ಹಿಂದೂ ಧರ್ಮದ ದೇವರ ಬಗ್ಗೆ ಇರುವ ಹಲವು ಪೌರಾಣಿಕ ಹಿನ್ನೆಲೆಯಲ್ಲಿ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದರಲ್ಲಿ ಶಿವನ ಅವತಾರವೂ ಒಂದು. ಇದೇ ಮಹಾಶಿವರಾತ್ರಿಯ ಸಮಯದಲ್ಲಿ ನಾವು ಶಿವನ 19 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೆವು. ಅದೇ ರೀತಿ ಇಂದು ನಾವು ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ. ಮೊದಲ ಭಾಗದಲ್ಲಿ ಶ್ರೀ ವಿಷ್ಣುವಿನ 4 ಅವತಾರಗಳ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯ ಅವತಾರ ಶ್ರೀ ಸನಕಾದಿ ಮುನಿ. ಭಗವಾನ್ ವಿಷ್ಣುವಿನ ಸರ್‌ವ ಪ್ರಥಮಮ ಅವತಾರವಿದು. ಬ್ರಹ್ಮನ ತಪಸ್ಸಿಗೆ ಪ್ರಸನ್ನನಾದ ಶ್ರೀ ವಿಷ್ಣು ಈ ಅವತಾರವನ್ನು ತಾಳಿದ. ಸನಕಾದಿ ಮುನಿ ಅಂದ್ರೆ ನಾಲ್ಕು ಮಕ್ಕಳ ಅವತಾರ. ಸನಕ, ಸನಂದನ, ಸನಾತನ, ಸನತ್ಕುಮಾರ ಎಂಬ ಹೆಸರಿನ ಮಕ್ಕಳ ರೂಪದಲ್ಲಿ ವಿಷ್ಣು ಜನ್ಮ ತಾಳಿದ. ಹೀಗಾಗಿ ಇವರನ್ನ ಸನಕಾದಿ ಮುನಿ ಎಂದು ಕರೆಯಲಾಗತ್ತೆ.
ಎರಡನೇಯ ಅವತಾರ ವರಾಹ ಅವತಾರ. ರಾಕ್ಷಸ ಹಿರಣ್ಯಾಕ್ಷ ಭೂಮಿಯನ್ನ ತೆಗೆದುಕೊಂಡು ಹೋಗಿ, ಸಮುದ್ರದಲ್ಲಿ ಮುಚ್ಚಿಡುತ್ತಾನೆ. ಆಗ ವರಾಹ ರೂಪ ತಾಳಿದ ವಿಷ್ಣು, ಬ್ರಹ್ಮನ ಮೂಗಿನಿಂದ ಜನ್ಮ ತಾಳುತ್ತಾರೆ. ವರಾಹ ಅಂದ್ರೆ ಹಂದಿಯ ಮುಖ ಹೊಂದಿದ ಮನುಷ್ಯನ ರೂಪ. ವರಾಹ ಸ್ವಾಮಿ, ಸಮುದ್ರದಲ್ಲಿ ಹೋಗಿ, ಭೂಮಿಯನ್ನು ಹೊರ ತಂದರು. ಆಗ ಹಿರಣ್ಯಾಕ್ಷ ಮತ್ತು ವರಾಹ ಸ್ವಾಮಿ ನಡುವೆ ಯುದ್ಧ ನಡೆಯಿತು. ವರಾಹ ಸ್ವಾಮಿ ಹಿರಣ್ಯಾಕ್ಷನ ಸಂಹಾರ ಮಾಡಿದರು.
ಮೂರನೇಯ ಅವತಾರ ನಾರದ ಅವತಾರ. ಧರ್ಮ ಗ್ರಂಥದ ಅನುಸಾರ ನಾರದ ಮುನಿಗಳು ವಿಷ್ಣುವಿನ ಅಂಶವಾಗಿದ್ದು, ಮಾನಸ ಪುತ್ರರಾಗಿದ್ದಾರೆ. ಕಠಿಣ ತಪಸ್ಸಿನ ಫಲವಾಗಿ ದೇವ ಋಷಿ ಎಂಬ ಬಿರುದನ್ನು ಪಡೆದವರು ನಾರದರು. ಶ್ರೀ ವಿಷ್ಣುವಿನ ಪರಮ ಭಕ್ತರದಲ್ಲಿ ನಾರದರೂ ಒಬ್ಬರು.
ನಾಲ್ಕನೇಯ ಅವತಾರ ನರ- ನಾರಾಯಣ. ಸೃಷ್ಟಿಯ ಆರಂಭದಲ್ಲಿ ಧರ್ಮಸ್ಥಾಪನೆಗಾಗಿ ವಿಷ್ಣು ನರ ನಾರಾಯಣನ ರೂಪ ಧಾರಣೆ ಮಾಡಿದ.
ಇವಿಷ್ಟು ಶ್ರೀ ವಿಷ್ಣುವಿನ 24 ಅವತಾರಗಳಲ್ಲಿ ನಾಲ್ಕು ಅವತಾರಗಳ ಬಗೆಗಿನ ಮಾಹಿತಿ. ಮುಂದಿನ ಭಾಗದಲ್ಲಿ ಇನ್ನೂ ನಾಲ್ಕು ಅವತಾರಗಳ ಬಗ್ಗೆ ತಿಳಿಯೋಣ.