Thursday, October 16, 2025

Latest Posts

ಅಸ್ವಸ್ಥಗೊಂಡಿದ್ದ ನವಿಲಿನ ರಕ್ಷಣೆ…!

- Advertisement -

ರಾಯಚೂರು:   ರಸ್ತೆಯ ಬದಿಯಲ್ಲಿ ಅಸ್ವಸ್ಥವಾಗಿ ಬಿದ್ದಿದ್ದ ನವಿಲನ್ನು ವ್ಯಕ್ತಿಯೊಬ್ಬರು ಆರೈಕೆ ಮಾಡಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಾಪೂರು ಸೀಮೆಯ ಹೊರವಲಯದಲ್ಲಿ ಕಳೆದ 10 ದಿನಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಅಸ್ವಸ್ಥ ಸ್ಥಿತಿಯಲ್ಲಿ ನವಿಲೊಂದು ಪತ್ತೆಯಾಗಿತ್ತು. ಅಸ್ವಸ್ಥಗೊಂಡ ನವಿಲನ್ನು ಸಲಾಲುದ್ದೀನ್ ಎಂಬುವರು ತಮ್ಮ ಮನೆಗೆ ಕರೆದೊಯ್ದಿದ್ದರು. ನವಿಲಿನ ಆರೈಕೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಯ ನೆರವನ್ನೂ ಪಡೆದ ಸಲಾಲುದ್ದೀನ್, ದಿನ ಬಿಟ್ಟು ದಿನ ಅದಕ್ಕೆ ಇನ್ಜೆಂಕ್ಷನ್ ಕೂಡ ಕೊಡಿಸಿದ್ದಾರೆ. ಸದ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿರೋ ಈ ಗಂಡು ನವಿಲನ್ನು ವಲಯ ಅರಣ್ಯಾಧಿಕಾರಿಯ ಸುಪರ್ದಿಗೆ ಒಪ್ಪಿಸಲಾಯ್ತು ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಪ್ರದೇಶಕ್ಕೆ ನವಿಲನ್ನು ಕೊಂಡೊಯ್ದು ಬಿಟ್ಟಿದ್ದಾರೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss