Friday, October 18, 2024

Latest Posts

ಕ್ಷೌರಿಕ ಕೋಟ್ಯಾಧಿಪತಿಯಾಗಿದ್ದಾದರೂ ಹೇಗೆ..? ಇಲ್ಲಿದೆ ನೋಡಿ ರೋಚಕ ಕಥೆ…

- Advertisement -

ಮೊದಲ ಭಾಗದಲ್ಲಿ ನಾವು ಟ್ಯಾಕ್ಸ್ ಕಟ್ಟದೇ, ಜುಮ್ ಎಂದು ಮೆರೆಯುತ್ತಿದ್ದ ಬಡ ಕೋಟ್ಯಾಧಿಪತಿಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಮುಂದುವರಿದ ಭಾಗದಲ್ಲಿ ಸಣ್ಣ ಕೆಲಸ ಶುರುಮಾಡಿ, ಕೋಟ್ಯಾಧಿಪತಿಗಳಾಗಿರುವ, ಟ್ಯಾಕ್ಸ್ ಕಟ್ಟುತ್ತಿರುವ ಫೇಮಸ್ ವ್ಯಕ್ತಿಗಳ ಬಗ್ಗೆ ತಿಳಿಯೋಣ.

ಇದು ರಮೇಶ್ ಎಂಬ ಕ್ಷೌರಿಕ, ಕೋಟ್ಯಾಧಿಪತಿಯಾಗಿ, ರೋಲ್ಸ್ ರಾಯಲ್ಸ್ ಗಾಡಿ ಖರೀದಿಸಿದ ಕಥೆ. ಬೆಂಗಳೂರು ನಿವಾಸಿ ರಮೇಶ್ ತಮ್ಮ 14ನೇ ವಯಸ್ಸಿನಲ್ಲೇ ನ್ಯೂಸ್ ಪೇಪರ್, ಹಾಲು ಮಾರಾಟ ಮಾಡಲು ಪ್ರಾರಂಭಿಸಿದರು. ಇದರಿಂದ ಅವರಿಗೆ ತಿಂಗಳಿಗೆ 100 ರೂಪಾಯಿ ಸಂಬಳ ಸಿಗುತ್ತಿತ್ತಂತೆ. ತಂದೆಯ ಸಾವಿನ ಬಳಿಕ, ಅವರು ನಡೆಸುತ್ತಿದ್ದ, ಸಲೂನ್ ಶಾಪ್ ಜವಾಬ್ದಾರಿ ಕೈಗೆತ್ತಿಕೊಂಡು, ನಡೆಸಲು ಶುರು ಮಾಡಿದರು.

ಈ ಕೆಲಸ ಕೈ ಹಿಡಿದ ಬಳಿಕ, ನಾಲ್ಕು ಜನರನ್ನ ಕೆಲಸಕ್ಕೆ ಇಟ್ಟುಕೊಂಡು, ಇನ್ನೂ ಹೆಚ್ಚು ದುಡಿಯಲು ಶುರು ಮಾಡಿದರು. ಹೀಗೆ ಮಾಡಿ, ಮಾಡಿ ತಾವು ದುಡಿದ ಹಣದಿಂದ ಹಲವಾರು ಐಶಾರಾಮಿ ಕಾರುಗಳನ್ನು ಖರೀದಿ ಮಾಡಿದರು. ನಂತರ ಆ ಕಾರನ್ನು ಬಾಡಿಗೆಗೆ ಕೊಟ್ಟು, ಅದರಿಂದ ಬಂದ ಹಣದಿಂದ ರಮೇಶ್ ಕೋಟ್ಯಾಧಿಪತಿಯಾಗಿದ್ದಾರೆ.

ಇನ್ನು ಇವರ ಸಲೂನ್ ಶಾಪ್ ನೋಡಿ ನೀವು, ಇವರು ಹೇರ್‌ ಕಟಿಂಗ್ ಮಾಡಲು ತುಂಬಾ ದುಡ್ಡು ತೊಗೊಳ್ತಾರೆ ಅಂತಾ ಅಂದುಕೊಳ್ಳ ಬಹುದು. ಆದ್ರೆ ರಮೇಶ್ ಒಬ್ಬರಿಗೆ ಹೇರ್ ಕಟಿಂಗ್ ಮಾಡಿದ್ರೆ, ಕೇವಲ 150 ರೂಪಾಯಿ ತೆಗೆದುಕೊಳ್ಳುತ್ತಾರೆ. ಇನ್ನು ರಮೇಶ್ ಅವರ ಜರ್ನಿ ಈಸಿಯಾಗಿರಲಿಲ್ಲ. ಇವರು ಮೊದಲು ಓಮಮಿನಿ ಗಾಡಿ ತೆಗೆದುಕೊಂಡಾಗ, ಇವರಿಗೆ ಅದರ ಲೋನ್ ತೀರಿಸಲು ಸಾಧ್ಯವಾಗಲಿಲ್ಲ. ಆಗ ಪರಿಚಯದವರು ಹೇಳಿದ ಕಾರಣ, ಆ ಗಾಡಿಯನ್ನ ರೆಂಟ್‌ಗೆ ಕೊಡೋಕ್ಕೆ ಶುರು ಮಾಡಿದ್ರು. ಹೀಗೆ ಮಾಡಿ, ಲೋನ್ ತೀರಿಸಿದ ರಮೇಶ್, ಇದನ್ನೇ ಉದ್ಯಮವನ್ನಾಗಿ ಮಾಡಿಕೊಂಡರು.

ಇನ್ನು ಎಂಬಿಎ ಮಾಡಲು ಹೋಗಿ, ತನಗೆ ಬೇಕಾದ ಕಾಲೇಜಿನಲ್ಲಿ ಸೀಟ್ ಸಿಗದ ಕಾರಣ, ಆ ಕನಸನ್ನೇ ಬಿಟ್ಟು, ಚಾ ಮಾರಲು ಹೊರಟನೋರ್ವ ಯುವಕ. ಹೀಗೆ ಚಾ ಅಂಗಡಿ ಇಟ್ಟ ಯುವಕ, ಕೋಟ್ಯಾಧಿಪತಿಯಾಗಿದ್ದು ಹೇಗೆ ಅನ್ನೋ ಬಗ್ಗೆ ಮೂರನೇ ಭಾಗದಲ್ಲಿ ತಿಳಿಯೋಣ.

- Advertisement -

Latest Posts

Don't Miss