ಲಕ್ಷ್ಮೀ ದೇವಿ ಯಾರಿಗೆ ಬೇಡ ಹೇಳಿ. ಜನ ರಾತ್ರಿ ಹಗಲೆಂದು ದುಡಿಯುವುದೇ ಲಕ್ಷ್ಮೀ ದೇವಿ ನಮ್ಮ ಮೇಲೆ ಕೃಪೆ ತೋರಿಸಲಿ ಎಂದು. ಹಲವರು ಪ್ರತೀ ಶುಕ್ರವಾರ ಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹೂವು ಹಣ್ಣು ನೈವೇದ್ಯಗಳನ್ನು ಅರ್ಪಿಸುತ್ತಾರೆ. ವೃತಾದಿಗಳನ್ನು ಮಾಡುತ್ತಾರೆ. ನಾವಿವತ್ತು ಲಕ್ಷ್ಮೀ ದೇವಿಗೆ ಇಷ್ಟವಾಗುವ ನೈವೇದ್ಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಲಕ್ಷ್ಮೀ ದೇವಿಗೆ ಕೆಂಪು ಹೂವು ಇಷ್ಟವಾಗುತ್ತದೆ. ಬಿಳಿ ಮತ್ತು ಹಳದಿ ಬಣ್ಣದ ನೈವೇದ್ಯವನ್ನು ಆಕೆ ಇಷ್ಟ ಪಡುತ್ತಾಳೆ. ಅದರಲ್ಲೂ ದೇವಿ ಗೂಡಾನ್ನ ಪ್ರಿಯೆ. ಗೂಡಾನ್ನ ಎಂದರೆ ಬೆಲ್ಲದ ಅನ್ನ. ಹಾಗಾಗಿ ಹೆಚ್ಚಿನ ಜನರು ಗೂಡಾನ್ನವನ್ನೇ ದೇವಿಗೆ ಅರ್ಪಿಸುತ್ತಾರೆ. ಅನುಕೂಲವಿಲ್ಲದಿದ್ದವರು, ಬೆಲ್ಲವನ್ನ ನೈವೇದ್ಯ ಮಾಡುತ್ತಾರೆ. ಅಲ್ಲದೇ ಒಣ ಹಣ್ಣುಗಳು ಅಂದ್ರೆ ಡ್ರೈಫ್ರೂಟ್ಸ್‌ಗಳ ಜೊತೆ ಕಲ್ಲು ಸಕ್ಕರೆ ಬೆರೆಸಿ ಲಕ್ಷ್ಮೀ ದೇವಿಗೆ ನೈವೇದ್ಯ ಮಾಡಲಾಗುತ್ತದೆ.
ಅಕ್ಕಿ ಕಡುಬು, ಅಕ್ಕಿ ಪಾಯಸ ಅಮ್ಮನಿಗೆ ಹೆಚ್ಚು ಇಷ್ಟವಾಗುವ ಸಿಹಿ ತಿನಿಸಂತೆ. ಹಾಗಾಗಿ ಉತ್ತರ ಭಾರತದವರು ದೇವರ ನೈವೇದ್ಯಕ್ಕೆ ಹೆಚ್ಚಾಗಿ ಅಕ್ಕಿ ಖೀರನ್ನೇ ಮಾಡಿಡುತ್ತಾರೆ. ಕಬ್ಬು ಅಥವಾ ಕಬ್ಬಿನ ಹಾಲು, ಕೊಬ್ಬರಿಯಿಂದ ಮಾಡಿದ ಸಿಹಿ ಮಿಠಾಯಿ, ತೆಂಗಿನ ಕಾಯಿ, ಬಾಳೆ ಹಣ್ಣು, ಎಲೆ ಅಡಿಕೆ ಇತ್ಯಾದಿ ತಾಯಿಯ ನೈವೇದ್ಯಕ್ಕೆ ಇಡಲಾಗುತ್ತದೆ.