Saturday, July 27, 2024

Latest Posts

ಕರ್ನಾಟಕದಲ್ಲಿರುವ 10 ಪ್ರಮುಖ ದೇವಿ ದೇವಸ್ಥಾನಗಳ ಬಗ್ಗೆ ವಿಶೇಷ ಮಾಹಿತಿ- ಭಾಗ 2

- Advertisement -

ಮೊದಲ ಭಾಗದಲ್ಲಿ ನಾವು ಕರ್ನಾಟಕದಲ್ಲಿರುವ 5 ಪ್ರಸಿದ್ಧ ದೇವಿ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ನಾವು ಇನ್ನುಳಿದ 10 ದೇವಸ್ಥಾನಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಮಾರಿಕಾಂಬಾ ದೇವಸ್ಥಾನ, ಸವದತ್ತಿ ಎಲ್ಲಮ್ಮನ ದೇವಸ್ಥಾನ, ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಸಿಗಂದೂರು ಚೌಡೇಶ್ವರಿ ದೇವಸ್ಥಾನ. ಇಷ್ಟು ದೇವಸ್ಥಾನಗಳ ಬಗ್ಗೆ ಪುಟ್ಟ ಮಾಹಿತಿ ತಿಳಿಯೋಣ ಬನ್ನಿ..

6.. ಮಾರಿಕಾಂಬಾ ದೇವಸ್ಥಾನ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾರಿಕಾಂಬಾ ದೇವಸ್ಥಾನವಿದೆ. ದುರ್ಗಾದೇವಿಯ ಅವತಾರವಾಗಿರುವ ಮಾರಿಕಾಂಬಾ ಅಮ್ಮನ ದೇವಸ್ಥಾನಕ್ಕೆ ದೊಡ್ಡಮ್ಮನ ದೇವಸ್ಥಾನ ಎಂದು ಕರೆಯಲಾಗತ್ತೆ. ಇಲ್ಲಿ ವಿಜೃಂಭಣೆಯಿಂದ ಜಾತ್ರೆ ನೆರವೇರುತ್ತದೆ. ಒಂಭತ್ತು ದಿನಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯದ ಹಲವು ಭಾಗಗಳಿಂದ, ಲಕ್ಷಾಂತರ ಜನ ಭಕ್ತರು ಬರುತ್ತಾರೆ.

7.. ಸವದತ್ತಿ ಎಲ್ಲಮ್ಮನ ದೇವಸ್ಥಾನ. ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಎಲ್ಲಮ್ಮನ ದೇವಸ್ಥಾನವಿದೆ. ಈ ಸ್ಥಳವನ್ನ ಎಲ್ಲಮ್ಮನ ಗುಡ್ಡ ಅಂತಲೂ ಕರೆಯುತ್ತಾರೆ. ರೇಣುಕಾದೇವಿ ಇಲ್ಲಿ ಎಲ್ಲಮ್ಮನಾಗಿ ನೆಲೆನಿಂತು, ಭಕ್ತರನ್ನು ರಕ್ಷಿಸುತ್ತಿದ್ದಾಳೆಂಬ ನಂಬಿಕೆ ಇದೆ. ಇಲ್ಲಿ ಜೋಗತಿಯರು ಬಂದು ದೇವಿಯ ದರ್ಶನ ಪಡೆದು ಹೋಗುತ್ತಾರೆ. ಇಲ್ಲಿ ಸವದತ್ತಿ ಜಾತ್ರೆ ನಡೆಯುವ ಸಂದರ್ಭದಲ್ಲಿ, ಹಲವಾರು ಜನ ಸೇರುತ್ತಾರೆ.

8.. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ. ಇದು ಉಡುಪಿ ಜಿಲ್ಲೆಯ ಕೊಲ್ಲೂರಿನ ಸೌಪರ್ಣಿಕಾ ನದಿ ತೀರದಲ್ಲಿದೆ. ಕೋಲ ಮಹರ್ಷಿಗೆ ಮೂಕಾಸುರನೆಂಬ ರಾಕ್ಷಸ ತೊಂದರೆ ನೀಡುತ್ತಿದ್ದ, ಆಗ ಕೋಲ ಮಹರ್ಷಿಗಳು ಅಂಬಿಕೆಯನ್ನ ಸ್ಮರಿಸಿದರು. ಮೂಕಾಸುರ ತನಗೆ ಸಾವೆ ಬಾರದಂತೆ ವರ ಪಡೆಯಲು ತಪಸ್ಸು ಮಾಡಿದ. ದೇವರು ಪ್ರತ್ಯಕ್ಷನಾದಾಗ, ಅವನು ವರ ಕೇಳಬೇಕೆಂದು ಹೋದಾಗ, ಸರಸ್ವತಿ ಅವನ ನಾಲಿಗೆಯ ಮೇಲೆ ನಿಂತು, ಅವನ ಬಾಯಿಯಿಂದ ಮಾತು ಬಾರದಂತೆ ಮಾಡಿದಳು. ನಂತರ ಅಂಬಿಕೆ ಮೂಕಾಸುರನ ವಧೆ ಮಾಡಿ, ಮೂಕಾಂಬಿಕೆಯಾಗಿ, ಕೊಲ್ಲೂರಿನಲ್ಲಿ ನೆಲೆ ನಿಂತಳು.

9.. ಹೊರನಾಡು ಅನ್ನಪೂರ್ಣೇಶ್ವರಿ. ಚಿಕ್ಕ ಮಗಳೂರಿನ ಹೊರನಾಡಿನಲ್ಲಿ, ಭದ್ರಾನದಿ ದಡದಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನವಿದೆ. 8ನೇ ಶತಮಾನದಲ್ಲಿ ಅಗಸ್ತ್ಯ ಮುನಿಗಳು ಇಲ್ಲಿ ಅನ್ನಪೂರ್ಣೇಶ್ವರಿಯ ಮೂರ್ತಿಯನ್ನ ಪ್ರತಿಷ್ಠಾಪಿಸಿದರು. ಶಿವ ಮತ್ತು ಪಾರ್ವತಿಯ ನಡುವೆ ವಾಗ್ವಾದ ನಡೆದು, ಆಹಾರಕ್ಕೆ ಹಾಹಾಕಾರಪಡುವಂತಾಗಿ, ನಂತರ ಶಿವ ಅನ್ನಪೂರ್ಣೇಶ್ವರಿ ದೇವಿಯ ಬಳಿಯೇ ಧಾನ್ಯವನ್ನು ಪಡೆದು, ಶಿವನ ಶಾಪ ನೀಗಿತು.

10.. ಸಿಗಂದೂರು ಚೌಡೇಶ್ವರಿ. ಶಿವಮೊಗ್ಗದ ಸಾಗರ ತಾಲೂಕಿನಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನವಿದೆ. 300 ವರ್ಷಗಳ ಹಿಂದೆ ಶರಾವತಿ ನದಿ ತೀರದಲ್ಲಿ, ದೇವಿಯ ವಿಗ್ರಹ ಸಿಕ್ಕಿತೆಂದು ಹೇಳಲಾಗಿದೆ. ಶೇಷಪ್ಪ ಎಂಬುವವರಿಗೆ ದೇವಿ ಸೂಚನೆ ಕೊಟ್ಟ ಕಾರಣ, ಅವರು ಇಲ್ಲಿ ದೇವಸ್ಥಾನ ಕಟ್ಟಿಸಿ, ದೇವಿಯ ಪೂಜೆ ಮಾಡಿಸಲು ಶುರು ಮಾಡಿದರು.

- Advertisement -

Latest Posts

Don't Miss