ಇದೇ ಏಪ್ರಿಲ್ 22ರಂದು ರಂಜಾನ್ ಹಬ್ಬವಿದೆ. ಒಂದು ತಿಂಗಳ ಉಪವಾಸ ಮುಗಿಸಿ, ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಆಚರಿಸುತ್ತಾರೆ. ಇಂದು ನಾವು ರಂಜಾನ್ ಹಬ್ಬದ ಮಹತ್ವವೇನು..? ರಂಜಾನ್ ಉಪವಾಸದ ಹಿಂದಿರುವ ವೈಜ್ಞಾನಿಕ ಸತ್ಯವೇನು ಎಂದು ಹೇಳಲಿದ್ದೇವೆ..
ಚಂದ್ರನನ್ನು ನೋಡಿ ರಂಜಾನ್ ರೋಜಾ ಅಂದ್ರೆ ರಂಜಾನ್ ಉಪವಾಸ ಶುರುವಾಗುತ್ತದೆ. ಅದೇ ರೀತಿ ರಂಜಾನ್ ಹಬ್ಬದ ಮುನ್ನಾ ದಿನ ಚಂದ್ರನನ್ನು ನೋಡುವ ಮೂಲಕವೇ ಉಪವಾಸ ಮುರಿದು, ಮರುದಿನ ರಂಜಾನ್ ಆಚರಿಸಲಾಗುತ್ತದೆ. ಈ ರೋಜಾ ಮಾಡುವ ಒಂದು ತಿಂಗಳು ಮುಸ್ಲಿಂ ಬಾಂಧವರು ಸಹರಿ ಮತ್ತು ಇಫ್ತಾರ್ ಮಾಡಿ ಆಹಾರ ಸೇವಿಸುತ್ತಾರೆ. ಸಹರಿ ಎಂದರೆ, ಬೆಳಿಗ್ಗೆ ಸೂರ್ಯೋದಯವಾಗುವ ಮುನ್ನವೇ ಆಹಾರ ಸೇವಿಸಲಾಗುತ್ತದೆ.
ನಂತರ ಉಪವಾಸ ಶುರುವಾಗುತ್ತದೆ. ಈ ವೇಳೆ ಅವರು ಒಂದು ಗುಟುಕು ನೀರು ಸಹ ಕುಡಿಯುವುದಿಲ್ಲ. ಅಲ್ಲದೇ ಎಂಜಿಲನ್ನ ಸಹ ನುಂಗುವುದಿಲ್ಲ ಅಂತಾ ಹೇಳಲಾಗುತ್ತದೆ. ನಂತರ ಸಂಜೆ ಸೂರ್ಯಾಸ್ತದ ಸಮಯಕ್ಕೆ ಉಪವಾಸ ಮುರಿದು, ಇಫ್ತಾರ್ ಕೂಟದಲ್ಲಿ ಆಹಾರ ಸೇವನೆ ಮಾಡಲಾಗುತ್ತದೆ. ಇಫ್ತಾರ್ ಮಾಡುವ ಮುನ್ನ ಖರ್ಜೂರ ಸೇವಿಸುವುದರ ಮೂಲಕ ಉಪವಾಸ ಮುರಿಯುತ್ತಾರೆ. ಯಾಕಂದ್ರೆ ಉಪವಾಸ ಮಾಡಿದಾಗ ಖಾಲಿ ಹೊಟ್ಟೆ ಇರುತ್ತಾರೆ. ಈ ವೇಳೆ ಮೈಯಲ್ಲಿರುವ ಶಕ್ತಿ ಕುಂದಿಹೋಗಿರುತ್ತದೆ. ಖರ್ಜೂರ ಸೇವನೆಯಿಂದ ದೇಹದಲ್ಲಿ ಶಕ್ತಿ ಬರುತ್ತದೆ.
ಅಲ್ಲದೇ, ಕೆಲವರಿಗೆ ಉಪವಾಸ ಮುರಿದು ಬೇರೆ ಆಹಾರ ಸೇವಿಸಿದಾಗ, ವಾಂತಿಯಾಗುವ, ಆರೋಗ್ಯ ಹಾಳಾಗುವ ಸಂಭವವಿರುತ್ತದೆ. ಹಾಗಾಗಿ ಖರ್ಜೂರ ತಿಂದು ನಂತರವೇ ಬೇರೆ ಆಹಾರವನ್ನ ಸೇವಿಸಲಾಗುತ್ತದೆ. ರಂಜಾನ್ ಹಬ್ಬದ ದಿನ ಬಿರಿಯಾನಿ ಮತ್ತು ಶೇರ್ಕೂರ್ಮಾ ಎನ್ನುವ ಪದಾರ್ಥವೇ, ಮುಸ್ಲಿಂರಿಗೆ ವಿಶೇಷ ಊಟವಾಗಿದೆ. ರಂಜಾನ್ ಪ್ರಾರ್ಥನೆ ಸಲ್ಲಿಸಿದ ಬಳಿಕ, ಆತ್ಮೀಯರು, ಸಂಬಂಧಿಕರನ್ನ ಭೇಟಿ ಮಾಡಿ, ಸಿಹಿ ತಿಂಡಿ, ಉಡುಗೊರೆ ನೀಡಿ, ಸಂಭ್ರಮಿಸುತ್ತಾರೆ.
ಈ ದಿನ ಬಡಬಗ್ಗರಿಗೆ ದಾನ ಮಾಡಿದರೆ, ಪುಣ್ಯ ಲಭಿಸುತ್ತದೆ ಅನ್ನೋ ನಂಬಿಕೆ ಇದೆ. ಕೆಲ ಮುಸ್ಲಿಂರಿಗೆ ರಂಜಾನ್ ಹಬ್ಬ ಲಕ್ಕಿ ದಿನವಾಗಿದೆ. ಈ ದಿನ ಹಲವರು ಹೊಸ ಹೊಸ ವ್ಯಾಪಾರ ಆರಂಭಿಸುತ್ತಾರೆ. ಹೀಗೆ ಉದ್ಯಮ ಆರಂಭಿಸಿದ ಹಲವರು ಯಶಸ್ಸು ಪಡೆದಿರುವ ಉದಾಹರಣೆಗಳಿದೆ. ಬಾಲಿವುಡ್ ಹೀರೋ ಸಲ್ಮಾನ್ ಖಾನ್, ಪ್ರತೀ ರಂಜಾನ್ ಹಬ್ಬದಂದೇ ತಮ್ಮ ಸಿನಿಮಾ ರಿಲೀಸ್ ಮಾಡುತ್ತಾರೆ.
ಮತ್ತೆ ಮದುವೆ ಟೀಸರ್ ರಿಲೀಸ್: ನರೇಶ್-ಪವಿತ್ರಾ ಲಾಡ್ಜ್ ದೃಶ್ಯ ರಿಕ್ರಿಯೇಟ್..
‘ನಿಮ್ಮ ಕಾಂಗ್ರೆಸ್ಸಿನ ಗುಂಡಿಯಲ್ಲಿ ನೀರಿಲ್ಲ. ಅದರ ಬಗ್ಗೆ ಚಿಂತನೆ ಮಾಡಿ’
‘ಕಾಂಗ್ರೆಸ್ ಹಣ ಪಡೆದು, ಬಿ ಫಾರ್ಮ್ ವಿತರಣೆ ಮಾಡಿದೆ. ಅವರ 224 ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಿ’