Wednesday, October 15, 2025

Latest Posts

ನ.1ರಂದು ಪೊಲೀಸ್ ಕವಾಯತು ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ: ಡಾ. ಎಚ್.ಎನ್ ಗೋಪಾಲಕೃಷ್ಣ

- Advertisement -

ಜಿಲ್ಲೆಯ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 01 ರಂದು 67 ನೇ ಕನ್ನಡ ರಾಜ್ಯೋತ್ಸವವು ಬನ್ನೂರು ರಸ್ತೆಯಲ್ಲಿರುವ ಪೋಲಿಸ್ ಸಶಸ್ತ್ರ ಮೀಸಲು‌ ಪಡೆಯ  ಕವಾಯತು ಮೈದಾನದಲ್ಲಿ  ನಡೆಯಲಿದೆ.  ಸಾರ್ವಜನಿಕರು ಹೆಚ್ಚಿನ  ಸಂಖ್ಯೆಯಲ್ಲಿ ಭಾಗವಹಿಸಿ ಎಂದು  ಜಿಲ್ಲಾಧಿಕಾರಿ  ಡಾ. ಎಚ್.ಎನ್ ಗೋಪಾಲಕೃಷ್ಣ ರವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ 67 ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಸಂಬಂಧ  ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದ ಉದ್ಯಾನವನ ಮತ್ತು ಸರ್ಕಲ್ ಗಳಲ್ಲಿರುವ ಪ್ರತಿಮೆಗಳಿಗೆ ಹೂವಿನ ಹಾರದ ವ್ಯವಸ್ಥೆ ಮಾಡುವಂತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಲಾಯಿತು.

ಇಂದಿನ ಯುವ ಪೀಳಿಗೆಯೇ ಭಾರತದ ಸಂಪತ್ತು: ಕೃಷ್ಣ ಪಾಲ್ ಗುರ್ಜರ್..

ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಪಶು ಸಂಗೋಪನ ಇಲಾಖೆ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ವತಿಯಿಂದ ನಿರ್ಮಾಣ ಮಾಡಿರುವ  ಸ್ಥಬ್ಧ ಚಿತ್ರಗಳ ಮಾಹಿತಿಯನ್ನು ಇಲಾಖೆಯವರು ಮೆರವಣಿಗೆ ಉಪಸಮಿತಿಯ ಗಮನಕ್ಕೆ ಮುಂಚಿತವಾಗಿ ತಂದು ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಲಾಯಿತು.

ಉತ್ತಮ ರೀತಿಯಲ್ಲಿ ರಾಷ್ಟ್ರಗೀತೆ , ನಾಡಗೀತೆ ಮತ್ತು ರೈತ ಗೀತೆಯನ್ನು ಹಾಡಿಸಲು ಡಿಡಿಪಿಐ ಮತ್ತು  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರವರಿಗೆ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.

ನವೆಂಬರ್ 1 ರಂದು 7-30 ಕ್ಕೆ ಅಲಂಕೃತ ತಾಯಿ ಭುವನೇಶ್ವರಿಯ ಭಾವಚಿತ್ರದ ರಥಕ್ಕೆ ಪೂಜೆ ಸಲ್ಲಿಸಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮೆರವಣಿಗೆ ಚಾಲನೆ ನೀಡಲಾಗುವುದು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು, ಪೋಲಿಸ್ ಬ್ಯಾಂಡ್ ಸೆಟ್ ಸ್ಕೌಟ್ಸ್ ಮತ್ತು ಗೈಡ್ಸ್ , ಎನ್ ಸಿ ಸಿ ತಂಡ, ವಿವಿಧ ಇಲಾಖೆಗಳ ಸ್ಥಬ್ಧ ಚಿತ್ರಗಳು, ಕನ್ನಡ ರಾಜ್ಯೋತ್ಸವದ ಧ್ವಜ, ಕನ್ನಡ ಜಾಗೃತಿ ಫಲಕ, ಪರಿಸರ ಜಾಗೃತಿ ಫಲಕಗಳನ್ನು ಹಿಡಿದುಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ರೀತಿಯಲ್ಲಿ ಬ್ಯಾಂಡ್  ಸೆಟ್ ನೊಂದಿಗೆ ಮೆರವಣಿಗೆ ಏರ್ಪಾಡು ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳು: ಕೃಷ್ಣಪಾಲ್ ಗುರ್ಜರ್

ಜಿಲ್ಲಾಧಿಕಾರಿಗಳ ಕಚೇರಿಗೆ  ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಯ ಕಟ್ಟಡಗಳಿಗೆ ತಮ್ಮ ಇಲಾಖೆಯ ಹಂತದಲ್ಲಿ ವಿದ್ಯುತ್ ಅಲಂಕಾರ ಮಾಡಬೇಕು  ಎಂದರು. ಪೊಲೀಸ್ ಕವಾಯತು ಮೈದಾನದಲ್ಲಿ ಮೂಲ ಸೌಕರ್ಯಗಳಾದ ಶೌಚಾಲಯ, ಪಾರ್ಕಿಂಗ್, ಕುಡಿಯುವ ನೀರು ಹಾಗೂ ಉಪಾಹಾರ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಿ ಎಂದರು.

ಸಭೆಯಲ್ಲಿ  ಅಪರ ಜಿಲ್ಲಾಧಿಕಾರಿ ಡಾ. ಹೆಚ್ ಎಲ್ ನಾಗರಾಜು,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಎನ್. ಉದಯ್ ಕುಮಾರ್, ತಹಶೀಲ್ದಾರ್ ಕುಂ.ಇ.ಅಹಮದ್, ಡಿ.ಒ.ಎಸ್.ಪಿ ವೇಣುಗೋಪಾಲ್,ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜವರೇಗೌಡ,ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಸಹಾಯಕರಾದ ಸ್ವಾಮಿಗೌಡ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Latest Posts

Don't Miss