Sunday, September 8, 2024

Latest Posts

ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 6

- Advertisement -

ಭಾಗ ಒಂದು, ಎರಡು, ಮೂರು, ನಾಲ್ಕು ಮತ್ತು ಐದನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 20 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಆರನೇಯ ಭಾಗದಲ್ಲಿ ವಿಷ್ಣುವಿನ ಉಳಿದ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.

ಇಪ್ಪತ್ತೊಂದನೇಯ ಅವತಾರ ಶ್ರೀ ಕೃಷ್ಣ. ಅಧರ್ಮದ ನಾಶ ಮಾಡಲು ಬಂದವನೇ ಭಗವಾನ್ ಶ್ರೀಕೃಷ್ಣ. ವಾಸುದೇವ ಮತ್ತು ದೇವಕಿಯ ಎಂಟನೇ ಪುತ್ರನಾಗಿ ಕಾರಾಗೃಹದಲ್ಲಿ ಜನಿಸಿದವನೇ ಶ್ರೀಕೃಷ್ಣ. ಕಂಸ ವಧೆಗಾಗಿ ಶ್ರೀಕೃಷ್ಣನ ಜನ್ಮವಾಗಿದ್ದರೂ, ಭಗವದ್ಗೀತೆಯ ಜ್ಞಾನವನ್ನು ಸಾರಿದ. ಅರ್ಜುನನಿಗೆ ಸಾರಥಿಯಾಗಿ, ಮಹಾಭಾರತ ಯುದ್ಧ ಪಾಂಡವರೇ ಗೆಲ್ಲುವಂತೆ ಮಾಡಿದ. ಹಲವು ರಾಕ್ಷಸರ ನಾಶ ಮಾಡಿದ.

ಇಪ್ಪತ್ತೆರಡನೇಯ ಅವತಾರ ಭಗವಾನ್ ಬುದ್ಧನ ಅವತಾರ. ರಾಕ್ಷಸರೂ ಬಲಿಷ್ಠರಾಗುವುದಕ್ಕೆ ವೇದಿಕ ಆಚರಣೆ, ಯಜ್ಞ ಯಾಗಾದಿಗಳನ್ನು ಮಾಡಲು ಆರಂಭಿಸಿದರು. ಇದನ್ನು ತಡೆಯುವುದಕ್ಕಾಗಿ ಮತ್ತು ಲೋಕದಲ್ಲಿ ಶಾಂತಿ ಸ್ಥಾಪಿಸಲು ಜನಿಸಿದವನೇ ಬುದ್ಧ.

ಇಪ್ಪತ್ಮೂರನೇಯ ಅವತಾರ ಬಲರಾಮನ ಅವತಾರ. ಕೆಲ ಕಥೆಗಳ ಪ್ರಕಾರ ಕೃಷ್ಣನ ಅಣ್ಣದಾಗ ಬಲರಾಮನೂ ವಿಷ್ಣುವಿನ ಅವತಾರವೆಂದು ಹೇಳಲಾಗತ್ತೆ. ಮತ್ತು ಆದಿಶೇಷನ ಅವತಾರವೆಂದೂ ಕೂಡ ಹೇಳಲಾಗಿದೆ.

ಇಪ್ಪತ್ನಾಲ್ಕನೇಯ ಅವತಾರ ಕಲ್ಕಿ ಅವತಾರ.ಧರ್ಮಗ್ರಂಥಗಳ ಪ್ರಕಾರ, ಕಲಿಯುಗದಲ್ಲಿ ಶ್ರೀ ವಿಷ್ಣು ಕಲ್ಕಿ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾನಂತೆ. ದೇವದತ್ತನೆಂಬ ಕುದುರೆಯ ಮೇಲೆ ಸವಾರಿ ಮಾಡುತ್ತ, ಕಲ್ಕಿ ದುರ್ಜನರ ವಿನಾಶ ಮಾಡುತ್ತಾನೆಂದು ಹೇಳಲಾಗಿದೆ.

ಇವಿಷ್ಟು ಶ್ರೀ ವಿಷ್ಣುವಿನ 24 ಅವತಾರಗಳ ಬಗೆಗಿನ ಸಂಪೂರ್ಣ ಮಾಹಿತಿ.

- Advertisement -

Latest Posts

Don't Miss