Advertisement -

ನಾವು ನಿಮಗೆ ಈಗಾಗಲೇ ಪ್ರಪಂಚದಲ್ಲಿರುವ ವಿಚಿತ್ರ ಪ್ರಾಣಿ, ಪಕ್ಷಿಗಳ ಬಗ್ಗೆ, ಬಿಳಿ ಬಣ್ಣದ ಪ್ರಾಣಿ, ಪಕ್ಷಿಗಳ ಬಗ್ಗೆ ಮತ್ತು ಸುಂದರವಾದ ನವಿಲುಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ನಾವು ಪ್ರಪಂಚದಲ್ಲಿರುವ ಸುಂದರ ಪಾರಿವಾಳಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ನಾವೆಲ್ಲ ಸಾಮಾನ್ಯವಾದ ಕಂದು ಬಣ್ಣದ ಮತ್ತು ಬಿಳಿ ಪಾರಿವಾಳವನ್ನ ನೋಡಿರ್ತೀವಿ. ಆದ್ರೆ ಈ ಪ್ರಪಂಚದಲ್ಲಿ ಹಲವು ರೀತಿಯ ಪಾರಿವಾಳಗಳಿದೆ. ಅವುಗಳು ಅಪರೂವಾಗಿದ್ದು, ಅದನ್ನ ನಾವು ಟಿವಿಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಷ್ಟೆ ನೋಡಲು ಸಾಧ್ಯ. ಅಂಥ ಪಾರಿವಾಳಗಳ ಬಗ್ಗೆ ಪುಟ್ಟ ಮಾಹಿತಿಯನ್ನ ತಿಳಿಯೋಣ ಬನ್ನಿ..

ಇಂಗ್ಲಿಷ್ ಪೌಟರ್ ಪೀಜೆನ್. ಇದು ಇಂಗ್ಲೆಂಡಿನಲ್ಲಿ ಕಾಣಸಿಗುವ ಪಾರಿವಾಳವಾಗಿದೆ. ಸಾಧಾರಣ ಪಾರಿವಾಳಗಳಿಗಿಂತ ಕೊಂಚ ಉದ್ದವಾಗಿರುವ ಈ ಪಾರಿವಾಳ, ಎರಡು ಮೂರು ಬಣ್ಣಗಳಿಂದ ಕೂಡಿದ್ದಾಗಿದೆ. ಇದರ ಕತ್ತು ದಪ್ಪವಾಗಿದ್ದು, ಕಾಲುಗಳಿಗೂ ಪುಕ್ಕವಿದೆ. ಹೀಗಾಗಿ ಇದು ಡಿಫ್ರೆಂಟ್ ಆಗಿ ಕಾಣುವ ಪಾರಿವಾಳವಾಗಿದೆ.

ಫ್ರಿಲ್ ಬ್ಯಾಕ್ ಪೀಜನ್. ಇದರ ಹೆಸರಿಗೆ ತಕ್ಕಂತೆ, ಈ ಪಾರಿವಾಳದ ಹಿಂಭಾಗ ಫ್ರಿಲ್ ಫ್ರಾಕ್ ಹಾಕಿದ ಹಾಗೆ ಇದೆ. ಗುಂಗುರು ರೆಕ್ಕೆಯ ಈ ಪಾರಿವಾಳ, ನೋಡೋಕ್ಕೆ ತುಂಬಾ ಸುಂದರವಾಗಿ ಕಾಣತ್ತೆ. ಕಾಲು ಮುಚ್ಚಿ ಹೋಗುವಷ್ಟು ಪುಕ್ಕ ಹೊಂದಿರುವ ಈ ಪಾರಿವಾಳ, 4ರಿಂದ 5 ಬಣ್ಣದಲ್ಲಿ ಕಂಡು ಬರುತ್ತದೆ. ಇದು ನೋಡೋಕ್ಕೆ ಬಿಳಿಯಾಗಿದ್ದು, ಇದರ ರೆಕ್ಕೆ ಮಾತ್ರ, ಕಪ್ಪು, ಕಂದು, ಬಿಳಿ ಹೀಗೆ ನಾಲ್ಕೈದು ಬಣ್ಣದ್ದಾಗಿರುತ್ತದೆ.

ಫೇಂಟಲ್ ಪೀಜನ್. ಈ ಪಾರಿವಾಳ ತನ್ನ ರೆಕ್ಕೆಯಿಂದಲೇ ಸೌಂದರ್ಯಕ್ಕಾಗಿಯೇ ಹೆಸರಾಗಿದೆ.  ಈ ಪಾರಿವಾಳ ಎಲ್ಲ ಪಾರಿವಾಳಗಳಿಗಿಂತ ಸುಂದರ ಪಾರಿವಾಳವಾಗಿದೆ. ಯಾಕಂದ್ರೆ ಇವು ಗಂಡು ನವಿಲು ಹೊಂದಿರುವಂತೆ ರೆಕ್ಕೆಯನ್ನು ಹೊಂದಿವೆ. ಇವುಗಳದ್ದು ಪುಟ್ಟ ಪುಟ್ಟ ರೆಕ್ಕೆಗಳಾಗಿದ್ದರೂ ಕೂಡ, ಇವು ಚೆಂದಗಾಣಿಸುತ್ತದೆ.

- Advertisement -

Latest Posts

Don't Miss