Wednesday, October 15, 2025

Latest Posts

ಸದ್ದಿಲ್ಲದೆ ಶುರುವಾಯಿತು “ಶರ”…

- Advertisement -

ಕೊರೋನ ನಂತರ ಸಾಲು ಸಾಲು ಹೊಸ ಚಿತ್ರಗಳು ಆರಂಭವಾಗುತ್ತಿದೆ. ಹೊಸ ಪ್ರಯತ್ನದೊಂದಿಗೆ ಬರುತ್ತಿರುವ ಹೊಸಬರ ಮೇಲೆ ಸಾಕಷ್ಟು ನಿರೀಕ್ಷೆ ಸಹ ಇದೆ.

ಈ ಪೈಕಿ ಮತ್ತೊಂದು ಹೊಸತಂಡದ ಹೊಸಪ್ರಯತ್ನ “ಶರ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಪ್ರತ್ಯಂಗಿರ ದೇವಿ ದೇವಸ್ಥಾನದಲ್ಲಿ ನಡೆಯಿತು. ಡ್ರೀಮ್ಸ್ ಕ್ಯಾಪ್ಚರ್ ಮೂವಿ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಎಸ್ ಎಸ್ ಪ್ರಕಾಶ್ ರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಮೊದಲ ನಿರ್ದೇಶನದ ಚಿತ್ರಕ್ಕೆ “ಶರ” ಎಂದು ಶೀರ್ಷಿಕೆ ಇಟ್ಟಿದ್ದಾರೆ. “ಶರ” ಚಿತ್ರಕ್ಕೆ “ತಾಯಿಯಿಂದ ಜನನ, ಪ್ರೇಯಸಿಯಿಂದ ಮರಣ” ಎಂಬ ಅಡಿಬರಹವಿದೆ.

ಕ್ರಿಯೇಟಿವ್ ಹೆಡ್ ಆಗಿ ಮುರಳಿ S Y. ಬೆಂಬಲ ನೀಡುತ್ತಿದ್ದಾರೆ. ಸಹ ನಿರ್ಮಾಪಕರಾಗಿ ಸುನಿಲ್ ಎಂ,
H M ಹರೀಶ್ ಗೌಡ್ರು,ಮಂಜುನಾಥ್ ಎಸ್ ಪಿ ಇದ್ದಾರೆ.

ಪ್ರಶಾಂತ ಜೈ ನಾಯಕನಾಗಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ರಕ್ಷಾ ಡಿ.ಎನ್ ಹಾಗೂ ಲಾವಣ್ಯ ಈ ಚಿತ್ರದ ನಾಯಕಿಯರು. ಅಭಿಷೇಕ್ ಸಂಗೀತ ನಿರ್ದೇಶನ ಹಾಗೂ ಸಾಮ್ರಾಟ್ ನಾಗರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಅಕ್ಟೋಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹಂಚಿನ ಸಿದ್ದಾಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಸಜ್ಜಾಗಿದೆ.

- Advertisement -

Latest Posts

Don't Miss